ನಾವು ಸಂರಕ್ಷಿಸಬೇಕಿದೆ ನಮ್ಮ ಕಪ್ಪತಗುಡ್ಡ
ಲಕ್ಷ್ಮೇಶ್ವರ,ಜು9: ಉತ್ತರ ಕರ್ನಾಟಕದ ಸಹ್ಯಾದ್ರಿ ಬೆಟ್ಟದ ಸಾಲು ಎಂದೇ ಕರೆಯಲ್ಪಡುವ ಕಪ್ಪತಗುಡ್ಡ ತನ್ನದೇ ಆದ ವೈಶಿಷ್ಟ್ಯಮಯ ಸಸ್ಯ ಸಂಪತ್ತು ಖನಿಜ ಸಂಪತ್ತು ಗಿಡಮೂಲಿಕೆಗಳ ಸಂಪತ್ತನ್ನು ಹೊಂದಿರುವ ಈ ಭಾಗದ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ.
ಸಮುದ್ರ ಮಟ್ಟದಿಂದ 750 ಮೀಟರ್ ಎತ್ತರದಲ್ಲಿರುವ ಕಪ್ಪತಗುಡ್ಡ ಪ್ರದೇಶವು ಸಾಧು ಸಂತರು ಋಷಿ ಮುನಿಗಳ ದೇವಾನು ದೇವತೆಗಳ ತಾಣವಾಗಿತ್ತು ಎಂಬ ಉಲ್ಲೇಖವಿದೆ ಅದಕ್ಕಾಗಿಯೇ ಕಪ್ಪತ ಗುಡ್ಡದ ಕುರಿತು ಎಪ್ಪತ್ತು ಗಿರಿಗಿಂತಲೂ ಕಪ್ಪತಗಿರಿ ಮೇಲು ಎಂಬ ನಾ ಣ್ಣುಡಿ ಇದೆ ಹನುಮಂತ ಇಲ್ಲಿಂದಲೇ ಸಂಜೀವಿನಿ ಕಡ್ಡಿಯನ್ನು ತೆಗೆದುಕೊಂಡು ಹೋಗಿದ್ದ ಎಂಬ ಪ್ರತೀತವೂ ಇದೆ.
ಕಪ್ಪತ್ತು ಗುಡ್ಡ ಪ್ರದೇಶವು ಒಟ್ಟು 17 872 ಹೆಕ್ಟರ್ ಪ್ರದೇಶವನ್ನು ಹೊಂದಿದ್ದು ಮುಂಡರಗಿ ತಾಲೂಕಿನಲ್ಲಿ ಅತ್ಯಧಿಕವಾದ 15 433 ಹೆಕ್ಟರ್ ಪ್ರದೇಶವನ್ನು ಗದಗ ತಾಲೂಕಿನಲ್ಲಿ 401.811 ಹೆಕ್ಟರ್ ಪ್ರದೇಶವನ್ನು ಶಿರಹಟ್ಟಿ ತಾಲೂಕಿನಲ್ಲಿ 2016 ಹೆಕ್ಟರ್ ಪ್ರದೇಶವನ್ನು ಹೊಂದಿದೆ.
ಕಪ್ಪತ್ತು ಗುಡ್ಡ ಪ್ರದೇಶವು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಪ್ರದೇಶದಂತೆ ಚಾರಣಗರಿಗೆ ಅತ್ಯುತ್ತಮ ಆಕರ್ಷಣೀಯ ಸ್ಥಾನವಾಗಿದೆ ಹೆಚ್ಚು ಹಸಿರಿನಿಂದ ಕಂಗೊಳಿಸುವ ಈ ಗುಡ್ಡದ ಮೇಲೆ ಬೀಸುವ ಗಾಳಿ ಒಂದು ರೀತಿಯ ಅನುಭವವನ್ನು ನೀಡುತ್ತದೆ.
ಇದೊಂದು ಅಪರೂಪದ ಗಿಡಮೂಲಿಕೆಗಳ ಔಷಧಿಯ ಸಸ್ಯಗಳ ತಾಣವಾಗಿದೆ 89. 92 ಹೆಕ್ಟರ್ ಔಷದೀಯ ಸಸ್ಯ ಹಾಗೂ ವನಸ್ಪತಿಗಳನ್ನು ಹೊಂದಿರುವ ಅಮೂಲ್ಯ ತಾಣ ವಾಗಿದೆ.
ಕಪ್ಪತ್ತು ಗುಡ್ಡ ಪ್ರದೇಶವನ್ನು ಸರ್ಕಾರ ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಣೆ ಮಾಡಿದ್ದು ಇತ್ತೀಚೆಗಷ್ಟೇ ಶ್ರೇಷ್ಠ ನ್ಯಾಯಾಲವು ಈ ಪ್ರದೇಶದಲ್ಲಿ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಮಾಡದಂತೆ ಆದೇಶ ಹೊರಡಿಸಿರುವುದು ಪರಿಸರ ಪ್ರೇಮಿಗಳಲ್ಲಿ ಸಂತಸವನ್ನುಂಟು ಮಾಡಿದೆ ವನ್ಯಧಾಮ ಜೀವಿ ಮಂಡಳಿ ಕಪ್ಪತ ಗುಡ್ಡದ ಪ್ರದೇಶ ಕುರಿತಂತೆ ಹೆಚ್ಚು ಕಾಳಜಿ ವಹಿಸಿರುವುದು ಜನರಲ್ಲಿ ಇದನ್ನು ಕಾಯ್ದುಕೊಂಡು ಹೋಗುವ ಮನೋಭಾವ ವ್ಯಕ್ತವಾಗುತ್ತಿದೆ.
ಈ ಕುರಿತು ಅರಣ್ಯ ಇಲಾಖೆಯವರು ಸದಾ ಗಸ್ತಿನಿಂದ ಕಪ್ಪತ್ ಗುಡ್ಡವನ್ನು ಕಣ್ಗಾವಲು ಇಟ್ಟಿದ್ದಾರೆ ಯಾವುದೇ ಗಣಿಗಾರಿಕೆ ಈ ಪ್ರದೇಶದಲ್ಲಿ ನಡೆಯದಂತೆ ಪರಿಸರವಾದಿಗಳು ಸಹ ಹೆಚ್ಚು ಕಾಳಜಿ ಹೊಂದಿದ್ದಾರೆ.