ಪ್ರಪಂಚಕ್ಕೆ ವಚನ ಸಾಹಿತ್ಯ ಪರಿಚಯಿಸಿದ ಕೀರ್ತಿ ಡಾ. ಫ.ಗು. ಹಳಕಟ್ಟಿಯವರದ್ದು: ಹಾಸಿಂಪೀರ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.9:ವಚನ ಸಾಹಿತ್ಯವನ್ನು ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ ಡಾ. ಫ.ಗು. ಹಳಕಟ್ಟಿಯವರಿಗೆ ಸಲ್ಲುತ್ತದೆ. ವಚನ ಸಾಹಿತ್ಯದ ಜೊತೆಗೆ ಸಹಕಾರ ಸಂಸ್ಥೆ, ಪತ್ರಿಕೋದ್ಯಮ ಹಾಗೂ ಸ್ಥಳೀಯ ಆಡಳಿತ ಸಲ್ಲಿಸಿದ ಉತ್ತಮ ಸೇವೆ ಇಂದಿಗೂ ಅವಿಸ್ಮರಣೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಜಯಪುರ ಜೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಡಾ. ಫ.ಗು. ಹಳಕಟ್ಟಿಯವರ ಕುರಿತ ಚಿಂತನ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ಬದುಕಿನ ಕಷ್ಟದ ದಿನಗಳಲ್ಲಿಯೂ ವಚನ ಸಾಹಿತ್ಯವನ್ನು ಪ್ರಕಟಿಸಿ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ಜೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ವಾಯ್. ಖಾಸನೀಸ್ ಮಾತನಾಡಿ, ಡಾ. ಫ. ಗು. ಹಳಕಟ್ಟಿ ಅವರು ವಚನ ಸಾಹಿತ್ಯದ ಪ್ರಕಟಣೆ ಹಾಗು ಪತ್ರಿಕೆಗಳ ಪ್ರಕಟಣೆಗಾಗಿ ಸ್ವಂತ ಮನೆಯನ್ನು ಮಾರಿದರು. ಅವರ ಸಮಾಜಮುಖಿ ಚಿಂತನೆಗಳು ಅನುಕರಣೀಯ ಎಂದು ತಿಳಿಸಿದರು.
ಇಂದು ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಕಾರಣವಾದ ಬಿಎಲ್‍ಡಿಈ ಸಂಸ್ಥೆಯ ಸ್ಥಾಪನೆಯಲ್ಲಿ ಇವರ ಪಾತ್ರ ಪ್ರಮುಖವಾದದ್ದು ಎಂದರು.
ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಉಪನ್ಯಾಸ ನೀಡಿ, ಮುಂಬಯಿ ವಿಶ್ವ ವಿದ್ಯಾಲಯದ ಸಿನೇಟ ಸದಸ್ಯತ್ವ, ವಿಜಯಪುರ ನಗರಸಭೆಯ ಅಧ್ಯಕ್ಷತೆ ಹಾಗೂ ವಿಧಾನ ಪರಿಷತ್ ಸದಸ್ಯರಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಿ ಜನಸಾಮಾನ್ಯರಿಗೆ ತಲುಪುವಂತಹ ಮಾದರಿ ಆಡಳಿತವನ್ನು ನಡೆಸಿದರು. ಮರಾಠಿ ಪ್ರಾಬಲ್ಯ ಪ್ರದೇಶಗಳಲ್ಲಿ ವಚನ ಸಾಹಿತ್ಯ ಚಳವಳಿಯ ಮೂಲಕ ಕನ್ನಡದ ಘನತೆಯನ್ನು ಹೆಚ್ಚಿಸಿದರೆಂದರು.
ಪೆÇ್ರ. ಸುಭಾಸಚಂದ್ರ ಕನ್ನೂರ ಮುಖ್ಯ ಅತಿಥಿಗಳಾಗಿ ಮಾತನಾಡಿ, ಬರಗಾಲ ನಿವಾರಣಾ ಕೇಂದ್ರ, ನೇಕಾರರ ಸಂಘ, ಒಕ್ಕಲಿಗರ ಸಂಘದ, ಭೂತನಾಳ ಕೆರೆ ನಿರ್ಮಾಣ, ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಸ್ಥಾಪಿಸುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಕಾರ್ಯ ಮಾಡಿದರು.
ಅಥಣಿ ತರಳಬಾಳು ಶ್ರೀಗಳು ಮಾತನಾಡಿ, ಬಬಲೇಶ್ವರದ ಶ್ರೀಗಳು ಹಳಕಟ್ಟಿಯವರ ವಚನ ಸಾಹಿತ್ಯದ ಸೇವೆಗೆ ಪೆÇ್ರೀತ್ಸಾಹ ನೀಡಿದರು. ಎಂದರು.
ಅಕ್ಷತಾ ಸಂಗಾಪೂರ ಸ್ವಾಗತಿಸಿದರು. ಭಾಗಶ್ರೀ ಕೋಟ್ಯಾಳ ನಿರೂಪಿಸಿದರು. ಪ್ರಾಧ್ಯಾಪಕ ಡಾ. ಎಂ.ಬಿ. ಕೋರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ಜೆ.ಎಸ್. ಪಾಟೀಲ, ಡಾ. ಪಿ.ಡಿ. ಮುಲ್ತಾನಿ, ಡಾ. ಬಿ.ಎಸ್. ಹಿರೇಮಠ, ಡಾ. ಎಸ್.ಪಿ. ಶಿವಗುಣಶಿ, ಪ್ರಶಿಕ್ಷಣಾರ್ಥಿಗಳಾದ ಕಾಶಿನಾಥ ಹಿರೇಮಠ, ರಾಜು ಗೇರಡೆ, ಮಲ್ಲಿಕಾರ್ಜುನ ಮಾಂಗ, ಶ್ರೀದೇವಿ ಹಳ್ಳಿ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.