ನಾಗನಖೇರೆ ಪ್ರದೇಶಕ್ಕೆ ತಹಶೀಲ್ದಾರ ಭೇಟಿ
ಚಿಟಗುಪ್ಪ :ಸೆ.27:ತಾಲೂಕಿನ ನಾಗನಖೆರ ಗ್ರಾಮದ ಕೆರೆ ಭರ್ತಿಯಾಗಿ ಸಂಚಾರಕ್ಕೆ ತೊಂದರೆ ಎಂಬ ಶೀರ್ಷಿಕೆ ಯಡಿ ಪತ್ರಿಕೆ ಪ್ರಕಟಿಸಿದ್ದ ವರದಿಗೆ ತಕ್ಷಣ ಸ್ಪಂದಿಸಿದ ತಹಶೀಲ್ದಾರ್ ಮಂಜುನಾಥ್ ಪಾಂಚಾಳ್ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಗ್ರಾಮದ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಲೋಕೋಪಯೋಗಿ ಇಲಾಖೆಯ ಪಿ ಅರ್ ಇ ಸ್ವಾಧೀನಕ್ಕೊಳಪಟ್ಟ ಕೆರೆಗೆ ತಹಶೀಲ್ದಾರ್ ಸಹಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಕೆರೆಗೆ ಸೇರ್ಪಡೆಗೊಳ್ಳುವ ಹಾಗೂ ಹೊರ ಹೋಗುವ ನೀರು ಸರಾಗವಾಗಿ ಹರಿಯುವಂತೆ ಕ್ರಮ ಜರುಗಿಸಬೇಕು ಎಂದು ತಹಸಿಲ್ದಾರ್ ಅಧಿಕಾರಿಗಳಿಗೆ ಸೂಚಿಸಿದರು.
ಪಿ ಅರ್ ಇ ಇಲಾಖೆಯ ಎಇಇ ಪಶುಪತಿ ಸೇರಿದಂತೆ ಗ್ರಾಮ ಪಂಚಾಯತ್,ಕಂದಾಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳಿದ್ದರು.
ಕೆರೆ ತುಂಬಿ ಅವಾಂತರ…. ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆ ಭರ್ತಿಯಾಗಿ ನೀರು ಹರಿದು ಹೋಗದ ಕಾರಣ ಕೆರೆ ಅಕ್ಕಪಕ್ಕದ ಕೆಲ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಯವರು ಪರಿತಪಿಸುವಂತಾಯಿತು. ಅಲ್ಲದೆ ಮೀನುಗಾರರು ಕೆರೆಯಲ್ಲಿ ಹಾಕಿದ್ದ ಬಲೆಗೆ ದೊಡ್ಡ ಹಾವೊಂದು ಸಿಲುಕಿ ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿತು.
ತಕ್ಷಣ ಕೆರೆಯ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಗುಂಡಪ್ಪ ನಾಗನಾಕೇರಾ ಸೇರಿದಂತೆ ಗ್ರಾಮಸ್ಥರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.