ಕಾಲುವೆ ಸೈಫನ್ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ಮುನವಳ್ಳಿ, ಜು9: ಕೆ.ಎ.ಬಿ ಹತ್ತಿರ ಶಿಂದೋಗಿ ಕ್ರಾಸ್‍ನಲ್ಲಿ ಮಲಪ್ರಭಾ ಎಡದಂಡೆ ಕಾಲುವೆಯ ಸೈಫನ್ ಒಡೆದು ಎರಡು ವರ್ಷ ಕಳೆದರು ದುರಸ್ತಿ ಗೋಳಿಸದ ಹಿನ್ನಲೆಯಲ್ಲಿ ಸೋಮವಾರ ರಾಜ್ಯ ಹೆದ್ದಾರಿಯನ್ನು ಬಂದ ಮಾಡಿ ಸರಕಾರದ ವಿರುದ್ದ ಬ್ರಹತ್ ಪ್ರತಿಭಟನೆ ನಡೆಯಿತು.
ನಂತರ ಬಿಜೆಪಿ ಮುಖಂಡ ಮಾಂತೇಶ ಕವಟಗಿಮಠ ಸ್ಥಳಕ್ಕೆ ಆಗಮಿಸಿ ನಿರಾವರಿ ನಿಗಮದ ಎಮ್.ಡಿ ಹಾಗೂ ಮುಖ್ಯ ಇಂಜಿನಿಯರಗಳ ಜೊತೆಗೆ ದೂರವಾಣಿ ಮುಖಾಂತರ ಮಾತನಾಡಿ ಈಗಾಗಲೆ ಮುಖ್ಯಮಂತ್ರಿಗಳ ಜೊತೆ ಹಾಗೂ ಸಂಬಂದಪಟ್ಟ ಅಧಿಕಾರಿಗಳಿಂದ ಅಂದಾಜು ಪ್ರತಿ ತಯಾರಿಸಿದ್ದು ಇದೆ. ಇನ್ನು 15 ದಿನದಲ್ಲಿ ಟೆಂಡರ ಕರೆದು ಕಾಮಗಾರಿಯನ್ನು ಪ್ರಾರಂಭಿಸುವದಾಗಿ ತಿಳಿಸಿದರು. ಒಂದು ವೇಳೆ 15 ದಿವಸದಲ್ಲಿ ಟೆಂಡರ ಅಥವಾ ಕಾಮಗಾರಿ ಪ್ರಾರಂಭವಾಗದಿದ್ದರೆ ಧಾರವಾಡದ ಎಮ್.ಡಿಯವರ ಆಫೀಸ ಮುಂದೆ ಎಲ್ಲ ರೈತರ ಸಹಯೋಗದಲ್ಲಿ ಧರಣಿ ಮಾಡುವುದಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಛರಿಕೆ ನೀಡಿ ಪ್ರತಿಭಟನೆಯನ್ನು ಹಿಂಪಡೆಯಲು ತಿಳಿಸಿದರು.
ಆ ಪ್ರಕಾರ ಶಿಂದೋಗಿ, ಯಕ್ಕೇರಿ, ಹಿರೂರ, ಹಳ್ಳೂರ, ಬಂಡಾರಹಳ್ಳಿ, ತೇರೆದಕೊಪ್ಪ, ಬೊಚಬಾಳ ಗ್ರಾಮಗಳ ಸಾವಿರಾರು ಜನ ರೈತರು ಸೇರಿದ್ದರು. ರೈತರನ್ನು ಉದ್ದೇಶಿಸಿ ವಿರೂಪಾಕ್ಷ ಮಾಮನಿ, ಜಗದೀಶ ಕೌಜಗೆರಿ, ಉಮೇಶ ದಂಡಿನ, ಶಿವಾನಂದ ಮೇಟಿ, ಸುಭಾಸ ಗಿದಿಗೌಡ, ಮಾತನಾಡಿ ಸಾವಿರಾರು ಎಕರೆ ಹೊಲಗಳಿಗೆ ಈ ಸೈಪಾನದಿಂದ ನೀರು ಒದಗಿಸುತಿದ್ದರು. ಈ ಸೈಪಾನ ಒಡೆದು ಹೋಗಿದ್ದರಿಂದ ಎರಡು ವರ್ಷದಿಂದ ರೈತರ ಹೊಲಗಳಿಗೆ ನೀರು ಇಲ್ಲದೆ ಸರಿಯಾಗಿ ಬೆಳೆ ಇಲ್ಲದ ಕಾರಣ ರೈತರು ಸಂಕಷ್ಟದಲ್ಲಿ ಇರುವರು. ಈ ಸೈಪಾನ ದುರಸ್ತಿಗೊಳಿಸಿಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ರೈತರು ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಕ್ಯಾರೆ ಅನ್ನಲಿಲ್ಲ. ಆದಕಾರಣ ಇಂದು ಈ ಪ್ರತಿಭಟನೆ ಕೈಗೊಳ್ಳಬೇಕಾಯಿತು ಎಂದರು.
ಬಿಜಿಪಿ ಜಿಲ್ಲಾ ಅಧ್ಯಕ್ಷ ಸುಭಾಸ ಪಾಟೀಲ, ತಾಲೂಕ ಅಧ್ಯಕ್ಷ ಈರಣ್ಣ ಚಂದರಗಿ, ರಮೇಶ ಗೋಮಾಡಿ, ಶೇಖರ ಗೋಕಾಂವಿ, ಮಾಂತೇಶ ಕುರಬಟ್ಟಿ, ಸುರೇಶ ಕುರಬಟ್ಟಿ, ಮಲ್ಲಿಕಾರ್ಜುನ ರಡರಟ್ಟಿ, ಸುರೇಶ ಅಮಠೆ, ಮಡಿವಾಳಯ್ಯ ಹಿರೇಮಠ, ಅನೀಲ ಕದಂ, ಅಪ್ಪು ನುಗ್ಗಾನಟ್ಟಿ. ನೀರಾವರಿ ಇಲಾಖೆಯ ಅಧಿಕಾರಿಗಳಾದ ಎಡಬ್ಲು ಮುದಿಗೌಡ್ರ, ಇತರರು ಉಪಸ್ಥಿತರಿದ್ದರು.