ಅಜೀಂ ಪ್ರೇಮ್ ಜಿ ಫೌಂಡೇಶನ್ ಕಾರ್ಯ ಮೆಚ್ಚುವಂತಹದ್ದು:ನಾಡಗೌಡ
ತಾಳಿಕೋಟೆ:ಸೆ.27: ಶಾಲಾ ಮಕ್ಕಳು ಪೌಷ್ಠಿಕ ಆಹಾರವನ್ನು ಸೇವಿಸಬೇಕು ಅಪೌಷ್ಟಿಕತೆ ಮಕ್ಕಳು ಆರೋಗ್ಯದಿಂದ ಕುಸಿಯಬಾರದು ಉತ್ತಮ ಆರೋಗ್ಯವಂತರಾಗಿ ಬಾಳಬೇಕೆಂಬ ಉದ್ದೇಶದಿಂದ ಅಜೀಮ್ ಪ್ರೇಮ್ ಜಿ ಫೌಂಡೇಶನ್ ದವರು ಇಡೀ ರಾಜ್ಯದಲ್ಲಿಯ ಶಾಲಾ ಮಕ್ಕಳಿಗೆ ತತ್ತಿ ವಿತರಿಸುತ್ತಿರುವುದು ಮಾದರಿಯ ಕಾರ್ಯವಾಗಿದೆ ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌq(ಅಪ್ಪಾಜಿ) ಹೇಳಿದರು.
ಬುಧವಾರ ಸರ್ಕಾರಿ ಮಾದರಿ ಶಾಲೆಯಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ, ರಾಜ್ಯ ಸರ್ಕಾರದ ಅಕ್ಷರ ದಾಸೋಹ ಮದ್ಯಾಹ್ನ ಉಪಚಾರದ ಯೋಜನೆ ಮತ್ತು ಅಜೀಂ ಪ್ರೇಮಜಿ ಪೌಂಡೇಶನ್ ಇವರ ಸಹಯೋಗದಲ್ಲಿ 2024-25 ನೇ ಸಆಲಿನ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನ ಪೂರಕ ಪೌಷ್ಠಿಕ ಆಹಾರ ಉಚಿತ ವಿತರಣಾ ಕಾರ್ಯವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ವಿಪೆÇ್ರೀ ಸಂಸ್ಥೆಯ ಸಂಸ್ಥಾಪಕರಾದ ಅಜೀಮ್ ಪ್ರೇಮ್ ಜಿ ಯವರು ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಸೇವಾ ಕಾರ್ಯವನ್ನು ಮಾಡಿದ್ದಾರೆ ದೇಶಕ್ಕೆ ಅವರ ಕೊಡುಗೆ ಅಪಾರವಾಗಿದೆ ನಾನು ಸರ್ಕಾರದ ಪರವಾಗಿ ಮತ್ತು ನನ್ನ ವೈಯಕ್ತಿಕವಾಗಿ ಅವರನ್ನು ಅಭಿನಂದಿಸುತ್ತೇನೆ. ಮೊದಲು ವಾರದಲ್ಲಿ ಎರಡು ಬಾರಿ ನಮ್ಮ ಸರ್ಕಾರ ಕತ್ತಿಗಳನ್ನು ವಿತರಿಸುತ್ತಿತ್ತು ಈಗ ವಾರ ಇಡೀ ವಿತರಿಸುವ ಕಾರ್ಯ ನಡೆಯಲಿದೆ ಮೊಟ್ಟೆ ತಿನ್ನದೇ ಇರುವ ಮಕ್ಕಳಿಗೆ ಬಾಳೆಹಣ್ಣು ಹಾಗೂ ಚಕ್ಕಿ ವಿತರಿಸುವ ಕಾರ್ಯವು ನಡೆಯಲಿದೆ ಮಕ್ಕಳು ಪೌಷ್ಟಿಕ ಆಹಾರವನ್ನು ಸೇವಿಸಿ ತಮ್ಮ ಆರೋಗ್ಯವನ್ನು ರಕ್ಷಿಸಿಕೊಂಡು ಚೆನ್ನಾಗಿ ವಿದ್ಯಾಭ್ಯಾಸವನ್ನು ಮಾಡಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂದ ಅವರು ಸದೃಢ ಆರೋಗ್ಯವಿದ್ದರೆ ಶಿಕ್ಷಣವೆಂಬುದು ಕಲಿಯಲು ಸಾಧ್ಯವಾಗಲಿದೆ ಮಾನಸಿಕವಾಗಿ ದೈಹಿಕವಾಗಿ ಭಲರ್ವದನೆಯಾಗುವದು ಅವಶ್ಯವಾಗಿದೆ ಎಂದರು.
ಈ ಸಮಯದಲ್ಲಿ ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ, ಅಕ್ಷರ ದಾಸೋಹ ಅಧಿಕಾರಿ ಡಾ.ಎಂ.ಎಂ. ಬೆಳಗಲ್, ತಹಸಿಲ್ದಾರ ಕೀರ್ತಿ ಚಾಲಕ್, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಇಸಿಒ ಎಸ್.ಎಸ್. ಹಿರೇಮಠ, ಜೆ. ಆರ್. ಜೈನಾಪೂರ, ಸಿಆರ್‍ಪಿಗಳಾದ ರಾಜು ವಿಜಾಪುರ, ಜಾವೇದ ಎಕೀನ, ಐ.ಎಲ್.ಆಲಮೇಲ, ಎಸ್.ಎಂ.ಪಾಲ್ಕಿ, ಡಾ.ಅನಿತಾ ಸಜ್ಜನ, ಮುಖ್ಯ ಶಿಕ್ಷಕಿ ಶ್ರೀಮತಿ ಆರ್.ಬಿ ಆಲೂರ, ಕಾರ್ಯದರ್ಶಿ ಸುರೇಶ್ ಬೀರಗೊಂಡ, ಉಪಾಧ್ಯಕ್ಷ ಟಿ. ಎಸ್. ಲಮಾಣಿ, ರಫೀಕ್ ಚೌದ್ರಿ, ಮುನ್ನಾ ಅತ್ತಾರ, ಮೊದಲಾದವರು ಉಪಸ್ಥಿತರಿದ್ದರು.
ಅನಂದ ತಳವಾರ ಪ್ರಾರ್ಥಿಸಿದರು. ಡಾ. ಎಂ.ಎಂ.ಬೆಳಗಲ್ ಸ್ವಾಗತಿಸಿದರು. ಗುಂಡುರಾವ್ ಧನಪಾಲ ನಿರೂಪಿಸಿ ವಂದಿಸಿದರು.