ನಾಲೆಗಳಿಗೆ ನೀರು ಬಿಡುಗಡೆ ಮುಂದೂಡಿಕೆ
ಮಂಡ್ಯ, ಜೂ.೯- ಕಾಲುವೆ ಆಧುನೀಕರಣ ಕಾಮಗಾರಿಯಿಂದ ಕೆಆರ್ ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುವುದನ್ನು ಮುಂದೂಡಲಾಗಿದೆ. ಈ ಕಾರಣದಿಂದ ನೀರು ಬಿಡುಗಡೆ ವಿಳಂಬವಾಗಿದೆ.
ನಾಳೆ ಜೂ ೧೦ರಂದು ನಾಲೆಗೆ ನೀರು ಹರಿಸುವ ಸಾಧ್ಯತೆ ಇದೆ. ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸಿ ನಿನ್ನೆ ಸಂಜೆಯಿಂದಲೇ ನೀರು ಬಿಡಲಾಗುವುದು ಎಂದು ಜಿಲ್ಲಾಡಳಿತ ಈ ಮೊದಲು ತಿಳಿಸಿತ್ತು.
ಜೂನ್ ೮ ರಿಂದ ೧೫ ದಿನಗಳ ಕಾಲ ನೀರು ಬಿಡುವುದಾಗಿ ಸಚಿವ ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದರು.ಆದರೆ ವಿಶ್ವೇಶ್ವರಯ್ಯ ನಾಲೆಯ ಆಧುನೀಕರಣ ಕಾಮಗಾರಿಯಿಂದ ನೀರು ಬಿಡುಗಡೆ ವಿಳಂಬವಾಗಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಪೈಪ್‌ಲೈನ್‌ನಲ್ಲಿ ಯಂತ್ರಗಳಿವೆ. ನಾಲೆಯಿಂದ ಯಂತ್ರಗಳನ್ನು ತೆರವುಗೊಳಿಸಿ ನೀರು ಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಂದಿನ ಕೆಆರ್ ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ – ೧೨೪.೮೦ ಅಡಿ.
ಇಂದಿನ ಮಟ್ಟ – ೧೦೩.೪೦ ಅಡಿ.
ಗರಿಷ್ಠ ಸಾಂದ್ರತೆ – ೪೯.೪೫೨ ಟಿಎಂಸಿ
ಇಂದಿನ ಸಾಂದ್ರತೆ – ೨೫.೫೯೪ ಟಿಎಂಸಿ
ಒಳಹರಿವು – ೬,೬೦೦ ಕ್ಯೂಸೆಕ್
ಹೊರಹರಿವು – ೫೭೫ ಕ್ಯೂಸೆಕ್.