ದೇಶದ ಅಭಿವೃದ್ದಿಗೆ ಮಾನವ ಸಂಪನ್ಮೂಲ ಪ್ರಮುಖ
ಇಂಡಿ : ಜು.9:ಒಂದು ದೇಶದ ಅಭಿವೃದ್ದಿಗೆ ಮಾನವ ಸಂಪನ್ಮೂಲ ಪ್ರಮುಖವಾಗಿದ್ದು ಇದಕ್ಕೆ ಸರಕಾರಗಳು ಪೂರಕ ವಾತಾವರಣ ನಿರ್ಮಿಸಿದಾಗ ಮಾತ್ರ ಸಾಧ್ಯ, ಈ ಒಂದು ದಿಶೆಯಲ್ಲಿ ಶೈಕ್ಷಣಿಕ ಅಭಿವೃದ್ದಿಪಡಿಸಿದರೆ ಎನ್ನೇಲ್ಲಾ ಮಾಡಲು ಸಾಧ್ಯ ಎಂಬ ದೂರದೃಷ್ಠಿಯಿಂದ ಈ ಭಾಗದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳು ಹಾಗೂ ವಸತಿ ನಿಲಯಗಳು ಸರಕಾರದಿಂದ ಮಂಜೂರಾತಿ ತಂದು ಶಿಕ್ಷಣ ಕಾಶಿ ಮಾಡಿದ್ದೇನೆ ಎಂದು ಅಂದಾಜು ಸಮೀತಿ ಅಧ್ಯಕ್ಷ ಹಾಗೂ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಝಳಕಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕ ಸುಮಾರು 3 ಕೋಟಿ ರೂ ವೆಚ್ಚದ ಪಾಲಿಟೇಕ್ನಿಕಲ್ ಕಾಲೇಜು ವಿಧ್ಯಾರ್ಥಿಗಳ ವಸತಿ ನಿಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಝಳಕಿ ಗ್ರಾಮ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಆರ್.ಟಿ.ಓ ಚೆಕ್ಕಪೂಸ್ಟ್ ಕಂಗೋಳಿಸುತ್ತಿತ್ತು. ಝಳಕಿ ಎಂದಾಕ್ಷಣ ನೆನಪು ಚೆಕ್ಕಪೆÇೀಸ್ಟ ಇಂತಹ ವಾತಾವರಣ ಹೋಗಲಾಡಿಸಲು ಈ ಭಾಗದ ವಿಧ್ಯಾರ್ಥಿಗಳ ಹಿತದೃಷ್ಠಿಯನ್ನು ಗಮನಿಸಿ ಇದಕ್ಕೊಂಡು ಹೊಸ ಸ್ಪರ್ಶ ನೀಡಬೇಕು ಎಂದು ಸಂಕಲ್ಪದೊಂದಿಗೆ ವಿವಿಧ ಶಾಲಾ,ಕಾಲೇಜು,ವಸತಿ ನಿಲಯಗಳು ಸರಕಾರದ ಮಟ್ಟದಲ್ಲಿ ಹೋರಾಟ ಮಾಡಿ ಶೈಕ್ಷಣಿವಾಗಿ ಅಭಿವೃದ್ದಿಪಡಿಸಿದ್ದೇನೆ. ಶೈಕ್ಷಣಿಕ ಅಭಿವೃದ್ದಿಪಡಿಸಲು ಪೂರಕ ಕಟ್ಟಡ ಒಳ್ಳೇಯ ವಾತಾವರಣ ನಿರ್ಮಾಣ ಮಾಡಿರುವೆ ಆದರೆ ಶಿಕ್ಷರಾದವರು ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಸಾಧ್ಯ. ಶಿಕ್ಷಕರು ವಿಧ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಜೊತೆ ಮಾನವೀಯ ಮೌಲ್ಯಗಳನ್ನು ಕಲಿಸಿ.ದೇಶ ,ಭಾಷೆ, ಸಂಸ್ಕøತಿ ,ನೆಲ, ಜಲದ ಬಗ್ಗೆ ಗೌರವ ಇರಲಿ. ಶಿಕ್ಷಕರಲ್ಲಿ ಸಮಯ ಪಾಲನೆ ಮತ್ತು ಸದಾ ಓದುವ ಹವ್ಯಾಸ ಬೆಳೆಸಿಕೊಳ್ಳಿ ,ಮಕ್ಕಳು ದೇವರ ಸಮಾನ ಸರಿಯಾಗಿ ಪಾಠ ಪ್ರವಚನ ಮಾಡಿದರೆ ಭಗವಂತ ನಿಮ್ಮ ಕುಟುಂಬಕ್ಕೆ ಒಳ್ಳೇಯದನ್ನು ಕರುಣಿಸುತ್ತಾನೆ. ಈ ಭಾಗ ಇನ್ನು ಶೈಕ್ಷಣಿವಾಗಿ ಬದಲಾವಣೆಯಾಗಬೇಕಾಗಿದೆ ಇದಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳು ಬೇಕಾದರೆ ನನಗೆ ಹೇಳಿ ಸರಕಾರದ ಸಹಾಯ ಪಡೇದು ಅಭಿವೃದ್ದಿಪಡಿಸೋಣ ಎಂದರು.
ಕಂದಾಯ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಮಾತನಾಡಿದರು.
ಕಂದಾಯ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ್, ಎಸ್.ಎಸ್ ಬಿರಾದಾರ, ಕಾಲೇಜಿ ಪ್ರಾಚಾರ್ಯ ಎಸ್.ಬಿ ಜವುಳಿ, ರುಕ್ಮುದೀನ ತದ್ದೇವಾಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸಣ್ಣಪ್ಪ ತಳವಾರ, ಶಿವಯೋಗೇಪ್ಪ ಚನಗೊಂಡ, ಸದಾಶಿವ ಪ್ಯಾಟಿ, ಸತೀಶ ಹತ್ತಿ, ನೀಲಕಂಠ ರೂಗಿ ವೇದಿಕೆಯಲ್ಲಿದ್ದರು.
ಗಿಡಮರಗಳು ಬೆಳೆಸಬೇಕು .ಪರಿಸರ ಸುಂದರವಾಗಿದ್ದರೆ ಮಾತ್ರ ಆರೋಗ್ಯವಂತ ಸಮಾಜ ಕಟ್ಟಲು ಸಾಧ್ಯ. ನಡೇದಾಡುವ ದೇವರಾದ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳು ಇಡೀ ನಿಸರ್ಗದ ಬಗ್ಗೆ ಚರಾಚರ ವಸ್ತುಗಳ ಬಗ್ಗೆ ಸಾಕಷ್ಟು ಪ್ರೀತಿ ಗೌರವ ಇತ್ತು. ಶ್ರೀಗಳ ಪ್ರವಚನಗಳಿಂದ ಈ ಭಾಗದ ಜನರು ಹೃದಯವಂತರಾಗಿದ್ದಾರೆ. ಶ್ರೀಗಳ ನಡೇನುಡಿ ನಿಜಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು. ಇಂದು ಯುವ ಸಮುದಾಯ ಮೋಬಾಯಿಲ್ ಗೀಳು ಹಚ್ಚಿಕೊಂಡಿದ್ದಾರೆ ವಿಧ್ಯಾರ್ಥಿ ಜೀವನದಲ್ಲಿ ಇದರಿಂದ ದೂರವಾಗಿರಿ.
ಶಾಸಕ – ಯಶವಂತರಾಯಗೌಡ ಪಾಟೀಲ.