ಸಂಶೋಧನೆಯಲ್ಲಿ ಕೌಶಲ್ಯಗಳನ್ನು ಕಲಿಯುವುದು ಅವಶ್ಯ: ಪ್ರೊ. ಶಾಂತಾದೇವಿ
ವಿಜಯಪುರ,ಜು.9: ಆಧುನಿಕತೆಗೆ ಮತ್ತು ಸಂಪ್ರದಾಯಕ್ಕೆ ತಕ್ಕಹಾಗೇ ಸಂಶೋಧನೆಗೆ ಒಳಗಾಗುವವರ ಜೊತೆಗೆ ಸಂವಹನಾ ಮತ್ತು ಸಂಶೋಧನೆಯ ಕೌಶಲ್ಯಗಳನ್ನು ಅವಶ್ಯಕವಾಗಿ ಕಲಿತುಕೊಳ್ಳಬೇಕು ಎಂದು ವಿವಿಯ ಸಮಾಜವಿಜ್ಞಾನ ನಿಕಾಯದ ಡೀನ ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ವಿಭಾಗದ ಪ್ರೊ. ಶಾಂತಾದೇವಿ ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರ ಹಾಗೂ ಪ. ಜಾ/ ಪ. ಪಂ ನಿರ್ದೇಶನಾಲಯದ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ‘ಸಂಶೋಧನಾ ವೈಧಾನಿಕತೆ’ ಕಾರ್ಯಾಗಾರದ ನಾಲ್ಕನೆಯ ದಿನದ ಗೋಷ್ಠಿಯಲ್ಲಿ ಅವರು ಮಾತನಾಡಿ ಸಂಶೋಧಕರಾಗುವುದು ಹೇಗೆ ಎಂಬ ವಿಷಯದ ಕುರಿತು ಮಾತನಾಡುತ್ತ ಸಂಶೋಧಕರು ಮೊದಲು ಸಂಶೋಧನಾ ವಿಷಯದ ಕುರಿತು ಆಸಕ್ತಿ ಮತ್ತು ಕುತೂಹಲ ಭರಿತರಾಗಿರಬೇಕು. ಸಂಶೋಧಕರು ಹಲವು ಕೌಶಲ್ಯಗಳನ್ನು ಕಲಿಯಬೇಕು ಎಂದರು.
ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಪ್ರೊ. ಗವಿಸಿದ್ದಪ್ಪ ಆನಂದಹಳ್ಳಿ ಮಾತನಾಡಿ ಸಂಶೋಧನಾ ಪ್ರಕಟಣೆಗಳಿಗೂ ಸಂಶೋಧನಾ ನೈತಿಕತೆ ಇದ್ದು, ಸಂಶೋಧಕರು ಸಂಶೋಧನೆಯಲ್ಲಿ ನೈತಿಕವಾಗಿ ಇದ್ದರೆ ಮಾತ್ರ ಸಂಶೋಧನಾ ಪ್ರಕಟಣೆಗಳಿಗೆ ನೈತಿಕತೆ ಬರುತ್ತದೆ ಇಂದಿನ ದಿನಗಳಲ್ಲಿ ವಿವಿಧ ವಿಷಯ ತಜ್ಞರುಗಳ ಸಹಯೋಗದೊಂದಿಗೆ ಸಂಶೋಧನೆ ಮಾಡುತ್ತಿದ್ದಾರೆ ಅದರ ಉದ್ದೇಶವೇ ಸಂಶೋಧನಾ ವಿಷಯದ ಕುರಿತು ಸಮಗ್ರವಾಗಿ ಅಧ್ಯಯನ ಮಾಡುವುದಾಗಿರುತ್ತದೆ ಎಂದರು.
ಸರ್ಕಾರವು ಸಹ ಇಂತಹ ಸಂಶೋಧನೆಗೆ ಧನಸಹಾಯ ಮತ್ತು ಪ್ರೋತ್ಸಾಹವನ್ನು ಮಾಡುತ್ತಿದೆ. ಇಂದು ಸಂಶೋಧಕರ ಬೆರಳಿನಲ್ಲಿ ಹಲವು ಆಕರುಗಳು ಸಿಗುತ್ತವೆ. ಆದರೆ ಎಲ್ಲ ಆಕರಗಳು ನಂಬಲು ಅರ್ಹವಾಗಿರುವುದಿಲ್ಲ. ಅವುಗಳನ್ನು ಪರಿಶೀಲಿಸಿ ತಮ್ಮ ಸಂಶೋಧನಾ ಅಧ್ಯಯನದಲ್ಲಿ ಬಳಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ವಿವಿಯಯ ಶಿಕ್ಷಣ ಅಧ್ಯಯನ ವಿಭಾಗದ ಪ್ರೊ. ಉದಯಕುಮಾರ ಕುಲಕರ್ಣಿ ಸಂಶೋಧನೆಯ ವಿವಿಧ ಆಯಾಮಗಳ ಕುರಿತು ಮಾತನಾಡಿದರು. ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ. ಲಕ್ಷ್ಮಿದೇವಿ ವಾಯ್, ಕೇಂದ್ರದ ಸಿಬ್ಬಂದ್ದಿ ವರ್ಗದವರಾದ ಡಾ.ಭಾಗ್ಯಶ್ರೀ ದೊಡಮನಿ, ಡಾ.ಸರೋಜಾ ಸಂತಿ, ಡಾ. ಶಶಿಕಲಾ ರಾಠೋಡ, ಡಾ. ರಜಿಯಾ ನದಾಪ ಮತ್ತು ವಿವಿಧ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.