ಅದ್ಧೂರಿ ಪುರಿ ಜಗನ್ನಾಥ ರಥಯಾತ್ರೆ
ಆನೇಕಲ್. ಜು. ೦೯- ಸರ್ಜಾಪುರದಲ್ಲಿ ಪ್ರಥಮ ಬಾರಿಗೆ ಒರಿಸ್ಸಾದ ಬಂದುಗಳಿಂದ ಅದ್ದೂರಿಯಾಗಿ ನಡೆದ ಪುರಿ ಜಗನ್ನಾಥ ರಥಯಾತ್ರೆ ಕಾರ್ಯಕ್ರಮ.
ಇನ್ನು ಆಶಾಡ ಮಾಸದಲ್ಲಿ ಪುರಿಯಲ್ಲಿ ಅದ್ದೂರಿಯಾಗಿ ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆಯು ನಡೆಯಲಿದ್ದು, ಪುರಿಯಲ್ಲಿ ನಡೆಯುವ ರೀತಿಯಲ್ಲಿಯೇ ಇಂದು ಸರ್ಜಾಪುರದಲ್ಲಿ ಒರಿಸ್ಸಾದ ಬಂದುಗಳಿಂದ ಪುರಿ ಜಗನ್ನಾಥ ರಥಯಾತ್ರೆಯನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಡ ಅಗ್ರಹಾರ ಜಯಪ್ರಕಾಶ್, ಸರ್ಜಾಪುರ ಭರತ್ ಗೌಡ, ಸೋಂಪುರ ಪುನೀತ್ ರೆಡ್ಡಿ, ಅನಿಲ್, ಜೈಮುನಿ. ದುರ್ಗಾಜಿ. ಕೇಶವನ್ ಮತ್ತು ಒರಿಸ್ಸಾದ ಬಂದುಗಳು, ಸ್ಥಳೀಯ ಮುಖಂಡರುಗಳು ಭಾಗವಹಿಸಿದ್ದರು.