ವಾಡಿ: ರಸ್ತೆ ಮೇಲೆ ಚರಂಡಿ ನೀರು, ಸಂಚಾರಕ್ಕೆ ಅಡ್ಡಿ
ವಾಡಿ,ಜು.9- ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯ ಪರಿಣಾಮವಾಗಿ ಇಲ್ಲಿನ ರಸ್ತೆಗಳ ಮೇಲೆ ಚರಂಡಿ ನೀರು ನಿಲ್ಲುವಂತಾಗಿದೆ.
ನಿನ್ನೆ ಸುರಿದ ಮಳೆಯಿಂದ ಚರಂಡಿ ನೀರು ರಸ್ತೆ ಮೇಲೆ ಮತ್ತು ಅಕ್ಕಪಕ್ಕದ ಮನೆಗಳಿಗೆ ನುಗ್ಗುವಂತಾಗಿದೆ. ರಸ್ತೆ ಯಾವುದೋ ಚರಂಡಿ ಯಾವುದೋ ಗೊತ್ತಾಗದೇ ವಾಹನ ಸಂಚಾರರು ಹರಸಹಸ ಪಡುವಂತಾಗಿದೆ.
ಒಂದೇ ಮಳೆಗೆ ಹೀಗಾದರೆ ಮುಂದೆ ಸುರಿಯುವ ಭಾರಿ ಮಳೆಯಿಂದ ಇಲ್ಲಿನ ರಸ್ತೆ ಮತ್ತು ಚರಂಡಿಗಳು ಕಿತ್ತಿಕೊಂಡು ಹೋಗುವ ಸಾಧ್ಯತೆ ಇದೆ.
ವಾಡಿ ಪುರಸಭೆ ನಿರ್ಮಿಸಿರುವ ಇಲ್ಲಿನ ರಸ್ತೆ ಹಾಗು ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಇಲ್ಲಿ ತಾಂತ್ರಿಕತೆಯನ್ನು ಬಳಸದೇ ಇರುವುದರಿಂದ ಇಂತಹ ಸಮಸ್ಯೆಗಳು ಉದ್ಭವಗೊಳ್ಳುತ್ತವೆ ಎಂದು ಸಾರ್ವಜನಿಕರ ಆರೋಪವಾಗಿದೆ.
ರಸ್ತೆ ಮೇಲಿನ ನೀರು ಚರಂಡಿಗೆ ಹೋಗದೇ ಚರಂಡಿಯ ನೀರು ಮುಂದೆ ಸಲಿಸಾಗಿ ಹರಿದು ಹೋಗದೇ ರಸ್ತೆ ಮೇಲೆ ನಿಲ್ಲುವಂತಾಗಿದೆ ಈ ಬಗ್ಗೆ ಪುರಸಭೆ ಗಮನ ಹರಿಸುವಂತೆ ಪಟ್ಟಣದ ನಿವಾಸಿಗಳು ಒತ್ತಾಯಿಸಿದ್ದಾರೆ.