ಕಟ್ಟ ಕಡೆಯ ವ್ಯಕ್ತಿಯನ್ನು ಕಾಪಾಡುತ್ತಿರುವದು ಸಂವಿಧಾನ: ಎಸ್ಪಿ ರವಿಂದ್ರ ಕೆ. ಗಡಾದೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.9:ಡಾ.ಬಾಬಾಸಾಹೇಬ ಅಂಬೇಡ್ಕರ್ ರವರು ಬದುಕಿದ್ದಾಗಲೂ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಡೆಗೆ ಇದ್ದರು. ಅವರ ಸಾವಿನ ನಂತರವೂ ಬಡವರನ್ನು ನಿಕೃಷ್ಟರನ್ನು ಕಟ್ಟ ಕಡೆಯ ವ್ಯಕ್ತಿಯನ್ನು ಕಾಪಾಡುತ್ತಿರುವದು ಬಾಬಾ ಸಾಹೇಬರು ಬರೆದ ಸಂವಿಧಾನವೇ ವಿನಃ ಯಾವ ವ್ಯಕ್ತಿಯೂ ಅಲ್ಲ, ಸರಕಾರವೂ ಅಲ್ಲ ಎಂದು ಬೆಳಗಾವಿಯ ಎಸ್ಪಿ ರವೀಂದ್ರ ಕೆ. ಗಡಾದೆ ಹೇಳೀದರು.
ನಗರದ ಕಂದಗಲ್ ಹನುಮಂತರಾಯ ರಂಗ ಮಂದಿರದಲ್ಲಿ ಕರ್ನಾಟಕ ರಾಜ್ಯ ಚಲವಾದಿ ಸರಕಾರಿ ನೌಕರರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನಮ್ಮೆಲ್ಲರ ಬದುಕಿಗೆ ಆಧಾರ ಸ್ತಂಬ ಆಗಿರುವ ಸಂವಿಧಾನವನ್ನು ಇಂದು ನಾವೆಲ್ಲರೂ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಆ ನಿಟ್ಟಿನಲ್ಲಿ ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಹೋಗೋಣ ಎಂದು ಹೇಳಿದರು.
ಬೆಳಗಾವಿ ಹೆಸ್ಕಾಂ ಲೆಕ್ಕ ನಿಯಂತ್ರಣಾಧಿಕಾರಿ ಸುರೇಶ ಎ.ಸಿಂಧೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯುಗದಲ್ಲಿ ಪೂರ್ವಾಗ್ರಹ ಪೀಡಿತ ಸಾಹಿತ್ಯವನ್ನು ಓದದೆ. ಅತೀ ಹೆಚ್ಚು ಮೊಬೈಲ್ ಬಳಸದೆ ಧನಾತ್ಮಕ ಸಾಹಿತ್ಯವನ್ನು ಓದುವುದರ ಮೂಲಕ ಬದುಕು ಮತ್ತು ಸಮಾಜವನ್ನು ಸರಿದಾರಿಗೆ ತರಬಹುದಾಗಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕಲಬುರಗಿಯ ಪೂಜ್ಯ ನಾಗರತ್ನ ಬಂತೆಜೀ ಅವರು ವಹಿಸಿದ್ದರು. ಬುದ್ದ, ಬಸವ, ಅಂಬೇಡ್ಕರ್ ಭಾವಚಿತ್ರಕ್ಕೆ ಶಹಬಾದ ತಹಸೀಲ್ದಾರ ಜಗದೀಶ ಔರ ಪೂಜೆ ನೆರವೇರಿಸಿದರು.
ಆಯುಷ್ ನಿರ್ದೇಶನಾಲಯದ ಉಪ ನಿರ್ದೇಶಕಿ ಅನುರಾಧಾ ಎಲ್. ಚಂಚಲಕರ, ವಿಜಯಪುರ ಜಾರಿ ನಿರ್ದೇಶನಾಲಯದ ಡಿವೈಎಸ್‍ಪಿ ಸುನೀಲ ಕಾಂಬಳೆ ಅವರು ಜ್ಯೋತಿ ಬೆಳಗಿಸಿದರು.
