ನಮ್ಮ ನಡಿಗೆ ಹಳ್ಳಿಯ ಸರಕಾರಿ ಶಾಲೆ ಕಡೆಗೆ : ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಚಾಲನೆ
ಕಲಬುರಗಿ:ಜು.9:ಯಶಸ್ಸು ಅಂದರೆ ನಾವು ಏನನ್ನು ಸಾಧಿಸಬೇಕೆನ್ನುತ್ತೇವೆಯೋ, ಅದೇ ಮಾರ್ಗದಿಂದ ಸತತ ಪ್ರಯತ್ನದಿಂದ ಸಾಧನೆಗೈಯುವುದೇ ಯಶಸ್ಸು ಎಂದು ಕಲಬುರಗಿ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿಜಯಕುಮಾರ ಜಮಖಂಡಿ ಹೇಳಿದರು. ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘವು ಹಮ್ಮಿಕೊಂಡಿರುವ ಗ್ರಾಮೀಣ ಭಾಗದ ಸರಕಾರಿ ಕನ್ನಡ ಶಾಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ “ನಮ್ಮ ನಡೆ ಹಳ್ಳಿಯ ಸರಕಾರಿ ಕನ್ನಡ ಶಾಲೆಯ ಕಡೆ” ಸರಣಿ ಕಾರ್ಯಕ್ರಮದ ನಿಮಿತ್ಯ ಕಡಣಿ ಹಾಗೂ ಹಡಗಿಲ ಹಾರತಿ ಸರಕಾರಿ ಪ್ರೌಢಶಾಲೆಯಲ್ಲಿ ಹತ್ತನೆ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಾಧಕ ರತ್ನ ಪ್ರಶಸ್ತಿ ನೀಡಿ ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಸ್ಪಷ್ಟವಾಗಿ ನಿರ್ದಿಷ್ಟವಾದ ಗುರಿ ಹೊಂದಿರಬೇಕು ನಿಮ್ಮ ಪಯಣ ಪ್ರಾರಂಭಗೊಳ್ಳುವುದೇ ಒಂದು ಗುರಿಯನ್ನು ನಿಶ್ಚಿತಗೊಳಿಸುವುದರಿಂದ ಈ ನಿಟ್ಟಿನಲ್ಲಿ ನೀವು ಉತ್ತಮ ಕನಸು ಕಾಣಬೇಕು. ಆ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಯಶಸ್ಸು ಮೈಗಳರ ಸ್ವತ್ತಲ್ಲ, ಅದು ಪರಿಶ್ರಮ ವಾದಿಗಳ ಸ್ವತ್ತು ಎಂದು ಮಾರ್ಮಿಕವಾಗಿ ನುಡಿದರು. ಕಾರ್ಯಕ್ರಮ ಉದ್ಘಾಟಿಸಿದ ಕಲಬುರಗಿ ತಹಸಿಲ್ದಾರರಾದ ಗಂಗಾಧರ ಪಾಟೀಲ ಮಾತನಾಡುತ್ತಾ ವಿದ್ಯಾರ್ಥಿಗಳ ಜೀವನ ಬದಲಾವಣೆಯಾಗಲು ಕೆಲವೇ ಕ್ಷಣಗಳು ಸಾಕು ಇಂತಹ ಪ್ರಶಸ್ತಿ ಹಾಗೂ ಸನ್ಮಾನಗಳು ವಿದ್ಯಾರ್ಥಿಗಳ ಸಾಧನೆಗೆ ದಾರಿದೀಪವಾಗುತ್ತವೆ. ಈ ಸಂಘವು ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಪೆÇ್ರೀತ್ಸಾಹ ನೀಡುವುದರೊಂದಿಗೆ ಸರಕಾರಿ ಶಾಲೆಯಲ್ಲಿರುವ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳ ಗಮನಕ್ಕೆ ತರುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ತೀವ್ರವಾಗಿ ಸ್ಪಂದಿಸಿ ಸಮಸ್ಯೆ ಪರಿಹರಿಸುತ್ತೇನೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ವಹಿಸಿದರು. ಮುಖ್ಯ ಅತಿಥಿಗಳಾಗಿ ಕಲ್ಯಾಣ ಕರ್ನಾಟಕ ವಕೀಲರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಅಂಬಾರಾಯ ಪಟ್ಟಣಕರ, ಕಡಣಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮರೆಮ್ಮ ಶರಣಪ್ಪ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ(Pಆಔ) ಗಾಯತ್ರಿ ತೆಗಳ್ಳಿ, ಇಸಿಓ ಶರಣು ಸಾಳೇದ, ಬಿ ಆರ್ ಪಿ ಅರುಣ, ಆಗಮಿಸಿದರು. ಕಡಣಿ ಸರಕಾರಿ ಪ್ರೌಢಶಾಲೆ ಶಾಲೆಯ ಮುಖ್ಯ ಗುರುಗಳಾದ ರವೀಂದ್ರ ಕುಮಾರ ಹೂಗಾರ,
ಹಡಗಿಲ ಹಾರತಿ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಚನ್ನಬಸಪ ಬಿರಾದಾರ, ಸಂಘದ ಸದಸ್ಯರುಗಳಾದ ನ್ಯಾಯವಾದಿ ದೇವಿಂದ್ರಪ್ಪ ಎಕಲೂರ,ಶಿವರುದ್ರ ಕರಿಕಲ, ಕಲಾವಿದ ಮಹೇಶ ತೆಲೆಕುಣಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ
2023 -24ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕಡಣಿ ಹಾಗೂ ಹಡಗಿಲ ಹಾರತಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಪೂಜಾ ಆರ್ ಅಲ್ಲಿಬದಿ, ಬಸ್ಸಮ್ಮ ಜಿ ಬಿರಾದಾರ, ಶಾಂತಲಾ ಎಸ್ ಹಿರೇಮಠ, ಲಕ್ಷ್ಮಿ ಎಸ್ ತಳವಾರ, ಭಾಗ್ಯಶ್ರೀ ಕೆ ಕುಂಬಾರ ಇವರಿಗೆ “ಸಾಧಕ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರು ,ಸಿಬ್ಬಂದಿಗಳು ಪಾಲಕರು, ವಿದ್ಯಾರ್ಥಿಗಳು ಸೇರಿದಂತೆ ಗ್ರಾಮದ ಅನೇಕ ಜನ ಉಪಸ್ಥಿತರಿದ್ದರು.