ಕೆರೆ ಅಭಿವೃದ್ದಿಗೆ ಚಾಲನೆ
ಆಲಮೇಲ:ಜು.9: ಪಟ್ಟಣ 54 ಎಕರೆ ವಿಶಾಲವಾದ ಕರೆಯನ್ನು ಅಭಿವೃದ್ದಿಗೊಳಿಸಿ ಕೆರೆಯ ಸುತ್ತಲು ತಡೆಗೊಡೆ ನಿರ್ಮಿಸಿ ಸಾರ್ವಜನಿಕರಿಗೆ ವಾಯು ವಿಹಾರದ ವ್ಯವಸ್ಥೆ ಮಾಡುವ ಮೂಲಕ ಮಾದರಿ ಕರೆಯನ್ನಾಗಿ ಮಾಡಲಾಗುವದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಬಾನುವಾರ ಸಣ್ಣ ನಿರಾವರಿ ಇಲಾಖೆಯಿಂದ 3.5 ಕೋಟಿ ವ್ಯೆಚ್ಚದ ಕೆರೆ ಅಭಿವೃದ್ದಿ ಕಾಮಗಾರಿಗೆ ಚಾಲನೇ ನೀಡಿ ಮಾತನಾಡಿದರು.
ಪಟ್ಟಣದ ಕರೆಯಲ್ಲಿನ ಹೊಳು ತಗೆದು ಮಳೆ ನೀರು ಮತ್ತು ಕಾಲುವೆ ಮೂಲಕ ಕೆರೆ ತುಂಬುವ ಯೋಜನೆ ಇದಾಗಿದ್ದು ಇದರಿಂದ ಅಂತರ ಜಲ ಹೆಚ್ಚಾಗುವ ಮೂಲಕ ಪಟ್ಟಣದ ಜನರಿಗೆ ನೀರಿನ ಸಮಸ್ಯೆ ನಿವಾರಿಸಲಿಲದೆ ಮತ್ತು ಅಂತರಜಲ ಹೆಚ್ಚಾಗಿ ಸೂತ್ತಲಿನ ರೈತರಿಗೂ ಅನಕೂಲವಾಗಲಿದೆ. 54 ಎಕರೆ ಕೆರೆಯ ಜಾಗದಲ್ಲಿ ಸಂಪೂರ್ಣ ಹೊಳೆತ್ತಿ ಸೂತ್ತಲು ತಡೆಗೋಡೆಗಳನ್ನು ಕಟ್ಟಿ ವಿಕ್ಷಣಿಯ ಸ್ಥಳವಾಗಿ ಮಾಡಲಾಗುವದು ಎಂದರು.
ನಮ್ಮ ತಂದೆ ದಿ. ಎಂ.ಸಿ. ಮನಗೂಳಿ ಅವರು ಸಿಂದಗಿ ನಗರದ ಜನರಿಗೆ ನೀರಿನ ಬವಣೆ ನಿಗಿಸಲು ಕರೆಯ ಅಭಿವೃದ್ದಿಗೊಳಿಸಿ ಬೆರೆಡೆಯಿಂದ ಪೈಪಲೈನ ಮೂಲಕ ಕೆರೆಗೆ ನೀರು ತುಂಬಿಸುವ ಮೂಲಕ ಸಿಂದಗಿ ನಗರಕ್ಕೆ ಶಾಸ್ವತವಾದಂತ ಯೋಜನೆ ಮಾಡಿದಂತೆ ಆಲಮೇಲ ಪಟ್ಟಣದ ಕರೆಯು ಅಭಿವೃದ್ದಿಗೊಳಿಸುವ ಮೂಲಕ ನಮ್ಮ ತಂದೆಯ ಹಾದಿಯಲ್ಲಿ ಕ್ಷೇತ್ರವನ್ನು ಸಮಗ್ರ ಅಭಿವೃದ್ದಿ ಮಾಡುತ್ತೆನೆ. ಗ್ಯಾರೆಂಟಿ ಯೋಜನೆಯಿಂದ ಅಭಿವೃದ್ದಿ ಕೆಲಸಕ್ಕೆ ಅನುದಾನ ಕೊರತೆ ಇದೆ, ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಸಿಂದಗಿ ಕ್ಷೇತ್ರವನ್ನು ಸಮಗ್ರ ಅಭಿವೃದ್ದಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ಹೇಳಿದರು.
ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಕರೂರ ಮಾತನಾಡಿ ಕೆರೆ ಅಭಿವೃದ್ದಿಗಾಗಿ ಸಣ್ಣ ನೀರಾವರಿ ಇಲಾಖೆಯಿಂದ 3.5 ಕೋಟಿ ಮಂಜುರಾಗಿದ್ದು. ಈ ಮೊತ್ತದಲ್ಲಿ ಕೆರಯಲ್ಲಿನ ಹೊಳೆತ್ತಿ ಸೂತ್ತಲು ಕಲ್ಲಿನ ತಡೆಗೊಡೆಗಳನ್ನು ನಿರ್ಮಿಸಿ ಮಳೆಯಿಂದ ಬರುವ ನೀರು ಮತ್ತು ಕಾಲುವೆ ಮೂಲಕ ಕರೆತುಂಬಿಸುವ ನಾಲೆ ನಿರ್ಮಿಸಲಾಗುವದು ಮತ್ತು ಕೆರೆಯ ಮೇಲ್ಬಾಗದಲ್ಲಿ ಮನೆಗಳ ಬಳಕೆಯ ನೀರು ಚರಂಡಿ ನಿರ್ಮಿಸಿ ಚರಂಡಿಗೆ ಹರಿಯುವಂತ ವ್ಯೆವಸ್ಥೆ ಮಾಡಲಾಗುವದು ಎಂದು ಹೇಳಿದರು.
ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುರೇಶ ನಾಯಕ, ಗುತ್ತಿಗೆದಾರ ಮುತ್ತು ಮುಂಡೆವಾಡಿ, ಪ.ಪಂ ಸದಸ್ಯ ಅಶೋಕ ಕೊಳಾರಿ, ಸಾಧಿಕ ಸುಂಬಡ, ರಿಯಾಜ ಬಿಳವಾರ, ಮಲ್ಲು ಅಚಲೇರಿ, ಭಾಗ್ಯವಂತ ಆಲಮೇಲಕರ, ಮೈಬೂಬ ಮಸಳಿ, ದಯಾನಂದ ನಾರಾಯಣಕರ ಮುಂತಾದವರು ಇದ್ದರು.