ವೈದ್ಯಾಧಿಕಾರಿ ಕಿರುಕುಳ ವಿರೋಧಿಸಿ ಸಿಬ್ಬಂದಿ ಪ್ರತಿಭಟನೆ
ಚಿಟಗುಪ್ಪ : ಜು.9:ವೈದ್ಯಾಧಿಕಾರಿ ಕಿರುಕುಳ್ಳ ಖಂಡಿಸಿ ವೈದ್ಯ ಸಿಬ್ಬಂದಿಗಳು ತಾಲೂಕಿನ ಮನ್ಯಾಎಖೇಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದರು. ಆಸ್ಪತ್ರೆ ವೈದ್ಯಾಧಿಕಾರಿ ಲಕ್ಷ್ಮಣ್ ಜಾದವ್ ಹಾಗೂ ಸಿಬ್ಬಂದಿಗಳ ಮುಸುಕಿನ ಮುದ್ದಾಟ ಬಹಿರಂಗವಾಗಿ ಪ್ರತಿಭಟನೆಗೆ ಕಾರಣವಾಯಿತು. ಜಾದವ್ ವಿನಾಕಾರಣ ಆಸ್ಪತ್ರೆ ವೈದ್ಯರಿಗೆ ಹಾಗೂ ಕೇಳಹಂತದ ಸಿಬ್ಬಂದಿಗಳಿಗೆ ಕಿರುಕುಳ್ಳ ನೀಡುತ್ತಿದ್ದಾರೆ. ಏಕವಚನದಲ್ಲಿ ಮಾತಾಡುವುದು. ನಿಂದಿಸುವುದು ಮಹಿಳೆಯರನ್ನದೆ ವಿನಾಕಾರಣ ಅವ್ಯಕ್ತ ಶಬ್ದಗಳು ಬಳಸುವುದು. ಮುಸ್ಲಿಂ ಮಹಿಳ ಸಿಬ್ಬಂದಿಗಳಿಗೆ ಬುರ್ಖ ತೆಗೆದು ಕೆಲಸ ಮಾಡುವಂತೆ ಒತ್ತಾಯ. ನೀಡಿದಿರುವುದು ಸಂಬಳ ಕಡಿತ ಮಾಡುವುದು. ತನ್ನ ಜನರಿಂದ ವಿಡಿಯೋ ಮಾಡಿಸಿ ಬ್ಲಾಕ್ ಮೇಲ್ ಮಾಡುವುದು ಸೇರಿದಂತೆ ವಿವಿಧ ರೀತಿಯಲ್ಲಿ ಕಿರುಕುಳ್ಳ ನೀಡುತ್ತಾರೆ. ಇವರನ್ನು ತಕ್ಷಣ ಇಲ್ಲಿಂದ ವರ್ಗಾವಣೆ ಮಾಡಿ. ಸಮೂಹಿಕವಾಗಿ ವರ್ಗಾಯಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು. ಒಂದು ವೇಳೆ ವರ್ಗಾವಣೆ ಆಗದಿದ್ದಲ್ಲಿ.ಹೆದ್ದಾರಿ ತಡೆದು ಪ್ರತಿಭಟನೆ ಮಾಡುವುದು ಎಂದು ತಿಳಿಸಿದರು. ಗ್ರಾಮo ಅಧ್ಯಕ್ಷ ಹಾಗೂ ಸದಸ್ಯರು ಶಾಸಕರ ಸಮ್ಮುಖದಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು