ಪೋಟೊ ಟುಡೆ ವಸ್ತುಪ್ರದರ್ಶನದಲ್ಲಿ ಕರ್ನಾಟಕ ಛಾಯಾ ರತ್ನ‌ಪ್ರಶಸ್ತಿ
ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೯; ಬೆಂಗಳೂರು ಅರಮನೆ ಮೈದಾನ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಫೋಟೋ ಟುಡೆ ಎಕ್ಸಿಮಿಷನ್ ಬೈ ಅಂಡ್ ಸೇಲ್ ಹಾಗೂ ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಸಿಯೇಷನ್ ಇವರ ಆಶ್ರಯದಫೋಟೋ ಟುಡೆ ಎಕ್ಸಿಮಿಷನ್ ಕಾರ್ಯಕ್ರಮದ ಉದ್ಘಾಟನೆಯನ್ನು ನಿಕಾನ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಎಂ ಆರ್ ಸಜ್ಜನ್ ಕುಮಾರ್ ಉದ್ಘಾಟಿಸಿದರು. 21ನೇ ವರ್ಷದ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಯ್ಕೆಯಾದ 51 ಜನ ಛಾಯಾಗ್ರಾಹಕರಿಗೆ ಕರ್ನಾಟಕ ಛಾಯಾ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯಿಂದ ಆಯ್ಕೆಯಾದ ದಾವಣಗೆರೆ ನಗರದ ಶಂಕರ್ ಸ್ಟುಡಿಯೋ ಮಾಲೀಕರಾದ ಛಾಯಾಗ್ರಾಹಕ ಶಂಕರ್ ಕಾಟ್ವೆ, ಹಾಗೂ ಹರಿಹರದ ಎಸ್ ಎಲ್ ವಿ ಸ್ಟುಡಿಯೋ ಮಾಲೀಕರಾದ ಕೆ ಎಂ. ವೆಂಕಟೇಶ್ ಗೆ ಕರ್ನಾಟಕ ಛಾಯಾ ರತ್ನ ಪ್ರಶಸ್ತಿ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಮತ್ತು ಬಿಗ್ ಬಾಸ್ ವಿಜೇತರಾದ ಪ್ರಥಮ್ ಹಾಗೂ ಕರ್ನಾಟಕ ವಿಡಿಯೋ ಫೋಟೋ ಅಸೋಸಿಯೇಷನ್ ಅಧ್ಯಕ್ಷರಾದ ಬೆಂಜಿಮೀನ್ ಭಾಸ್ಕರ್ , ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಲಾನ್ ರಾಜ್ಯ ಉಪಾಧ್ಯಕ್ಷರಾದ ಕೃಷ್ಣಪ್ಪ, ಛಾಯಾ ಸುದ್ದಿ ಖಾಜಾ ಪೀರ್ , ಮಹಿಳಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಮತಿ ಪ್ರತಿಭಾ ,ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಗೀತಾ ,ದಾವಣಗೆರೆ ತಾಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ಅಧ್ಯಕ್ಷ ಎಂ. ಮನು, ಗೌರವಾಧ್ಯಕ್ಷ ಬಿ.ಮಂಜುನಾಥ್ ಗ್ರಾಮಾಂತರಾವಲಯ ಅಧ್ಯಕ್ಷ ಕೊಂಡಜ್ಜಿ ರಾಜಶೇಖರ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.