ವಿದ್ಯಾರ್ಥಿಗಳ ಸಾಧನೆಯಿಂದ ಕಾಲೇಜಿನ ಕೀರ್ತಿ ಹೆಚ್ಚಾಗಿದೆ ; ಶಂಸುದ್ದೀನ್ ಪಟೇಲ್
ಕಲಬುರಗಿ ;ಸೆ.27: ರಾಜ್ಯ ಎನ್ ಎಸ್.ಎಸ್ ಘಟಕದ ವತಿಯಿಂದ ಬೆಂಗಳೂರಿನಲ್ಲಿ ರಾಷ್ಟ್ರೀಯ ಸದ್ಭಾವ ದಿನಾಚರಣೆ ಅಂಗವಾಗಿ ನಗರದ ಎಂ.ಪಿ.ಹೆಚ್.ಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚೆನ್ನವೀರ ತಂ. ನಾಗಪ್ಪ( ಪ್ರಥಮ ಸ್ಥಾನ), ನಿಖಿಲ್ ತಂ. ಪರಮೇಶ್ವರ್ (ತೃತೀಯ ಸ್ಥಾನ) ಪಡೆಯುವ ಮೂಲಕ ಇಬ್ಬರು ವಿದ್ಯಾರ್ಥಿಗಳು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಪ್ರಾಚಾರ್ಯರಾದ ಶಂಸುದ್ದೀನ್ ಪಟೇಲ್ ಅವರು ವಿದ್ಯಾರ್ಥಿಗಳ ಸಾಧನೆ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಎನ್. ಎಸ್. ಎಸ್. ಸಂಯೋಜನಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ, ಉಪನ್ಯಾಸಕರಾದ ಅಶೋಕ್ ತಳಕೇರಿ, ಯಶವಂತ ಪವರ್, ದೇವಿದಾಸ್ ಪವರ್, ನಾಗಪ್ಪ ಬಿ., ಸುಭಾಷ್ ಚಂದ್ರ, ಚಿತಾಂಬರ್ ಮೇತ್ರೇ , ಸಂಗೀತಾ ಕಪೂರ್, ನೀಲಾಂಬಿಕಾ ಪಾಟೀಲ್, ಎಚ್. ಎಸ್. ಬೇನಾಳ್, ಸವಿತಾ ನಾಟಿಕರ್, ಶಿವಕುಮಾರ್, ದತ್ತಾತ್ರೇಯ, ಜ್ಯೋತಿ ಹೊಸ್ಮನಿ, ಅಹಮದ್ ಅಲಿ, ಸತೀಶ್ ಕಟಕ , ಭಾಗ್ಯಶ್ರೀ ಕುಲಕರ್ಣಿ, ವೀರಭದ್ರಯ್ಯ ಸ್ವಾಮಿ, ಬೋಧಕ, ಬೋಧಕೇತರ ಹಾಗೂ ಸಿಬ್ಬಂದಿಗಳು ಇಬ್ಬರ ವಿದ್ಯಾರ್ಥಿಗಳ ಸಾಧನೆಗೆ ಶುಭ ಹಾರೈಸಿದರು.