ಯಡ್ರಾಮಿ ಆಡಳಿತ ಅಧಿಕಾರಿಗಳ ಮುಷ್ಕರ ರೈತರ ಪರದಾಟ
ಯಡ್ರಾಮಿ:ಸೆ.27:ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಸಿ ಗ್ರಾಮ ಆಡಳಿತ ಅಧಿಕಾರಿಗಳು ಕರೆ ನೀಡಿರುವ ಅನಿದಿಷ್ರ್ಟಾವಧಿ ಮುಷ್ಕರ ಇಂದಿನಿಂದ ಆರಂಭವಾಗಿದ್ದು ರೈತರು ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ.
ಪಟ್ಟಣದ ತಾಲೂಕು ಆಡಳಿತ ಕಚೇರಿ ಆವರಣದಲ್ಲಿ ತಮ್ಮ ವಿವಿಧ ಬೇಡಿಕೆ ಈಡೇರಿಕೆಗಾಗಿ ತಾಲ್ಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಆಡಳಿತ ಅಧಿಕಾರಿಗಳು ಬೆಳಗ್ಗೆಯಿಂದ ಅನಿದಿಷ್ರ್ಟಾವಧಿ ಮುಷ್ಕರ ಆರಂಭಿಸಿದ್ದಾರೆ
ಮೂಲಭೂತವಾಗಿ ಮೊಬೈಲ್ ಆಫ್ ಬಳಕೆ ವೆಬ್ ಸಮಸ್ಯೆ ಸೇರಿದಂತೆ ರಜಾ ದಿನಗಳಲ್ಲಿಯೂ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲಿದೆ ಸದಾ ಮಾನಸಿಕ ಒತ್ತಡಗಳ ನಡುವೆ ಕೆಲಸ ನಾಡುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳನ್ನೂ ರಾಜ್ಯ ಸರ್ಕಾರವು ಅನುಕೂಲ ಮಾಡಿ ಕೊಡಬೇಕು ಎಂದು ಒತ್ತಾಯಿಸಿದರು.
ಇನ್ನು ಸೇವಾ ಜೇಷ್ಠತೆ ಆಧಾರದ ಮೇಲೆ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸೇವಾ ಮುಂಬಡ್ತಿ ನೀಡಬೇಕು.ಮೂಲಭೂತ ಸೌಲಭ್ಯಗಳನ್ನೂ ಒದಗಿಸಿ ಕೊಡುವುದು ಸೇರಿದಂತೆ ರಾಜ್ಯದಾದ್ಯಂತ ಕರ್ತವ್ಯ ನಿವರ್ಹಿಸುತ್ತಿರುವ 5 ಸಾವಿರಕ್ಕೂ ಹೆಚ್ಚು ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದ್ದರು.
ಈ ಸಂದರ್ಭದಲ್ಲಿ ಮುಷ್ಕರದಲ್ಲಿ ಆಡಳಿತ ಅಧಿಕಾರಿಗಳಾದ ಆನಂದ ತಂಗಾ,ಪರಶುರಾಮ ಬಿರಾದಾರ,ಶಿವರಾಜ ಮೊರೆ,ಕಲ್ಲಪ್ಪಗೌಡ, ಮೈಹಿಬುಬ ಪಟೇಲ್,ಶಿಮಶಿರ ಪಟೇಲ್, ರಾಜಕುಮಾರ ಗುಬೇವಾಡ,ಗಣೇಶ ಜಾಡರ್, ಮೈಹಿಬೂಬ ಪಟೇಲ್,ಸುನೀತಾ ಗಡದ,ಭಾಗ್ಯಶ್ರೀ ಪುರಾಣಿಕ,ರೇಣುಕಾ ಪೆÇಲೇಶಿ,ಮನೋಹರ, ಮಂಜುನಾಥ,ಸ್ವಯಂ ಪ್ರವೀಣ ಹಾಗೂ ಇತರ ಗ್ರಾಮ ಆಡಳಿತ ಅಧಿಕಾರಿಗಳು ಸಿಬ್ಬಂದಿವರ್ಗ ಮುಷ್ಠರದಲ್ಲಿ ಭಾಗವಹಿಸಿದ್ದರು.