2ನೇ ರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್ ಸ್ಪರ್ಧೆ: ಶಾಂತಿನಿಕೇತನ ಶಾಲೆಯ ಸಾಧನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.10:ಗದಗನಲ್ಲಿ ಜು. 6,7ರಂದು ನಡೆದ ಎರಡನೇ ರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್-2024 ಸ್ಪರ್ಧೆಯಲ್ಲಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶಾಂತಿನಿಕೇತನ ಅಂತರರಾಷ್ಟ್ರೀಯ ಸಿ.ಬಿ.ಎಸ್.ಇ. ಶಾಲೆಯ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳಾದ ಕುಮಾರ ಅಜಯ ಹೊಸಮನಿ, ತನ್ಮಯ ಕಬಾಡೆ ಅವರು 11 ವರ್ಷದೊಳಗಿನ ಕಟ್ಟಾ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಗಳಿಸಿದ್ದಾರೆ. 14 ವರ್ಷದೊಳಗಿನ ಕಟ್ಟಾ ಕರಾಟೆ ಸ್ಪರ್ಧೆಯಲ್ಲಿ ಕುಮಾರ ವಿನಿತ ಮಹಾಜನ ಪ್ರಥಮ ಸ್ಥಾನ ಮತ್ತು ಕುಮಾರ ಸಿದ್ಧಾರ್ಥ ನಾಟಿಕಾರ ತೃತೀಯ ಸ್ಥಾನ ಗಳಿಸಿ ಶಾಲೆಗೆ ಹಾಗೂ ವಿಜಯಪುರ ನಗರಕ್ಕೆ ಕೀರ್ತಿತಂದಿದ್ದಾರೆ.
ಅವರ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಸುರೇಶ ಬಿರಾದಾರ, ಶೀಲಾ ಬಿರಾದಾರ ಹಾಗೂ ಆಡಳಿತ ಮಂಡಳಿಯ ಸದಸ್ಯರು ಶಾಲೆಯ ಪ್ರಾಂಶುಪಾಲÀ ರಿಜೇಶ ಪಿ.ಎನ್ ಹಾಗೂ ಶಾಲೆಯ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.