ನಗರದಲ್ಲಿ ಐದು ಅಗ್ನಿಶಾಮಕ ಠಾಣೆ ಆರಂಭಿಸಲು ಆಗ್ರಹ
ಕಲಬುರಗಿ,ಸೆ.27: ನಗರದಲ್ಲಿ ತಕ್ಷಣವೇ ಜನರ ಆಸ್ತಿಪಾಸ್ತಿ ರಕ್ಷಣೆಗಾಗಿ 5 ಅಗ್ನಿಶಾಮಕ ಠಾಣೆಗಳನ್ನು ಆರಂಭಿಸಬೇಕು. ಜೊತೆಗೆ ಒಬ್ಬರು ಐಪಿಎಸ್ ಅಧಿಕಾರಿಯನ್ನು ಅಗ್ನಿಶಾಮಕ ಇಲಾಖೆಗೆ ನೇಮಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ ಎಸ್ ಪಾಟೀಲ ನರಿಬೋಳ ಆಗ್ರಹಿಸಿದ್ದಾರೆ.
ಈ ಕುರಿತು ಜನಪ್ರತಿನಿಧಿಗಳು ಎಚ್ಚರಗೊಂಡು ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡಬೇಕು. ನಿರ್ಲಕ್ಷಿಸಿದರೆ ಸಮಾನ ಮನಸ್ಕ ಸಂಘಟನೆಗಳು ಚಿಂತಕರು ಸಾಹಿತಿಗಳು ವಿವಿಧ ಕ್ಷೇತ್ರದ ಪ್ರಮುಖರನ್ನು ಸೇರಿಸಿಕೊಂಡು ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಕಲಬುರಗಿ ನಗರವು ಕರ್ನಾಟಕ ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಗಳಲ್ಲೊಂದು ನಗರವು ಸುಮಾರು 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದೆ. ದಿನೇ ದಿನ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದೆ.ಇದೀಗ ಪ್ರಸ್ತುತ ಜನಸಂಖ್ಯೆ ಆಧಾರದ ಮೇಲೆ ಕಲಬುರಗಿ ನಗರದಲ್ಲಿ ಹೆಚ್ಚಿನ ಅಗ್ನಿ ಅವಘಡಗಳು ಸಂಭವಿಸದಂತೆ ನಿಯಂತ್ರ ನಿಯಂತ್ರಣ ಮಾಡಲು ಜನರ ಆಸ್ತಿ ಜೀವ ರಕ್ಷಣೆ ಮಾಡಲು ನಗರಕ್ಕೆ ಐದು ಅಗ್ನಿಶಾಮಕ ಠಾಣೆಗಳ ಅವಶ್ಯಕತೆ ಆಗಿದೆ.ಇತ್ತೀಚಿಗೆ ದಿನೇ ದಿನೇ ಜನಸಂಖ್ಯಾ ಹೆಚ್ಚಳವಾಗುತ್ತಿದ್ದು ನಗರದಲ್ಲಿ ಸಾಕಷ್ಟು ಅಗ್ನಿ ಅವಘಡಗಳ ಸಂಭವಿಸುತ್ತಿವೆ. ಕಲಬುರ್ಗಿ ನಗರದಲ್ಲಿ ರಾಮ ಮಂದಿರ ವೃತ್ತ, ಹೈಕೋರ್ಟ್ ಸಂಚಾರಿ ಪೀಠ ವೃತ್ತ,ಅಳಂದ್ ಚೆಕ್ ಪೆÇೀಸ್ಟ್ , ಕಪನೂರು ಕೈಗಾರಿಕಾ ವಲಯ, ಕಲ್ಬುರ್ಗಿ ವಿಶ್ವವಿದ್ಯಾಲಯ ಕ್ಯಾಂಪಸ್ ಹೀಗೆ ಒಟ್ಟು ಐದು ಭಾಗದಲ್ಲಿ ಹೊಸದಾಗಿ ಅಗ್ನಿಶಾಮಕ ಠಾಣೆಗಳನ್ನು ಆರಂಭಿಸಬೇಕು .ನಗರದಲ್ಲಿ ಒಂದು ಠಾಣೆ ಮಾತ್ರ ಇದ್ದು ಠಾಣೆಯಲ್ಲಿ ಕೇವಲ ಮೂರು ವಾಹನ ಮಾತ್ರ ಇದ್ದು ಅಲ್ಲದೆ ಠಾಣೆಯ ಸಿಬ್ಬಂದಿ ಸಂಖ್ಯಾಬಲ ಕಡಿಮೆ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.