ತೊಗರಿಯಲ್ಲಿ ಅಗಲು ಸಾಲು ಪದ್ಧತಿ ಅಳವಡಿಸಿ : ಡಾ. ರಾಜಶೇಖರ ಸಲಹೆ
ವಿಜಯಪುರ,ಜು.9 :ಜಿಲ್ಲೆಯಲ್ಲಿ ಈ ವರ್ಷ ತೊಗರಿಯನ್ನು 4 ಲಕ್ಷ ಹೆಕ್ಟೇರಗಿಂತ ಅಧಿಕ ಪ್ರಧೇಶದಲ್ಲಿ ಬಿತ್ತಿದ್ದು, ಅಧಿಕ ಇಳುವರಿ ಪಡೆಯಲು ರೈತರು ಅಗಲು ಸಾಲು ಪದ್ದತಿಯಲ್ಲಿ ತೊಗರಿ ನಾಟಿ, ಬಿತ್ತನೆ ಕೈಗೊಳ್ಳಲು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ. ವಿಲಿಯಂ ರಾಜಶೇಖರ ಸಲಹೆ ನೀಡಿದರು.
ವಿಜಯಪುರ ತಾಲೂಕಿನ ತಿಕೋಟಾ ಹೋಬಳಿ ವ್ಯಾಪ್ತಿಯ ತೊರವಿ ಗ್ರಾಮದ ರೈತ ಸಿದ್ದರಾಯ ಕುಂಬಾರ ಅವರ ಕ್ಷೇತ್ರದಲ್ಲಿ ಕೃಷಿ ಇಲಾಖೆ ವÀತಿಯಿಂದ ಕೈಗೊಳ್ಳಲಾದ ತೊಗರಿ ನಾಟಿ ಪದ್ದತಿ ಪ್ರಾತ್ಯಕ್ಷಿತೆಯ ಕ್ಷೇತ್ರ ವೀಕ್ಷಿಸಿ ಮಾತನಾಡಿದರು.
ತೊಗರಿಯಲ್ಲಿ ಈ ಸಲ ಟಿ.ಎಸ್ 3 ಆರ್ ಜೊತೆಗೆ ಜಿ ಆರ್ ಜಿ-811 ಮತ್ತು ಜಿ ಆರ್ ಜಿ-152 ನೂತನ ತಳಿಯನ್ನು ವಿತರಿಸಲಾಗಿದೆ. ಆಹಾರ ಮತ್ತು ಪೌಷ್ಠಿಕ ಭದ್ರತೆ (ಈಓS) ಯೋಜನೆಯಡಿಯಲ್ಲಿ ಆಯ್ದ ರೈತರ ಕ್ಷೇತ್ರಗಳಲ್ಲಿ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ತೊಗರಿ ಇಳುವರಿ ಹೆಚ್ಚಿಸಲು ಅಧಿಕಾರಿಗಳ, ವಿಜ್ಞಾನಿಗಳ ಸಭೆ ನಡೆಸಲಾಗಿದೆ. ಅದರಂತೆ ರೈತರು ಅಗಲು ಸಾಲು ಅಂದರೆ 4 ಅಥವಾ 6 ಪೂಟಿನ ಅಂತರದ ಸಾಲುಗಳಲ್ಲಿ 2 ರಿಂದ 3 ಪೂಟಿಗೊಂದರಂತೆ ಸಸಿ ನಾಟಿ ಮಾಡಬೇಕು. ಇದರಿಂದ ಅಂತರ ಬೇಸಾಯ ಕೈಗೊಳ್ಳಲು ಹಾಗೂ ಅಂತರ ಬೆಳೆ ಬೆಳೆಯಲು ಅನುಕೂಲವಾಗುತ್ತದೆ ಎಂದರು.
ಸಹ ವಿಸ್ತರಣಾ ನಿರ್ದೇಶಕ ಡಾ. ರವಿಂದ್ರ ಬೆಳ್ಳಿ ಮಾತನಾಡಿ, ರೈತರು ಸೂಕ್ತ ತಂತ್ರಜ್ಞಾನ ಅಳವಡಿಸಿ ತೊಗರಿ ಬೆಳೆಯಬೇಕು, ಸಮಗ್ರ ಷೋಷಕಾಂಶ ನಿರ್ವಹಣೆ ಮಾಡಬೇಕು, 40 ರಿಂದ 50 ದಿವಸಗಳಾದ ನಂತರ ಕುಡಿ ಚಿವುಟದರಿಂದ ಹೆಚ್ಚಿನ ಕವಲೊಡದು ಹೆಚ್ಚು ಹೂವು, ಕಾಳುಗಳಾಗಿ ಇಳುವರಿ ಹೆಚ್ಚಿಸಲು ಸಹಕಾರಿ ಯಾಗುತ್ತದೆ ಎಂದರು.
ಕ್ಷೇತ್ರ ಭೇಟಿಯಲ್ಲಿ ಸಹಾಯಕ ಕೃಷಿ ನಿರ್ದೇಶಕರ ಎಸ್.ಎ. ಇನಾಮದಾರ, ಕೃಷಿ ಅಧಿಕಾರಿಗಳಾದ ಟಿ.ಎ. ಸೋಲಾಪೂರಕರ, ಆರ್.ಎಮ್. ಬಿದರಿ, ಆತ್ಮ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಮುಸ್ಕಾಕ ಬಾಳೆಕಾಯಿ, ರೈತರಾದ ಸಿದ್ದರಾಯ ಕಂಬಾರ, ಅನಿಲಕುಮಾರ ಹಡಪದ ಸೇರಿದಂತೆ ಹಲವರು ಉಪಸ್ಥಿತರಿದ್ದರು.