ಕದ್ದಿದ್ದ ದೇವರನ್ನ ಬಿಸಾಡಿದ ಖದೀಮರು
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೧೦: ಒಂದು ವಾರದ ಹಿಂದೆ ಮಸೀದಿ ಬಾಗಿಲು ಹೊಡೆದು ಕಳ್ಳತನ ಮಾಡಿದ್ದ ಆಲಿ ದೇವರುಗಳನ್ನು ಹಳೇ ಕುಂದವಾಡ ಗ್ರಾಮದ ರಸ್ತೆಯಲ್ಲಿ ಬಿಡಾಡಿ ಹೋಗಿದ್ದಾರೆ. ಸ್ಥಳಕ್ಕೆ ವಿದ್ಯಾನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ಘಟನೆ ನಡೆದಿತ್ತು. ಒಂದು ವಾರದ ಹಿಂದೇ ಕಳ್ಳತನವಾಗಿದ್ದ ಆಲಿ ದೇವರನ್ನು ರಸ್ತೆ ಬದಿಯಲ್ಲಿ ಬಿಸಾಡಿ ಹೋಗಿದ್ದಾರೆ. ಸಂಶಯ ಬಾರದಂತೆ ದೇವರ ಮೇಲೆ ಕಾರದ ಪುಡಿ ಚೆಲ್ಲಿದ್ದಾರೆ.ಹಲವು ಪವಾಡಗಳಿಗೆ ಸಾಕ್ಷಿಯಾಗಿದ್ದ ದೇವರನ್ನೆ ಕದ್ದಿದ್ದ ಕಳ್ಳರು ನಂತರ ಗ್ರಾಮದ ರಸ್ತೆಯಲ್ಲಿ ಬಿಸಾಡಿ ಹೋಗಿದ್ದಾರೆ. ಸ್ಥಳಕ್ಕೆ ವಿದ್ಯಾನಗರ ಪೊಲೀಸ್ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ. ದೇವರುಗಳ ಕಳ್ಳತನ ಕುರಿತಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮುಂದಿನ ವಾರ ಮೊಹರಂ ಹಬ್ಬ ಹಿನ್ನಲೆ ಮಹಜರ್ ನಡೆಸಿ ದೇವರುಗಳನ್ನ ಸಮಾಜದ ಮುಖಂಡರಿಗೆ ಪೊಲೀಸರು ಹಸ್ತಾಂತರಿಸಿದರು.