ಹಿರಗಪ್ಪ ಬ. ಸಿಂಗ್ಯಾಗೋಳ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಡಾ. ಅಪ್ಪಗೆರೆ ಸೋಮಶೇಖರ, ಅಂಚೆ ಅಧೀಕ್ಷಕÀ ಚಂದ್ರಕಾಂತ ಜಿ. ಕಾಂಬಳೆ, ಪೊಲೀಸ್ ಇನ್ಸಪೆಕ್ಟರ್ ಶಿವಲಿಂಗ ಕುರೆನ್ನವರ, ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಡಾ. ರಮೇಶ ಕಾಂಬಳೆ, ವಕೀಲರಾದ ಬಹುಸಾಹೇಬ ಕಾಂಬಳೆ, ಮುದ್ದಣ್ಣ ಭೀಮನಗರ, ರಾವಸಾಹೇಬ ಗವಾರಿ, ಬಸವರಾಜ ಚಲವಾದಿ, ಪ್ರೊ. ಸುಜಾತಾ ಚಲವಾದಿ, ಚಿದಾನಂದ ಎಂ. ಕಾಂಬಳೆ, ಕರ್ನಾಟಕ ರಾಜ್ಯ ಚಲವಾದಿ ಸರಕಾರಿ ನೌಕರರ ಸಂಘಟನೆಯ ರಾಜ್ಯಾದ್ಯಕ್ಷ ಚಿದಾನಂದ ಎಮ್. ಕಾಂಬಳೆ, ರಾಜ್ಯ ಹಿರಿಯ ಉಪಾಧ್ಯಕ್ಷ ಅರವಿಂದ ವಾಯ್. ಲಂಬು, ರಾಜ್ಯ ಉಪಾಧ್ಯಕ್ಷ ರವಿಕಾಂತ ಸಿ. ಎಮ್., ರಾಜ್ಯ ಪ್ರಧಾನ ಕಾರ್ಯದರ್ಶಿ ರಾಕೇಶ ಅರ್. ಇಂಗಳಗಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಹೆಚ್.ಬಿ. ಸಿಂಗ್ಯಾಗೋಳ, ರಾಜ್ಯ ಸಹ ಕಾರ್ಯದರ್ಶಿಗಳಾದ ರವೀಂದ್ರ ಶಿವಯಗೋಳ, ದುರ್ಗಪ್ಪ ಚಲವಾದಿ, ರಾಜ್ಯ ಸಂಚಾಲಕ ಮೋಹನ ಬಿ. ಗುನ್ನಾಪುರ, ರಾಜ್ಯ ಸಂಚಾಲಕಿ ಚಂಚಲಕರ, ಖಜಾಂಚಿ ಸುರೇಶ ದಲ್ಲಾರಿ, ರಾಜ್ಯ ನಿರ್ದೇಶಕರಾದ ಶಿವಾನಂದ ಕಟ್ಟಿಮನಿ, ಪುನೀತಕುಮಾರ, ಕುಮಾರ ಬಾಗೇವಾಡಿ, ರಮೇಶ ಅರ್. ಪಿರಗಾ, ಆಂಜನೇಯಸ್ವಾಮಿ ಹೊಸಮನಿ, ಪಿ.ಎಸ್. ಧರಣಾಕರ, ರವೀಂದ್ರ ಇರಸೂರ, ಯುವರಾಜ ನಾಟೀಕಾರ, ಸಿ.ಕೆ. ಕಾಂಬಳೆ ಇತರರು ಉಪಸ್ಥಿತರಿದ್ದರು.
ರಾಕೇಶ ಆರ್. ಇಂಗಳಗಿ ಸ್ವಾಗತಿಸಿದರು. ಶಶಿಕಾಂತ ಹಾದಿಮನಿ ನಿರೂಪಿಸಿದರು. ಡಾ. ಅರವಿಂದ ಲಂಬು ವಂದಿಸಿದರು.