ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ, ನಿಲ್ಲಲು ನೆಲ ಬೇಕೇ ಬೇಕು: ಶ್ರೀಮತಿ ಮಾಸ್ಟರ್
ವಿಜಯಪುರ.ಜು.೯- ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ ಅವನು ನಿಲ್ಲಲು ಭೂಮಿ ಬೇಕೇ ಬೇಕಾಗುತ್ತದೆ. ಹಾಗೇ ನಾವು ಏನೇ ಆದರೂ ನಮ್ಮತನವನ್ನು ನಾವು ಬಿಡಬಾರದು ಎಂದು ಇನ್ನರ್ ವೀಲ್ ಜಿಲ್ಲೆ ೩೧೯ರ ಜಿಲ್ಲಾಧ್ಯಕ್ಷೆ ಶ್ರೀಮತಿ ಮಾಸ್ಟರ್ ತಿಳಿಸಿದರು.
ಅವರು ಇಲ್ಲಿನ ಸುಬ್ಬಮ್ಮ ಚೆನ್ನಪ್ಪ ಸಮುದಾಯ ಭವನದಲ್ಲಿ ವಿಜಯಪುರ ಇನ್ನರ್ವಿಲ್ ಕ್ಲಬ್ ನ ೨೦೨೪-೨೫ ನೇ ಸಾಲಿನ ನೂತನ ಪದಾಧಿಕಾರ ಸ್ವೀಕಾರ ಸಮಾರಂಭದಲ್ಲಿ ನೂತನ ಅಧ್ಯಕ್ಷ ರಾದ ಪ್ರೇಮ ನಾಗರಾಜಪ್ಪ ರವರಿಗೆ ಪ್ರಮಾಣವಚನ ಬೋಧಿಸಿ ಮಾತನಾಡುತ್ತಿದ್ದರು.
ನಮ್ಮ ಸುತ್ತಮುತ್ತಲಿನವರಿಗೆ ನಾವು ಮಾಡುವ ಸಹಾಯದಿಂದ ನಮಗೆ ನಿಜವಾದ ಆನಂದ ದೊರೆಯಲಿದ್ದು, ಏನಾದರೂ ಸಾಧಿಸುವ ಇತರರನ್ನು ಬೆಂಬಲಿಸುವ ಮೂಲಕ ಅವರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಮೂಲಕ ನಮ್ಮತನವನ್ನು ನಾವು ಶ್ರೀಮಂತ ಗೊಳಿಸಿಕೊಳ್ಳಬಹುದೆಂದು ತಿಳಿಸಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಪ್ರೇಮ ನಾಗರಾಜಪ್ಪ ರವರು ಮಾತನಾಡಿ, ಇನ್ನರ್ ವೀಲ್‌ನ ಈ ವರ್ಷದ ಸ್ಲೋಗನ್ “ಹಾರ್ಟ್ ಬೀಟ್ ಆಫ್ ಹ್ಯೂಮಾನಿಟಿ” ಎಂಬುದಾಗಿದ್ದು (ಮಾನವೀಯತೆಗಾಗಿ ಹೃದಯ ಮಿಡಿತ) ಎಂದಾಗಿದ್ದು ಎಲ್ಲರಲ್ಲಿಯೂ ದಯೆ ಮತ್ತು ಔದಾರ್ಯತೆಗಳನ್ನು ತೋರುವ ಮೂಲಕ, ಎಲ್ಲರನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬಹುದಾಗಿದೆ ಎಂದು ತಿಳಿಸಿದರು.
ನಿಕಟಪೂರ್ವ ಅಧ್ಯಕ್ಷೆ ನವ್ಯ ನವೀನ್ ಅಧಿಕಾರ ಹಸ್ತಾಂತರಿಸಿ ಮಾತನಾಡಿ ಒಂದೆಡೆ ಇನ್ನರ್ ವೀಲ್ ಸಂಸ್ಥೆಯು ರಜತ ಮಹೋತ್ಸವ ಆಚರಿಸಿ ೨೬ನೇ ವರ್ಷಕ್ಕೆ ಕಾಲಿಟ್ಟಿದ್ದು ಸಂತಸ ಕರ ವಿಷಯವೆಂದು ತಿಳಿಸಿ, ಕಳೆದ ಸಾಲಿನಲ್ಲಿ ೫೧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತೆಂದು ತಿಳಿಸಿದರು.
