ಸಮಾಜಮುಖಿ ಕಾರ್ಯಗಳಿಗೆ ಸಂಪತ್ತನ್ನ ವ್ಯಯಮಾಡಿ
ಆನೇಕಲ್.ಜು.೯- ನಾವು ಬದುಕುವುದಕ್ಕೆ ಸಮಾಜ ನಮಗೆ ಎಲ್ಲವನ್ನು ನೀಡಿದೆ ಅಂತಹ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ಅರಿತು ಪ್ರತಿಯೊಬ್ಬರು ಬಾಳಬೇಕಿದೆ ಎಂದು ರಾಷ್ಠೀಯ ಯುವ ಪ್ರಶಸ್ಥಿ ಪುರಸ್ಕೃತ ಡಾ. ಚಿನ್ನಪ್ಪ ಚಿಕ್ಕಹಾಗಡೆರವರು ತಿಳಿಸಿದರು.
ಸಿಂಗಸಂದ್ರ ಗ್ರಾಮದಲ್ಲಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಚಿನ್ಮಯ ಸೇವಾ ಸಂಸ್ಥೆಯಿಂದ ಆಯೋಜಿಸಿದ್ದ ಶಾಲಾ ಬ್ಯಾಗ್, ನೋಟ್ ಪುಸ್ತಕ ಸೇರಿದಂತೆ ಕಲಿಕಾ ಸಾಮಾಗ್ರಿಗಳನ್ನು ಉಚಿತವಾಗಿ ವಿತರಣೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದರು. ಪ್ರತಿಯೊಬ್ಬರು ಸಹ ತಾವು ಗಳಿಸಿದ ಸಂಪಾದನೆಯಲ್ಲಿ ಇಂತಿಷ್ಠು ಸಂಪತ್ತನ್ನು ಸಮಾಜಮುಖಿ ಕಾರ್ಯಕ್ರಮಗಳಿಗೆ ವ್ಯಯಮಾಡಿ, ಸಂಕಷ್ಠದಲ್ಲಿರುವರಿಗೆ ನೆರವಾಗಬೇಕು ಎಂದರು.
ವಿದ್ಯಾರ್ಥಿಗಳು ಸಹ ಉತ್ತಮವಾಗಿ ವಿದ್ಯಾಬ್ಯಾಸ ಮಾಡಿ ತಾವು ಕಲಿತ ಶಾಲೆಗೆ ಮತ್ತು ಗ್ರಾಮಕ್ಕೆ ಹೆಸರು ತರುವಂತಹ ಕೆಲಸಮಾಡಬೇಕು ಜೊತೆಗೆ ಗುರುಗಳನ್ನು, ಹಿರಿಯರನ್ನು ಗೌರವಿಸುವಂತಹ ಸಂಸ್ಕಾರವನ್ನು ತಮ್ಮ ನಿತ್ಯ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಮತ್ತು ಕಲಿಕೆಯ ಸಮಯದಲ್ಲಿ ವಿದ್ಯಾರ್ಥಿಗಳು ಬೇರೆಡೆಗೆ ಆಕಕ್ಷಣೆಗೆ ಒಳಗಾಗದೆ ಶ್ರದ್ದೆ ವಿದ್ಯಾಬ್ಯಾಸ ಮಾಡಿದೇಶಕ್ಕೆ ಉತ್ತಮ ಪ್ರಜೆಗಳಾಗಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿನ್ಮಯ ಸೇವಾ ಸಂಸ್ಥೆಯ ಕಾರ್ಯದರ್ಶಿ ಚಂದಾಪುರ ಮಹೇಶ್. ಟಿ.ಎಸ್.ಕುಮಾರಾಚಾರಿ, ಸಿಂಗಸಂದ್ರ ಗ್ರಾಮದ ಮಹಿಳಾ ಮುಖಂಡರಾದ ನಾಗರತ್ನ, ಶಿಕ್ಷಕರಾದ ವಿಜಯ, ಮೀನಾಕ್ಷಿ, ವಿದ್ಯಾರ್ಥಿಗಳು ಹಾಜರಿದ್ದರು.