ವಿದ್ಯಾರ್ಥಿಗಳಿಗೆ ಉಚಿತ ರಕ್ತ ಪರೀಕ್ಷೆ
ಚನ್ನಪಟ್ಟಣ.ಜು.೯-ಪಟ್ಟಣದ ಮಂಗಳವಾರಪೇಟೆ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ರಕ್ತದ ಗುಂಪು ಪರೀಕ್ಷೆ ಮಾಡಿಸಲಾಯಿತು. ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್, ಎಂ.ಆರ್.ಐ, ಸ್ಕ್ಯಾನಿಂಗ್ ಸೆಂಟರ್ ಜೀವಾಮೃತ ಬ್ಲಡ್ ಬ್ಯಾಂಕ್ ನ ವ್ಯವಸ್ಥಾಪಕರಾದ ಚಂದ್ರುರವರ ನೆರವಿನಿಂದ ಹೆಲ್ತ್ ಕ್ಯಾಂಪ್ ಮೂಲಕ ಮಂಗಳವಾರಪೇಟೆ ಪ್ರೌಢಶಾಲೆಯ ೯೫ ವಿದ್ಯಾರ್ಥಿಗಳಿಗೆ ಉಚಿತವಾಗಿ ರಕ್ತದ ಗುಂಪು ಪರೀಕ್ಷೆಯನ್ನು ಮಾಡಲಾಯಿತು.
ವ್ಯವಸ್ಥಾಪಕರಾದ ಚಂದ್ರುರವರಿಗೆ ಶಾಲೆಯ ಮುಖ್ಯ ಶಿಕ್ಷಕರಾದ ಮಂಜಪ್ಪ ಎಂ.ತಾಲ್ಲೂಕು ಕರ್ನಾಟಕ ಸೆಕೆಂಡರಿ ಶಿಕ್ಷಕ ಸಂಘದ ಅಧ್ಯಕ್ಷರಾದ ರಂಗನಾಥ ಜಿ.ಕೆ, ಸುನೀತಾ ಬಿ.ಎಸ್, ಈರಾನಾಯಕ್, ಭವ್ಯಶ್ರೀ ಹೆಚ್.ಎಸ್ ಸೌಮ್ಯನಾಯ್ಕ್, ಲಕ್ಷ್ಮೀ ಎಸ್, ರಶ್ಮೀ, ಪುಟ್ಟಪ್ಪ, ಟಿ.ಅರ್, ನಜ್ಮಾ, ರವರು ಅಭಿನಂದನೆಗಳನ್ನು ವ್ಯಕ್ತಪಡಿಸಿದರು.