ವಾಡಿ ಯಲ್ಲಿ “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ
ವಾಡಿ (ಜಂ) :ಜು.9:ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ
“ತಾಯಿ ಹೆಸರಲ್ಲಿ ಒಂದು ಸಸಿ”ಅಭಿಯಾನ ಕೈಗೊಂಡರು.
ಈ ವೇಳೆ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ
ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಪರಿಸರ ದಿನದಂದು ‘ಏಕ್ ಪೇಡ್ ಮಾ ಕೆ ನಾಮ್'(ತಾಯಿಯ ಹೆಸರಿನಲ್ಲಿ ಒಂದು ಮರ) ಅಭಿಯಾನಕ್ಕೆ ಕರೆ ನೀಡಿದ್ದರು.
ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ,ಪರಿಸರ ನಮ್ಮನ್ನು ತಾಯಿಯಂತೆ ಸಂರಕ್ಷಣೆ ಮಾಡುತ್ತದೆ ಅದರಂತೆ
ಪ್ರತಿಯೊಬ್ಬರ ಜೀವನದಲ್ಲಿ ತಾಯಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾಳೆ. ಮಕ್ಕಳಿಗಾಗಿ ಯಾವ ತ್ಯಾಗಕ್ಕೂ ಸಿದ್ಧಳಾಗಿರುತ್ತಾಳೆ. ಆ ಪ್ರೀತಿಯನ್ನು ಭೂಮಿ ತಾಯಿಯಲ್ಲಿ ಕಾಣಬೇಕೆಂಬ ಪರಿಕಲ್ಪನೆಯೊಂದಿಗೆ ಪ್ರಧಾನಿಯವರು ಪರಿಸರ ಸಂರಕ್ಷಣೆಯ ಅಭಿಯಾನವನ್ನು ಆರಂಭಿಸಿದ್ದಾರೆ.
ಹಸಿರು ಇದ್ದರೇ ಮಾತ್ರ ಉಸಿರು,ಮರ ಇದ್ದರೇ ಮಾತ್ರ ಮಾನವ ಎನ್ನುವ ಸಂಧರ್ಭದಲ್ಲಿ ಇಂದು ದಿನೇ ದಿನೇ ಪರಿಸರ ನಾಶದಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹಾಗಾಗಿ ಭೂಮಿ ತಾಯಿಯನ್ನು ಕಾಪಾಡುವುದು ಅತಿ ಅವಶ್ಯಕವಾಗಿದೆ. ಮುಂದಿನ ಪೀಳಿಗೆಗೆ ಸುಂದರವಾದ ಪರಿಸರವನ್ನು ಉಳಿಸುವ ಬಗ್ಗೆ ಯೋಚಿಸಬೇಕು. ಇದಕ್ಕೆಲ್ಲ ಸಸಿ ನೆಡುವುದೊಂದೇ ಪರಿಹಾರವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಗಿಡ ನೆಡುವ ಸಂಕಲ್ಪ ತೊಡಬೇಕಾಗಿದೆ ತಾಯಿಯ ಮೇಲಿನ ಪ್ರೀತಿ ಮತ್ತು ಗೌರವದ ಸಂಕೇತವಾಗಿ ಸಸಿಗಳನ್ನು ನೆಟ್ಟು ಬೆಳಸಬೇಕಾಗಿದೆ ನಮಗಿರುವ ಒಂದೇ ಒಂದು ಭೂಮಿಯನ್ನು ಕಾಪಾಡಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಎಸ್ ಸಿ ಮೂರ್ಚಾದ ತಾಲ್ಲೂಕು ಅಧ್ಯಕ್ಷ ರಾಜು ಮುಕ್ಕಣ್ಣ,
ಮುಖಂಡರಾದ ಬಸವರಾಜ ಪಂಚಾಳ,
ವಿಠಲ ವಾಲ್ಮೀಕ ನಾಯಕ,ರಮೇಶ ಕಾರಬಾರಿ, ತುಕಾರಾಮ ರಾಠೋಡ, ರಾಮಚಂದ್ರ ರಡ್ಡಿ, ಅಶೋಕ ಹರನಾಳ,ಗಿರಿಮಲ್ಲಪ್ಪ ಕಟ್ಡಿಮನಿ,ಹರಿ ಗಲಾಂಡೆ, ಅಶೋಕ ಪವಾರ,ಶಿವಶಂಕರ ಕಾಶೆಟ್ಟಿ,ಕಿಶನ ಜಾಧವ,ಆನಂದ ಡೌವಳೆ, ಪ್ರಮೂದ ಚೋಪಡೆ, ಅಂಬದಾಸ ಜಾಧವ,ಕಾಶಿನಾಥ ಶೆಟಗಾರ, ಲಕ್ಮಣ ಮೆಂಗಜಿ,ಬಸವರಾಜ ಪಗಡಿಕರ,ದತ್ತಾ ಖೈರೆ,ಮಲ್ಲಿಕಾರ್ಜುನ ಸಾತಖೇಡ,ಮಹೇಂದ್ರ ಕುಮಾರ ಪುಜಾರಿ,ಪ್ರೇಮ ರಾಠೋಡ,ಸನ್ನಿ ವಾಲಿಯ ಸೇರಿದಂತೆ ಇತರರು ಇದ್ದರು.