ಉದ್ಯಮಿ ಕೆ.ಗುರುಮೂರ್ತಿ ನಿಧನ
ಬೀದರ್,ಜು.10-ಇಲ್ಲಿಯ ಖ್ಯಾತ ಹೋಟೆಲ್ ಉದ್ಯಮಿ ಕೆ.ಗುರುಮೂರ್ತಿ (61) ಮಂಗಳವಾರ ನಿಧನರಾದರು.
ಮೂಲತಃ ಉಡುಪಿ ಜಿಲ್ಲೆಯ ಕಬ್ಬಿನಾಲೆ ಗ್ರಾಮದವರಾಗಿದ್ದ ಅವರು ನಗರದ ಬ್ರಹ್ಮಪುರ ಕಾಲೊನಿಯಲ್ಲಿ ನೆಲೆಸಿದ್ದರು. ಶ್ರೀ ಸಿದ್ದಿ ವಿನಾಯಕ ಉಡುಪಿ ಹೊಟೇಲ್ ಮಾಲೀಕರಾಗಿದ್ದರು. ನಾಲ್ಕು ದಶಕಗಳ ಕಾಲ ಹೋಟೆಲ್ ಉದ್ಯಮ ಮುನ್ನಡೆಸಿದ್ದರು.
ದಕ್ಷಿಣ ಕರಾವಳಿ ಕನ್ನಡ ಸಂಘದ ಸಂಸ್ಥಾಪಕರಾಗಿದ್ದರು. ಕಲೆ, ಸಾಹಿತ್ಯ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಿಗೆ ಪೆÇ್ರೀತ್ಸಾಹ ಮತ್ತು ಕಾರ್ಯಕ್ರಮಗಳ ಸಂಘಟನೆ ಮೂಲಕ ಜಿಲ್ಲೆಯ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದರು.
ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಕಬ್ಬಿನಾಲೆಯಲ್ಲಿ ಬುಧವಾರ (ಜು. 10) ಮಧ್ಯಾಹ್ನ 1ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.