ಶಾಲಾ ಸಂಸತ್ ರಚನೆ
ಬಾದಾಮಿ,ಜು.9: ತಾಲೂಕಿನ ಕಾತರಕಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಶಾಲಾ ಸಂಸತ್ ರಚನೆ ಮಾಡಲಾಯಿತು.
ಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ ಈ ಕೆಳಗಿನಂತೆ ವಿವಿಧ ಹುದ್ದೆಗಳಲ್ಲಿ ಆಯ್ಕೆ ಮಾಡಲಾಯಿತು. ಪ್ರಧಾನಮಂತ್ರಿ-ಕುಮಾರ ಪ್ರೀತಮ್ ಹುಲ್ಲುರ, ಉಪ ಪ್ರಧಾನಿ-ಕುಮಾರಿ ಪೂರ್ಣಿಮಾ ಶಿವಪುರ, ಶಿಕ್ಷಣ ಮಂತ್ರಿ-ಪ್ರಶಾಂತ್ ಕುರಿ, ಪರಿಸರ ಮಂತ್ರಿ-ರಂಗನಾಥ್ ಕಾಟಾಪುರ, ಆರೋಗ್ಯಮಂತ್ರಿ-ಬಿಂದು ಗೌಡರ. ಗ್ರಂಥಾಲಯ ಮಂತ್ರಿ-ಶ್ರುತಿ ರೇμÉ್ಮ, ಕ್ರೀಡಾ ಮಂತ್ರಿ-ವೀರಣ್ಣ ಹುರುಳಿ, ಪ್ರವಾಸ ಮಂತ್ರಿ-ಮೃತುಂಜಯ ಸಂಕೀನವರ, ಹಣಕಾಸಿನ ಮಂತ್ರಿ-ಸುಶ್ಮಿತಾ ರೋಣದ, ಸಂಸ್ಕøತಿಕ ಚಟುವಟಿಕೆಗಳ ಮಂತ್ರಿ-ಸರಸ್ವತಿ ಕಂಬಳಿ, ಆಹಾರ ಮತ್ತು ಊಟದ ನಿರ್ವಹಣಾ ಮಂತ್ರಿ-ಸುಧಾ ಗೌಡರ ಇವರನ್ನು ಮತದಾನದ ಮೂಲಕ ವಿದ್ಯಾರ್ಥಿಗಳಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಆರ್.ಎಂ.ಸಾರವಾಡ ಸೇರಿದಂತೆ ಶಿಕ್ಷಕ ಸಿಬ್ಬಂದಿಯವರು ಮತ್ತು ಬಿಸಿಯೂಟ ಸಿಬ್ಬಂದಿಯವರು ಉಪಸ್ಥಿತರಿದ್ದು, ಚುನಾಯಿತರಾದಂತ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.