ಜೂಜಾಟ: 10 ಜನರ ಬಂಧನ
ಕಲಬುರಗಿ,ಜು.9-ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಖಾಜಾ ಕೋಟನೂರ ಗ್ರಾಮದ ದರ್ಗಾ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಇನ್ಸಪೆಕ್ಟರ್ ಸುಶೀಲಕುಮಾರ, ಸಿಬ್ಬಂದಿಗಳಾದ ಈರಣ್ಣ, ಕಿಶೋರ, ಮೀರಾ ಯಾಸೀನ್ ಮತ್ತು ಅನೀಲ ಅವರು ದಾಳಿ ನಡೆಸಿ 10 ಜನರನ್ನು ಬಂಧಿಸಿದ್ದಾರೆ.
ಅಂಬಾರಾಯ ನೀಲಗಡ, ನಾಗೇಂದ್ರಪ್ಪ ಜಮಾದಾರ, ಅಶೋಕ ಮಡಿವಾಳ, ತೋಲೆ ಪಟೇಲ್ ಕಟ್ಟೊಳ್ಳಿ, ನಿಜಲಿಂಗಪ್ಪ ಪೂಜಾರಿ, ರೇವಣಸಿದ್ದಪ್ಪ ಉಜಳಭಿ, ಸಿದ್ದು ತೆಗನೂರ, ಆನಂದ ಮೇತ್ರೆ, ನಾಗಶೆಟ್ಟಿ ಪಾಟೀಲ ಮತ್ತು ಗಂಗಾಧರ ಸ್ಥಾವರಮಠ ಎಂಬುವವರನ್ನು ಬಂಧಿಸಿ 15,855 ರೂ.ನಗದು ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.