ಮಳೆ, ಬೆಳೆಗಾಗಿ ಪ್ರಾರ್ಥಿಸಿ ವ್ಯಾಪಾರಿಗಳ ಪಾದಯಾತ್ರೆ
ಬೀದರ್: ಜು.9:ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆಗಾಗಿ ಪ್ರಾರ್ಥಿಸಿ ವ್ಯಾಪಾರಿಗಳು ಗಾಂಧಿಗಂಜನ ದಿ ಗ್ರೇನ್ ಆಯಿಂಡ್ ಸೀಡ್ಸ್ ಮಚರ್ಂಟ್ಸ್ ಅಸೋಸಿಯೇಷನ್ ಮುಂದಾಳತ್ವದಲ್ಲಿ ನಗರದಲ್ಲಿ ಸೋಮವಾರ ಪಾದಯಾತ್ರೆ ನಡೆಸಿದರು.
ಗಾಂಧಿಗಂಜನ ಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಪಾದಯಾತ್ರೆಯು ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಜನರಲ್ ಕಾರ್ಯಪ್ಪ ವೃತ್ತ, ನೆಹರೂ ಕ್ರೀಡಾಂಗಣ, ಮಡಿವಾಳ ಮಾಚಿದೇವ ವೃತ್ತ, ಹೊಸ ಬಸ್ ನಿಲ್ದಾಣ ಮಾರ್ಗವಾಗಿ ಪಾಪನಾಶ ದೇಗುಲಕ್ಕೆ ತಲುಪಿ ಮುಕ್ತಾಯಗೊಂಡಿತು.
ಪಾದಯಾತ್ರೆಯಲ್ಲಿ ಪಾಲ್ಗೊಂಡವರು ಭಜನೆ ಮಾಡುತ್ತ, ದೇವರ ನಾಮ ಸ್ಮರಿಸುತ್ತ ಸಾಗಿದರು. ಪಾಪನಾಶ ದೇವಸ್ಥಾನಕ್ಕೆ ತಲುಪಿದ ನಂತರ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆಗೈದರು. ಪ್ರಸಾದ ದಾಸೋಹ ನೆರವೇರಿಸಿದರು.
ಉತ್ತಮ ಮಳೆ, ಬೆಳೆಯಾಗಿ ನಾಡಿನಲ್ಲಿ ಸುಭಿಕ್ಷೆ ನೆಲೆಸಲಿ. ಸರ್ವರಿಗೂ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಸಿಗಲಿ ಎಂದು ಪ್ರಾರ್ಥಿಸಿ ವ್ಯಾಪಾರಿಗಳಿಂದ ಪ್ರತಿ ವರ್ಷದಂತೆ ಈ ವರ್ಷವೂ ಪಾದಯಾತ್ರೆ ನಡೆಸಲಾಗಿದೆ ಎಂದು ಮುಂದಾಳತ್ವ ವಹಿಸಿದ್ದ ದಿ ಗ್ರೇನ್ ಆಯಿಂಡ್ ಸೀಡ್ಸ್ ಮಚರ್ಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.
ಮುಖಂಡರಾದ ನಾಗಶೆಟ್ಟೆಪ್ಪ ದಾಡಗಿ, ಭಗವಂತ ಔದತ್ತಪುರ, ಅಶೋಕ ರೇಜಂತಲ್, ಸೋಮಶೇಖರ ಪಾಟೀಲ ಗಾದಗಿ, ಮಡಿವಾಳಪ್ಪ ಗಂಗಶೆಟ್ಟಿ, ಸೋಮನಾಥ ಗಂಗಶೆಟ್ಟಿ, ಎನ್.ಆರ್. ವರ್ಮಾ, ಸುನೀಲ್ ಮೊಟ್ಟಿ, ಬಂಡೆಪ್ಪ, ಬಾಲಾಜಿ, ನಾಗಶೆಟ್ಟೆಪ್ಪ ಕಾರಾಮುಂಗಿ, ಶಂಕರ ಗುನ್ನಳ್ಳಿ, ಅಣ್ಣಾರಾವ್ ಮೊಗಶೆಟ್ಟಿ, ರಾಜು ಬಗದಲ್, ದಿಗಂಬರ ಪೆÇೀಲಾ, ಬಸವರಾಜ ಭಂಡೆ, ಬಸವರಾಜ ಶೀಲವಂತ ಮತ್ತಿತರರು
ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ದಿ ಗ್ರೇನ್ ಆಯಿಂಡ್ ಸೀಡ್ಸ್ ಮಚರ್ಂಟ್ಸ್ ಅಸೋಸಿಯೇಷನ್, ದಾಲ್ ಮಿಲ್ ಮಾಲೀಕರ ಅಸೋಸಿಯೇಷನ್, ಟ್ರಾನ್ಸ್ ಪೆÇೀರ್ಟ್ ಅಸೋಸಿಯೇಷನ್, ಫರ್ಟಿಲೈಸರ್ ಅಸೋಸಿಯೇಷನ್, ಕಿರಾಣಾ ಮಚರ್ಂಟ್ಸ್ ಅಸೋಸಿಯೇಷನ್, ಕಾಳಿಕಾದೇವಿ ಸರಾಫ್ ಬಜಾರ್, ಉಸ್ಮಾನ್ ಗಂಜ್ ಸರಾಫ್ ಬಜಾರ್ ವ್ಯಾಪಾರಿಗಳು, ಅಡತ್ ಮಾಲೀಕರು, ಮುನೀಮರು, ಕೂಲಿ ಕಾರ್ಮಿಕರ ವತಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.