ದೇಶೀಯ ಆಹಾರ ಪದ್ಧತಿಗಳು ಉತ್ತಮ ಆರೋಗ್ಯಕ್ಕೆ ಪೂರಕ: ಕ್ಯಾ. ಎಸ್.ಬಿ. ಪಾಟೀಲ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.9:ಉತ್ತಮ ಆಹಾರ ಮತ್ತು ಭಾರತೀಯ ಸಂಸ್ಕøತಿಗಳು ನಮ್ಮ ವ್ಯಕ್ತಿತ್ವ ಪರಿಪೂರ್ಣತೆಗೆ ಪೂರಕವಾಗಿದೆ. ಸಿರಿಧಾನ್ಯಗಳು, ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸುವುದರಿಂದ ಉತ್ತಮ ದೈಹಿಕ ಮತ್ತು ಮಾನಸಿಕ ಸದೃಢತೆ ಹೊಂದಬಹುದು ಎಂದು ಎನ್.ಸಿ.ಸಿ ಅಧಿಕಾರಿ ಕ್ಯಾಪ್ಟನ್ ಎಸ್,ಬಿ. ಪಾಟೀಲ ಹೇಳಿದರು.
ನಗರದ ಪ್ರತಿಷ್ಠಿತ ಎ.ಎಸ್.ಪಿ ವಾಣಿಜ್ಯ ಮಹಾವಿದ್ಯಾಲಯದಲಿ ್ಲಬಿಕಾಂ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳು ಹಮ್ಮಿಕೊಂಡ ಫ್ಲೇವರ್ಫೆಸ್ಟ್ 2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪೌಷ್ಟಿಕಾಂಶ, ಆರೋಗ್ಯಕ್ಕೆ ಯೋಗ್ಯವಾದ ಆಹಾರವನ್ನು ಸೇವಿಸಬೇಕು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ದೇಶಿಯ ಸಂಸ್ಕೃತಿ, ದೇಶಿಯ ಆಹಾರ ಪದ್ಧತಿಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಆಹಾರಗಳು, ಪಾನೀಯಗಳು, ದೇಶಿಯ ಉತ್ಪಾದನೆಗಳನ್ನು ಹಾಗೂ ಗ್ರಾಮೀಣ ಕ್ರೀಡೆಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು ತಾವೇ ತಯಾರಿಸಿದ ಪದಾರ್ಥಗಳನ್ನು ಮಾರಾಟ ಮಾಡುವ ಮೂಲಕ, ಜೀವನದಲ್ಲಿ ಉತ್ತಮ ವ್ಯಾಪಾರಸ್ಥರಾಗಬಹುದು ಎಂದು ತಿಳಿದುಕೊಂಡರು.
ಪ್ರಾಚಾರ್ಯ ಪೆÇ್ರಬಿ.ಎಸ್. ಬೆಳಗಲಿ ಅಧÀ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪೆÇ್ರ. ರಶ್ಮಿ ಪಾಟೀಲ, ಪೆÇ್ರ. ವಿಜಯಕುಮಾರ, ಪೆÇ್ರ. ವೀಣಾ ಮೋರೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.