ಕರಾಟೆ ಚಾಂಪಿಯನ್‌ಶಿಪ್ಎಸ್ ಕೆ ಮೋದಿ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳಿಗೆ ಬಂಗಾರ ಪದಕ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.09: ಗದಗ್ ನಲ್ಲಿ ಇತ್ತೀಚೆಗೆ ಗೋಲ್ಡನ್ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ಹಮ್ಮಿಕೊಂಡಿರುವ ಗದಗ್ ಓಪನ್ ನ್ಯಾಷನಲ್ ಕರಾಟೆ ಚಾಂಪಿಯನ್‌ಶಿಪ್ 2024ರಲ್ಲಿ ಬಳ್ಳಾರಿಯ ವೀ.ವಿ ಸಂಘದ- ಎಸ್.ಕೆ ಮೋದಿ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು,
ಡಿ. ಸೂರ್ಯ ವಿಹಾನ್ – ಕಾಟ ವಿಭಾಗದಲ್ಲಿ ಪ್ರಥಮ ಮತ್ತು  ಫೈಟ್ ವಿಭಾಗದಲ್ಲಿ ಪ್ರಥಮ ಸ್ಥಾನ. ಮೋಹಿತ್ ಎಚ್.ಎಸ್- ಕಾಟ ವಿಭಾಗದಲ್ಲಿ ಪ್ರಥಮ ಮತ್ತು ಫೈಟ್ ವಿಭಾಗದಲ್ಲಿ ದ್ವಿತೀಯ ಸ್ಥಾನ. ಮನಸ್ವಿ – ಕಾಟ ವಿಭಾಗದಲ್ಲಿ ತೃತೀಯ ಮತ್ತು ಫೈಟ್ ವಿಭಾಗದಲ್ಲಿ ದ್ವಿತೀಯ ಸ್ಥಾನ.  ಹರ್ಷವರ್ಧನ್ – ಕಾಟ ವಿಭಾಗದಲ್ಲಿ ಪ್ರಥಮ.ವನ್ನಶ್ರೀ- ಕಾಟ ವಿಭಾಗದಲ್ಲಿ ದ್ವಿತೀಯ ಮತ್ತು ಫೈಟ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 
ಈ ವಿದ್ಯಾರ್ಥಿಗಳ ಸಾಧನೆಗೆ ವೀ. ವಿ ಸಂಘದ ಪದಾಧಿಕಾರಿಗಳು ಹಾಗೂ ಎಸ್.ಕೆ ಮೋದಿ ನ್ಯಾಷನಲ್ ಶಾಲೆಯ ಅಧ್ಯಕ್ಷರಾದ ಏಳುಬೆಂಚಿ ರಾಜಶೇಖರ, ಪ್ರಾಂಶುಪಾಲರಾದ ಶ್ರೀಮತಿ ಸುನಂದ ಎಂ ಪಾಟೀಲ್ ಹಾಗೂ ಕರಾಟೆ ತರಬೇತಿದಾರಾದ ಕುಮಾರಸ್ವಾಮಿ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದರು.