ಸಹಕಾರ ಸಂಘದ ಧ್ಯೇಯೋದ್ದೇಶ ಯಶಸ್ಸುಗೊಳ್ಳಲು ಪ್ರಾಮಾಣಿಕತೆ ಅಗತ್ಯ: ಸಾವಳೇಶ್ವರ
ಆಳಂದ:ಜು.9: ತಾಲೂಕಿನ ಮಂಟಕಿ ಗ್ರಾಮದ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ),ಕ್ಕೆ ನಡೆದ ಪದಾಧಿಕಾರಿಗಳ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಾಬುರಾವ್ ಕಟ್ಟಿಕೇರಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಯಶ್ವಂತರಾವ ಶಿರೂರೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ನಡೆದ 12 ಜನ ನಿರ್ದೇಶಕರ ಆಯ್ಕೆಯಲ್ಲೂ ಅವಿರೋಧವಾಗಿ ಸರ್ವ ನಿರ್ದೇಶಕರು ಆಯ್ಕೆಯಾಗಿದ್ದು, ಆಯ್ಕೆಯಾದ ನಿರ್ದೇಶಕರ ನಡುವೆ ಈಗ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿ ರವಿವಾರ ನಡೆದ ಚುನಾವಣೆಯಲ್ಲೂ ಅಧ್ಯಕ್ಷ ಬಾಬುರಾವ್ ಮತ್ತು ಉಪಾಧ್ಯಕ್ಷರಾಗಿ ಯಶ್ವಂತರಾವ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿಡಿಒ ಶಂಕರರಾವ್ ಪಾಟೀಲ ಪ್ರಕಟಸಿದರು.
ಕಲಬುರಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ ಅವರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಇದೇ ವೇಳೆ ಮಾತನಾಡಿದ ಸಾವಳೇಶ್ವರ ಅವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹತ್ವ ಮತ್ತು ಕೃಷಿಕರಿಗೆ ಈ ಸಂಘ ನೀಡುವ ಸೇವೆಗಳ ಬಗ್ಗೆ ಮಾತನಾಡಿದರು. ಸಂಘವು ಗ್ರಾಮೀಣ ಕೃಷಿಕರಿಗೆ ಬೆಂಬಲ ನೀಡಲು ಮತ್ತು ಅವರ ಆರ್ಥಿಕ ಸ್ಥಿತಿ ಸುಧಾರಿಸಲು ಇರುವ ಪ್ರಮುಖ ಉದ್ದೇಶವನ್ನು ಈಡೇರಿಸಬೇಕಾಗಿದೆ ಎಂದರು.
ಸಂಘದ ಎಲ್ಲಾ ಸದಸ್ಯರು ತಮ್ಮ ಸಾಮಾಜಿಕ ಮತ್ತು ಆರ್ಥಿಕ ಹಿತಾಸಕ್ತಿಯನ್ನು ಹಂಚಿಕೊಳ್ಳಲು ಮತ್ತು ಸಂಘದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸಹಕಾರದ ಸಿದ್ಧಾಂತಗಳನ್ನು ಅನುಸರಿಸಲು ನೂತನ ಪದಾಧಿಕಾರಿಗಳಿಗೆ ಸಂಘದ ಸುರಕ್ಷತೆ ಮತ್ತು ಸಾಮಾನ್ಯ ಜನರ ವಿಶ್ವಾಸ ಉಳಿಸಿಕೊಳ್ಳುವುದು ಮುಖ್ಯವಾಗಿದೆ. ತಮ್ಮ ಎಲ್ಲಾ ಕಾರ್ಯಗಳಲ್ಲಿ ಸಮಾನುಪಾತ, ನ್ಯಾಯ ಮತ್ತು ಸಾಮರಸ್ಯವನ್ನು ಕಾಯ್ದುಕೊಳ್ಳಬೇಕು ಎಂದು ಹೇಳಿದರು. ಸಂಘದ ಎಲ್ಲಾ ಸದಸ್ಯರು ಸಮಾನ ಅವಕಾಶಗಳನ್ನು ಪಡೆಯಬೇಕು. ಸಂಘದ ಮುಂದಿನ ಯೋಜನೆಗಳು ಮತ್ತು ಅವುಗಳನ್ನು ಯಶಸ್ವಿಯಾಗಿ ಜಾರಿಗೆ ತರಲು ಬೇಕಾದ ಕ್ರಮಗಳು ಬಗ್ಗೆ ಮಾತನಾಡಿದರು. ಸಂಘದ ಅಭಿವೃದ್ಧಿಗಾಗಿ ನೂತನ ಪ್ರಯತ್ನಗಳು ಮತ್ತು ಯೋಜನೆಗಳು ಹೇಗಿರಬೇಕು ಎಂಬುದನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಪಿಕೆಪಿಎಸ್ ನೂತನ ನಿರ್ದೇಶಕರಾದ ಸಿದ್ಧಯ್ಯಾ ಶಿವಯ್ಯಾ ಸ್ವಾಮಿ, ಶಿವುಪುತ್ರ ರಾಮಚಂದ್ರ ಬಿರಾದಾರ, ಪರಮೇಶ್ವರ ಖಂಡಪ್ಪಾಅ ಶಿರೂರೆ, ದತ್ತಾತ್ರೆಯ ಶರಣಪ್ಪಾ ಬಿರಾದಾರ, ವಿಲಾಸ ಮಲ್ಲಾರಿ ಬಿರಾದಾರ, ಭಾಷಾಸಾಬ ಖಾಸಿಂ ಸಾಬ ಕಟ್ರೆ, ಸುವರ್ಣ ಕಲ್ಯಾಣಿ ದಾಳಿಂಬೆ, ಕಲ್ಪನಾ ಗಣಮಂತರಾವ್ ಬಿರಾದಾರ, ಬಂಡಪ್ಪ ಕಾಶಿನಾಥ ಸರಸಂಬೆ, ದೇವರಾಯ ಶಂಕರ ಜಮಾದಾರ ಈ ನಿರ್ದೇಶಕರು ಸೇರಿ ಸದಸ್ಯ ಮತ್ತು ಪಿಕೆಪಿಎಸ್ ವ್ಯಾಪ್ತಿಯ ಪ್ರಮುಖರು ಉಪಸ್ಥಿತರಿದ್ದರು.