ನೂತನ ಕಾರ್ಯದರ್ಶಿ ಮಾಲತಿ ಆನಂದ್, ನಿಕಟಪೂರ್ವ ಕಾರ್ಯದರ್ಶಿ ಶೀಲರಾಣಿ ಸುರೇಶ್,ಜಿಲ್ಲಾ ಅಸೋಸಿಯೇಷನ್ ಕೌನ್ಸಿಲ್ ಮೆಂಬರ್ ರೇಖಾಶ್ರೀಧರ್, ಜಿಲ್ಲಾ ಉಪಾಧ್ಯಕ್ಷ ರಜನಿ ಗೌಡ, ಜಿಲ್ಲಾ ಖಜಾಂಚಿ ವೀಣಾ ಪ್ರಮೋದ್, ಅರುಣ ಶ್ರೀನಿವಾಸ್, ಭಾರತಿ ದಿಲೀಪ್, ಮೀರಶರ್ಮ, ಅನುನಂಬಿಯಾರ್, ಮಾಜಿ ಜಿಲ್ಲಾಧ್ಯಕ್ಷ ಆಶಾ ಶೈಲೇಂದ್ರ, ಪುರಸಭೆ ಮಾಜಿ ಅಧ್ಯಕ್ಷರಾದ ರಾಜೇಶ್ವರಿ ಭಾಸ್ಕರ್, ರೋಟರಿ ಸಂಸ್ಥೆಯ ಅಧ್ಯಕ್ಷರಾದ ಎಸ್ ಮಹೇಶ್, ಕಾರ್ಯದರ್ಶಿ ವಿನಯ್ ಕುಮಾರ್, ಮಾಜಿ ಅಧ್ಯಕ್ಷರಾದ ಎನ್.ರುದ್ರಮೂರ್ತಿ, ಸಿದ್ದರಾಜು, ಪತಂಜಲಿ ಯೋಗ ಶಿಕ್ಷಣ ಸಮಿತಿಯ ದೀಪ ರಮೇಶ್, ಭಾರತಿ ಪ್ರಭುದೇವ್, ಅಕ್ಕನ ಬಳಗದ ಅಂಬಾಭವಾನಿ ಉಪಸ್ಥಿತರಿದ್ದರು.
ಸೇವಾ ಕಾರ್ಯಕ್ರಮಗಳ ಮೇರೆಗೆ ಅನಾರೋಗ್ಯ ಪೀಡಿತರಿಗೆ ಔಷಧೋಪಚಾರ ಸಹಾಯ, ಉನ್ನತ ವಿದ್ಯಾಭ್ಯಾಸಕ್ಕೆ ಧನ ಸಹಾಯ, ಅಂಧರ ಶಾಲೆಗೆ ಬ್ರೈಲ್ ಪೇಪರ್ ನೀಡಿಕೆ, ನೀಡಲಾಯಿತು.
ವಿಜಯಪುರ ಇನ್ನರ್ ವೀಲ್ ಕ್ಲಬ್ ನೂತನ ಪದಾಧಿಕಾರಿಗಳು
ಅಧ್ಯಕ್ಷರಾಗಿ ಪ್ರೇಮಾ ನಾಗ ರಾಜಪ್ಪ, ಕಾರ್ಯದರ್ಶಿಯಾಗಿ ಮಾಲತಿ ಆನಂದ್, ನಿಕಟ ಪೂರ್ವ ಅಧ್ಯಕ್ಷರಾಗಿ ನವ್ಯ ನವೀನ್, ಉಪಾಧ್ಯಕ್ಷರಾಗಿ ಮಾನಸ ಪ್ರದೀಪ್, ಸಹಕಾರ್ಯದರ್ಶಿಯಾಗಿ ಸುಷ್ಮಾ ಅಶೋಕ್, ಖಜಾಂಚಿಯಾಗಿ ನಮಿತಾ ಸುಪ್ರೀತ್, ಐಎಸ್‌ಒ ಆಗಿ ಪ್ರೀತಿ ಮಹೇಶ್, ವಿಜಯವೇದಿಕೆ ಸಂಪಾದಕಿಯಾಗಿ ಗಾಯತ್ರಿ ಮಂಜುನಾಥ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸುನಿತಾ ಪ್ರದೀಪ್, ಭಾರತಿ ರಾಜ್, ವೀಣಾ ನಟ ಶೇಖರ್, ರೀಟಾ ನಾಗರಾಜು, ಸಲಹೆಗಾರರಾಗಿ ಆಶಾ ಶೈಲೇಂದ್ರ, ಸಂಸ್ಥಾಪಕ ಅಧ್ಯಕ್ಷೆ ಭಾರತೀ ಶಿವಪ್ರಸಾದ್.
