ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಅಪರಾಧ ಆಗುವುದಿಲ್ಲ:ನ್ಯಾ. ಪ್ರಕಾಶ್ ಅರ್ಜುನ್ ಬಂಸೋಡೆ
ಬೀದರ, ಸೆ.27: ನಮ್ಮ ಮನೆಯಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದರೆ ಯಾವುದೇ ಅಪರಾಧ ಆಗುವುದಿಲ್ಲ ಹೀಗಾಗಿ ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ನಾವೆಲ್ಲರೂ ಮಾಕಿನಾಮ್ ಸಸಿ ನೆಟ್ಟು ಪೆÇೀಷಿಸಿ ರಕ್ಷಿಸಬೇಕೆಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹೇಳಿದರು.
ಅವರು ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆ ಜಿಲ್ಲಾ ಕೈಗಾರಿಕಾ ಇಲಾಖೆ ಜಿಲ್ಲಾ ಲೀಡ್ ಬ್ಯಾಂಕ್ ಬೀದರ್ ಇವರುಗಳ ಸಂಯುಕ್ತಾಶ್ರಯದಲ್ಲಿ ಬೀದರ ಜಿಲ್ಲಾ ಬಾಲ್ ಭವನ ಹಮ್ಮಿಕೊಂಡಿದ್ದ ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರಿಗೆ ಒಂದು ದಿವಸದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ತರಬೇತಿ ಕಾರ್ಯಕ್ರಮ ಹಾಗೂ ಏಕ್ ಪೇಡ ಮಾಕೆನಾಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಕಾನೂನು ಕಾಯ್ದೆ ಆಸ್ತಿ ಹಕ್ಕು ಸಂಸ್ಕಾರ ಹೀಗೆ ಅನೇಕ ವಿಷಯವನ್ನು ಮಹಿಳೆಯರ ಮನಮುಟ್ಟುವಂತೆ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಕಲ್ಯಾಣ ಅಧಿಕಾರಿ ಶಾರದಾ ಎನ್.ಕಲ್ಮಲ್ಕರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವಶರಣಪ್ಪ ಪಾಟೀಲ್, ಕಾರ್ಯದರ್ಶಿ ನಾಗೇಂದ್ರ ಬಿರಾದರ್, ಜಿಲ್ಲಾ ವಕೀಲರ ಸಂಘ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಅನಿತಾ ಬಿರಾದರ್, ಕೃಪಾಶಂಕರ್ ಪಾಂಡೆ, ಶಾರದಾ ಮೇಡಂ, ಶಿವಕುಮಾರ ಚೌದರಿ, ಆಕಾಶ ಸಜ್ಜನ, ಸೂರ್ಯಕಾಂತ್, ಶ್ರೀದೇವಿ ಹಾಗೂ ಜಗದೇವಿ ಸೇರಿದಂತೆ ಜಿಲ್ಲೆಯ ಆಯುಧ ಶ್ರೀ ಶಕ್ತಿ ಗುಂಪಿನ ಗ್ರಾಮೀಣ ಮಹಿಳೆಯರು ಉಪಸ್ಥಿತರಿದ್ದರು. ಸ್ವಾಗತ ಗೀತೆ ನೀಲಮ್ಮ ಮೆಂಕೆರೆ, ನಾಗರಾಜ್ ಹೊಲ್ಸೂರೆ ಸ್ವಾಗತಿಸಿದರು, ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಡೊಳೆ ಕಾರ್ಯಕ್ರಮ ನಿರೂಪಿಸಿದರು.