`ಟ್ಯಾಲೆಂಟ್ಸ್ ಡೇ’ ಕಾರ್ಯಕ್ರಮ
ಗುಳೇದಗುಡ್ಡ,ಜು9: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ಪ್ರತಿಭೆ ಹುದುಗಿರುತ್ತದೆ. ಟ್ಯಾಲೆಂಟ್ಸ್ ಡೇ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಅವಕಾಶವಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಬೇಕು. ಇದರಿಂದ ನಿಮ್ಮ ಪ್ರತಿಭೆಗೆ ಪ್ರೋತ್ಸಾಹ ದೊರೆಯುತ್ತದೆ ಎಂದು ರಾಠಿ ಹಾಗೂ ಕಾವಡೆ ಆಂಗ್ಲ ಮಾಧ್ಯಮ ಶಾಲೆಯ ಚೇರಮನ್ ಅಶೋಕ ಹೆಗಡೆ ಹೇಳಿದರು.
ಅವರು ಸ್ಥಳೀಯ ರಾಠಿ ಹಾಗೂ ಕಾವಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಟ್ಯಾಲೆಂಟ್ಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪ್ರತಿಭೆಯನ್ನು ಹೊರಹಾಕುವ ಇನ್ನಿತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಪ್ರಾಥಮಿಕ ಶಾಲೆ ಮಕ್ಕಳು ಏಕಪಾತ್ರಾಭಿನಯ ಪಾತ್ರದಲ್ಲಿ ವೀರವನಿತೆ ಕಿತ್ತೂರ ಚೆನ್ನಮ್ಮ ಹಾಗೂ ಒನಕೆ ಓಬವ್ವ ಪಾತ್ರ, ಜಾನಪದ, ದೇಶಭಕ್ತಿಗೀತೆ ಮತ್ತು ಭರತನಾಟ್ಯ ನೃತ್ಯದಲ್ಲಿ ಪ್ರತಿಭೆಯನ್ನು ಪ್ರದರ್ಶಿಸಿದರು.
ಸಂಸ್ಥೆಯ ಸದಸ್ಯರಾದ ವಿಠ್ಠಲಸಾ ಕಾವಡೆ, ಶ್ಯಾಮಸುಂದರ ಮಾಲಪಾಣಿ, ಪುರುಷೋತ್ತಮ ಝಂವರ, ಮುಖ್ಯೋಪಾಧ್ಯಾಯರಾದ ವಿ. ಬಿ. ಹಳ್ಳೂರ, ಜೆ.ಜೆ. ಲೋಬೋ, ಸುಜಾತಾ ಕರಡಿಗುಡ್ಡ, ಶಿಕ್ಷಕರಾದ ಸಂಗೀತಾ ಪರ್ವತೀಕರ, ಶೋಭಾ ಕಾವಡೆ, ಪೂರ್ಣಿಮಾ ಜವಳಿ, ಸಿ.ಎ. ಪರಗಿ, ಯು. ಕೆ. ಪೂಜಾರ, ಶಿವಕುಮಾರ ಪುರಾಣಿಕಮಠ, ಎಚ್.ಎಂ. ಜಿತೂರಿ, ಎಸ್.ಅರ್.ದೊಡಮನಿ ಮತ್ತಿತರರು ಇದ್ದರು.