ಕೃಷ್ಣೆಯ ಉಗಮಸ್ಥಾನದಲ್ಲಿ ಗಂಗಾ ಪೂಜೆ
ಕೊಲ್ಹಾರ:ಜು.10: ಕೃಷ್ಣೆಯ ಉಗಮಸ್ಥಾನ ಮಹಾಬಳೇಶ್ವರದಲ್ಲಿ ಜುಲೈ 21 ರಂದು ಗಂಗಾಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ತಮ್ಮ ಸ್ವಗ್ರಹದಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಂಡು ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವು ಕೂಡ ಕೃಷ್ಣೆಯ ಉಗಮಸ್ಥಾನದಲ್ಲಿ ರೈತ ಬಾಂಧವರೊಂದಿಗೆ ಗಂಗಾ ಪೂಜೆ ಸಲ್ಲಿಸಲಾಗುವುದು.
ಜುಲೈ 20 ರಂದು ವಿಜಯಪುರ ಪ್ರವಾಸಿ ಮಂದಿರದಿಂದ ಪ್ರಯಾಣ ಬೆಳೆಸಲಾಗುವುದು ಆಸಕ್ತರು ಗಂಗಾಪೂಜೆಯಲ್ಲಿ ಪಾಲ್ಗೊಳ್ಳಬಹುದು ಎಂದು ಅವರು ಹೇಳಿದರು.
ಆಸಕ್ತರು ದೂ:9845769528, 9922815920, 8861352207 ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಿದ್ಧರಾಮ ಕಾಖಂಡಕಿ, ಪ.ಪಂ ಮಾಜಿ ಅಧ್ಯಕ್ಷರಾದ ಕಲ್ವಪ್ಪ ಸೊನ್ನದ, ವಿರೂಪಾಕ್ಷಿ ಕೋಲಕಾರ, ಶೇಕು ಗಾಣಗೇರ, ಪ.ಪಂ ಸದಸ್ಯರಾದ ಶ್ರೀಶೈಲ ಅಥಣಿ, ಬಾಬು ಬಜಂತ್ರಿ, ಅಶೋಕ ಗಿಡ್ಡಪ್ಪಗೋಳ, ಈರಪ್ಪ ಜಿಡ್ಡಿಬಾಗಿಲ, ಆನಂದ ಬೀಷ್ಟಗೊಂಡ ಹಾಗೂ ಇನ್ನಿತರರು ಇದ್ದರು.
