ಹುಬ್ಬಳ್ಳಿಯಲ್ಲಿ ಸರಣಿ ಅಂಗಡಿ ಕಳ್ಳತನ
ಹುಬ್ಬಳ್ಳಿ,ಜು9: ಹುಬ್ಬಳ್ಳಿ ಶಹರ ಪೆÇಲೀಸ್ ಠಾಣೆ ಹಾಗೂ ಕಮರಿಪೇಟ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ಅಂಗಡಿಗಳ ಸರಣಿ ಕಳ್ಳತನ ಇಂದು ಬೆಳಗಿನ ಜಾವ ನಡೆದಿದೆ.
ನಗರದ ಮಹಾವೀರಗಲ್ಲಿಯಲ್ಲಿ ಹಾಗೂ ಬಟರ್ ಮಾರ್ಕೆಟ್‍ನಲ್ಲಿ 3 ಅಂಗಡಿಗಳ ಕಳ್ಳತನ ನಡೆದಿದೆ.
ಬಟರ್ ಮಾರ್ಕೆಟ್ ಅಂಗಡಿಯೊಂದರಲ್ಲಿ ಸುಮಾರು 60 ಸಾವಿರ ರೂ. ಕಳ್ಳತನವಾಗಿದೆ ಎಂದು ಅಂಗಡಿ ಮಾಲೀಕರು ಈ ಕುರಿತು ದೂರು ನೀಡಿದ್ದಾರೆ.
ಕೆಲ ಅಂಗಡಿಗಳ ಶಟರ್ಸ್‍ಗಳನ್ನು ಮುರಿದಿದ್ದು, ಹಣ ಹಾಗೂ ವಸ್ತುಗಳ ಕಳ್ಳತನವಾಗಿಲ್ಲ ಎಂದು ತಿಳಿದು ಬಂದಿದ್ದು, ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ. ಶಹರ ಪೆÇಲೀಸ್ ಠಾಣೆ ಹಾಗೂ ಕಮರಿಪೇಟ್ ಪೆÇಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.