ಅವಿರೋಧ ಆಯ್ಕೆ
ಚನ್ನಮ್ಮನ ಕಿತ್ತೂರ,ಜು9: ತಾಲೂಕಿನ ವೀರಾಪೂರ ಗ್ರಾ.ಪಂ.ಗೆ ಎರಡನೇ ಅವಧಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಲ್ಲಿಸಾಬ.ಜ.ತಳಗಡೆ, ಉಪಾಧ್ಯಕ್ಷರಾಗಿ ಮಂಜುನಾಥ.ವಿ. ಸಾಧುನ್ನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 6 ಸದಸ್ಯರ ಬಲ ಹೊಂದಿದ ಈ ಗ್ರಾ.ಪಂ.ದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಹಾಗಾಗಿ ಎರಡು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ.
ಚುನಾವಣಾಧಿಕಾರಿಯಾಗಿ ತಾಪಂ ಇಓ ಕಿರಣ ಘೋರ್ಪಡೆ ಸಹಾಯಕ ಚುನಾವಣಾಧಿಕಾರಿಯಾಗಿ ಪಿಡಿಓ ಕುಮಾರಿ ಎಸ್.ಎಂ.ಪಾಟೀಲ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ವಸೂಲಿ ಕ್ಲರ್ಕ ಮತ್ತು ವಾಟರಮನ್ ಹಸನಸಾಬ ತಳಗಡೆ, ಸರ್ವ ಸದಸ್ಯರು ಮತ್ತು ಸಿಬ್ಬಂದಿಯವರು ಸತ್ಕರಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ತಳಗಡೆಯವರು ನನ್ನ ಅವಧಿಯಲ್ಲಿ ಜಾತಿ-ಭೇದ ಮರೆತು ಗ್ರಾಮಕ್ಕೆ ನನ್ನಿಂದ ಚ್ಯುತಿ ಬರದ ಹಾಗೇ ನಡೆದುಕೊಂಡು ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸಿ ಗ್ರಾಮವನ್ನು ಅಭಿವೃದ್ಧಿ ಪಡಿಸುವುದರಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರು.
ಈ ವೇಳೆ ಸದಸ್ಯರುಗಳಾದ ಸಂಗಪ್ಪ.ತಿ.ಪಿಶಿ, ಶ್ರೀಮತಿ ಅನು.ಬ.ಪಾಟೀಲ, ಶ್ರೀಮತಿ ಕಾಶವ್ವಾ.ರು.ಕಿಲಾರಿ, ರಾಜಶೇಖರ.ಮ.ನಡುವಿನಮನಿ, ಸೇರಿದಂತೆ ಗ್ರಾಪಂ ಸಿಬ್ಬಂದಿ, ಗ್ರಾಮದ ಹಿರಿಯರು, ಸಾರ್ವಜನಿಕರು ಉಪಸ್ಥಿತರಿದ್ದರು.