ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸಿ.ಚಂದ್ರಶೇಖರ್  ಆಯ್ಕೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೧೦; ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಿ.ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸಾಮಾನ್ಯ ಸದಸ್ಯರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಈ   ಡಿ.ಎಂ.ಶಿವಕುಮಾರ್, ಕೆ.ಆರ್. ಸಿದ್ದೇಶ್ವರಪ್ಪ, ಬಿ.ಎಂ.ವಿಶ್ವನಾಥ್, ಬಿ.ಉಮೇಶ್ ಕುಮಾರ್, ಎ.ಸಿ.ಪಾಟೀಲ್, ಡಾ.ಅಶೋಕ್‌ ಕುಮಾರ್, ಎನ್‌.ಎಂ.ರಾಜು, ಬಿ.ಜೆ.ರಮೇಶ್, ಜೆ.ಎನ್.ಶಿವನಗೌಡ್ರು, ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ, ಬಸವರಾಜಪ್ಪ ಬೆಳಗಾವಿ, ಕಿರವಾಡಿ ವಿ. ಸೋಮಶೇಖರ್, ಕೆ.ಕೆ.ಮಹೇಶ್, ಎ.ವಿ.ಪ್ರಸಾದ್, ಬಸವರಾಜ ಓಂಕಾರಿ, ಮಾಗಾನಹಳ್ಳಿ ಗಿರೀಶ್.ಎಂ.ಜೆ., ಅವಿನಾಶ್ ಬಸವರಾಜ್, ಆರ್. ಟಿ. ಪ್ರಶಾಂತ್, ಮುಂಡಾಸ್ ವೀರೇಂದ್ರ, ಎಸ್.ಜಿ.ವೇದಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಜಿಲ್ಲಾ ಘಟಕದ ಕಾರ್ಯನಿರ್ವಾಹಕ ಸಮಿತಿ ಮಹಿಳಾ ಸದಸ್ಯರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎನ್.ಎಸ್. ನಿರ್ಮಲ, ಕೆ.ಇ. ಮಂಜುಳ, ಜೆ.ಎಂ. ನಾಗರತ್ನ, ನೀತಾ ನಂದೀಶ್ ಬಳ್ಳಾರಿ, ಪಲ್ಲವಿ ಪಾಟೀಲ್, ಕೆ.ಪಿ. ರಾಜೇಶ್ವರಿ, ವಿಜಯಾ ಬಸವರಾಜ್, ಎ.ಎಸ್.ಸುಧಾ ಇವರುಗಳು ಅವಿರೋಧವಾಗಿ ನೇಮಕಗೊಂಡಿದ್ದಾರೆಂದು ಉಪ-ಚುನಾವಣಾಧಿಕಾರಿ ತಿಳಿಸಿದ್ದಾರೆ