ಉಪನ್ಯಾಸ, ಸಾಧಕರಿಗೆ ಸನ್ಮಾನ
ಧಾರವಾಡ,ಜು.9: ಬಹುಭಾಷಾ ಪಂಡಿತರಾಗಿದ್ದ ವೀರಪ್ಪ ವೀರಭದ್ರಪ್ಪ ನಾಗಶೆಟ್ಟಿ 20ನೆಯ ಶತಮಾನದಆರಂಭದಲ್ಲಿಕನ್ನಡ ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆಯನ್ನು ನೀಡಿದವರುಎಂದು ಸಾಹಿತಿ, ವಿಶ್ರಾಂತಕನ್ನಡ ಪ್ರಾಧ್ಯಾಪಕಡಾ. ವೀರಣ್ಣರಾಜೂರಅವರು ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ವೀರಪ್ಪ ವೀರಭದ್ರಪ್ಪ ನಾಗಶೆಟ್ಟಿದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ' ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾಗಶೆಟ್ಟಿಅವರು ಮುಲ್ಕಿ ಪರೀಕ್ಷೆ ಪಾಸಾಗಿ ಒಬ್ಬ ಶ್ರೇಷ್ಠ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುವುದರ ಮೂಲಕ ಅಂದಿನ ಶಿಕ್ಷಣ ಕ್ಷೇತ್ರಕ್ಕೆಆದರ್ಶವಾಗಿ ಶಿಕ್ಷಕರಿಗೆ ಮಾರ್ಗದರ್ಶಕರಾದರು.ಅವರಜ್ಞಾನಅಪರಿಮಿತವಾಗಿತ್ತು.ಕನ್ನಡ, ಸಂಸ್ಕøತ, ಮರಾಠಿ ಮತ್ತುಇಂಗ್ಲೀಷ ನಾಲ್ಕು ಭಾಷೆಗಳಲ್ಲಿ ಪ್ರಾವಿಣ್ಯತೆ ಹೊಂದಿದ್ದರು.ಆಗಿನ ಶಿಕ್ಷಣ ಪದ್ಧತಿಯಲ್ಲಿ ಹಲವು ಭಾಷೆಗಳ, ಶಾಸ್ತ್ರಗಳ ಅಧ್ಯಯನ ಮುಖ್ಯವಾಗಿತ್ತು.ಅದರ ಫಲವಾಗಿ ವೀರಪ್ಪನವರು ಸೃಜನಶೀಲ ಲೇಖಕರಾಗಿ, ಅನುವಾದಕರಾಗಿ, ಬರಹಗಾರರಾಗಿ, ಕನ್ನಡ ಸಾಹಿತ್ಯಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯಕುರಿತು ಹೆಚ್ಚಿನಅಧ್ಯಯನ ನಡೆಯಬೇಕಾಗಿದೆಎಂದರು. ವೀರಪ್ಪ ನಾಗಶೆಟ್ಟಿಯವರ ಬದುಕು-ಬರಹ’ ವಿಷಯಕುರಿತಂತೆ ನಿವೃತ್ತಉಪನ್ಯಾಸಕ ವೀರಣ್ಣಅಗಳಗಟ್ಟಿ ಮಾತನಾಡುತ್ತಾ, ವೀರಪ್ಪ ನಾಗಶೆಟ್ಟಿಅವರ ಬದುಕು ಸಮಾಜಕ್ಕೆ ಮಾದರಿಯ ಬದುಕು. ಅವರಲ್ಲಿ ಸಮಾಜದ ಬಗ್ಗೆ ಇದ್ದ ಕಳಕಳಿ ಮತ್ತು ಸಮಾಜದ ಏಳಿಗೆಗಾಗಿ ತೊಡಗಿಸಿಕೊಂಡ ರೀತಿ ಇಂದಿಗೂ ಮಾದರೀಯವಾಗಿದೆ.ಆದರ್ಶ ಶಿಕ್ಷಕರೆನಿಸಿಕೊಂಡತೆಯೇ ಸಮಾಜ ಸುಧಾರಕರೂ ಎಂದೆನಿಸಿಕೊಂಡರು.ಅವರಧರ್ಮಶ್ರದ್ಧೆಆದರಣೀಯವಾದದ್ದು.ಅವರು ರಚಿಸಿದ ಹಲವು ಕೃತಿಗಳಲ್ಲಿ ಕವನಗಳು, ಒಗಟುಗಳು, ಹಾಸ್ಯಗಳು ಒಳಗೊಂಡು ಶಿವಭಕ್ತಿ ಸಾರ, ಹರಿಹರನ ರಗಳೆ, ಕಂನ್ನಾಡು, ಲೋಕೋಕ್ತಿ ವಿಧಾನ, ಶಿವಾನಂದ ಲಹರಿ, ವಜ್ರದುಂಗುರಇಂತಹ ಮೌಲಿಕ ಕೃತಿಗಳನ್ನು ಹಳಗನ್ನಡ ಹಾಗೂ ಛಂದಸ್ಸಿಗೆ ಅನುಗುಣವಾಗಿ ರಚಿಸಿದರು. ಹಳಗನ್ನಡದಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದರುಎಂದರು.
ಡಾ. ಎನ್.ಜಿ. ಮಹಾದೇವಪ್ಪಅವರಜೀವಮಾನದ ಸಾಧನೆಗಾಗಿ ಸನ್ಮಾನಿಸಲಾಯಿತು. ಚನ್ನಮ್ಮನಕಿತ್ತೂರುಎಸ್.ಜಿ. ಹೈಸ್ಕೂಲ ವಿದ್ಯಾರ್ಥಿ ಕು.ಶ್ರವಣಚಂದಪ್ಪ ಮೇಟ್ಯಾಲ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಸನ್ಮಾನಿಸಲಾಯಿತು.
ಶ್ರೀಮತಿ ಅಕ್ಕಮಹಾದೇವಿ ಸದಾನಂದ ನಾಗಶೆಟ್ಟಿ, ಎಸ್.ಎಸ್. ನಾಗಶೆಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶಂಕರ ಕುಂಬಿ ಸ್ವಾಗತಿಸಿದರು.ಡಾ. ಧನವಂತ ಹಾಜವಗೋಳ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ಅತಿಥಿಗಳನ್ನು ಪರಿಚಯಿಸಿದರು.ಗುರು ಹಿರೇಮಠ ವಂದಿಸಿದರು.ಪ್ರೊ.ಧನವಂತ ಹಾಜವಗೋಳ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸತೀಶತುರಮರಿ, ಎಸ್.ಎನ್. ಬಣಕಾರ, ಬಿ.ಎಸ್. ಸಂಗಟಿ, ಜಿ.ಬಿ. ಹಳ್ಯಾಳ, ಸಿ.ಎಸ್. ಪಾಟೀಲ, ಸುರೇಶ ಹಿರೇಮಠ, ಮಹಾಂತೇಶ ನರೇಗಲ್, ಮೋಹನ ಪಾಟೀಲ, ರಾಜಶೇಖರ ನಾಗಶೆಟ್ಟಿ, ರತ್ನಾಎಲಿಗಾರ, ಪ್ರಭಾವತಿ ನಾಗಶೆಟ್ಟಿ, ಶಿವಾನಂದ ಕೊಟ್ರಶೆಟ್ಟಿ, ಶಂಕರ ಕೋಳಿ, ಎಸ್.ವಿ. ದಳವಾಯಿ, ಜೋತಿ ಭಾವಿಕಟ್ಟಿ ಸೇರಿದಂತೆ ಮುಂತಾದವರಿದ್ದರು.