ನವಲಗುಂದ ನಾಗಲಿಂಗೇಶ್ವರ ಪುರಾಣ
ಕಲಬುರಗಿ,ಜು.9-ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಸುಕ್ಷೇತ್ರ ಕನ್ನೊಳ್ಳಿ ಗ್ರಾಮದಲ್ಲಿ ಲಿಂಗೈಕ್ಯ ದೊಡ್ಡಪ್ಪಮಹಾರಾಜರ 106ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ನವಲಗುಂದದ ಅಜಾತ ನಾಗಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ತೊಟ್ಟಿಲ್ಲು ಕಾರ್ಯಕ್ರಮ ಜರುಗಿತು.
ನಾಡಿನ ಖ್ಯಾತ ವಾಗ್ಮಿ ಕೀರ್ತನ ಕೇಸರಿ ಸುಂಟನೂರ ಸಂಸ್ಥಾನ ಹಿರೇಮಠದ ಬಂಡಯ್ಯ ಶಾಸ್ತ್ರಿಗಳು ಸಂಸ್ಥಾನ ಹಿರೇಮಠ ಅವರಿಂದ ಪುರಾಣ ಕಾರ್ಯಕ್ರಮ ಜರಗಿತು. ಸಂಗಮೇಶ ನೀಲಾ ಸ್ವಂತ ಅವರ ಸಂಗೀತ, ರಮೇಶ ಕಟ್ಟಿಸಂಗಾವಿ ಅವರ ತಬಲಾ ಸಾಥ್ ನೀಡಿದರು. ಸಮಸ್ತ ಕನ್ನೊಳ್ಳಿಯ ಗ್ರಾಮದ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.