ಹರಪನಹಳ್ಳಿ; ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿ
ಸಂಜೆವಾಣಿ ವಾರ್ತೆ
ಹರಪನಹಳ್ಳಿ. ಜು.೯; ತುಂಗಭದ್ರ ನದಿ ಮೈದುಂಬಿ ಹರಿಯುತ್ತಿರುವುದರಿಂದ ಪ್ರವಾಹ ಭೀತಿ ಎದುರಾಗಿದ್ದು, ತಾಲೂಕಿನ ನದಿ ತೀರದಲ್ಲಿ ಭಾಗದಲ್ಲಿ 7 ಕಡೆ ಕಾಳಜಿ ಕೇಂದ್ರ ಸ್ಥಾಪಿಸಲು ಸ್ಥಳಗಳನ್ನು ಗುರುತಿಸಲಾಗಿದೆ.ನಿಟ್ಟೂರು,ಕಡತಿ,ನಂದ್ಯಾಲ,ತಾವರಗೊಂದಿ,ರ‍್ಭಗುಡಿ, ನಿಟ್ಟೂರು ಬಸ್ಸಾಪುರ ಗ್ರಾಮಗಳಲ್ಲಿ ರ‍್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹಾಗೂ ಹಲುವಾಗಲು ಗ್ರಾಮದಲ್ಲಿ ಮೊರಾರ್ಜಿ ಶಾಲೆಯಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ತಾಲೂಕು ಆಡಳಿತ ಸಿದ್ದತೆ ಮಾಡಿಕೊಂಡಿದೆ.ನದಿ ತೀರದ ಗ್ರಾಮಗಳಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಡಂಗೂರ ಸಾರಿಸಿ ನದಿತೀರಕ್ಕೆ ಹೋಗಬಾರದು, ಎಚ್ಚರಿಕೆಯಿಂದ ಇರಬೇಕು ಎಂದು ಜಾಗೃತಿ ಮೂಡಿಸಲಾಗಿದೆ ಎಂದು ತಹಶೀಲ್ದಾರ ಬಿ.ವಿ.ಗಿರೀಶ ಬಾಬು ತಿಳಿಸಿದ್ದಾರೆ.ರೈತರು ಜಮೀನುಗಳಿಗೆ ನೀರು ಹಾಯಿಸಿಕೊಳ್ಳಲು ನದಿ ಬಳಿ ಅಳವಡಿಸಿದ್ದ ಮೋಟಾರುಗಳನ್ನು ಕಿತ್ತು ಮೇಲ್ಭಾಗಕ್ಕೆ ಇಟ್ಟುಕೊಂಡಿದ್ದಾರೆ. ಹರಪನಹಳ್ಳಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ರ‍್ಭಗುಡಿ ಗ್ರಾಮದ ನದಿ ಅಂಚಿನಲ್ಲಿರುವ ಜಾಕ್‌ ವೆಲ್‌ ಬಳಿಗೆ ಇನ್ನೂ ನೀರು ಬಂದಿಲ್ಲ ಆದ್ದರಿಂದ ಸದ್ಯ ನೀರು ಸರಬರಾಜಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ತಿಳಿಸಿದ್ದಾರೆ.ಒಟ್ಟಿನಲ್ಲಿ ಎದುರಾಗಬಹುದಾದ ಪ್ರವಾಹ ಎದುರಿಸಲು ತಾಲೂಕು ಆಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ ಎಂದು ತಹಶೀಲ್ದಾರ ಗಿರೀಶಬಾಬು ತಿಳಿಸಿದ್ದಾರೆ.