ಗ್ಯಾರಂಟಿ ಯೋಜನೆಗಳು ಬಡ ಜನರ ಮನೆ ಬಾಗಿಲಿಗೆ ಮುಟ್ಟಿಸುವ ಕಾರ್ಯ ಮಾಡಿ
ಸಂಜೆವಾಣಿ ವಾರ್ತೆ
ಹುಮನಾಬಾದ್:ಜು.9: ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಸುವ ಕಾರ್ಯ ತಾಲೂಕ ಮಟ್ಟದ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ತಾಲೂಕ ಅಧ್ಯಕ್ಷ ಅಫ್ಸರಮಿಯ ಹೇಳಿದರು.
ಪಟ್ಟಣದ ತಾಪಂ. ಕಚೇರಿ ಆವರಣದಲ್ಲಿ ಸೋಮವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆ ಉದ್ದೇಶಿ ಮಾತನಾಡಿದರು.
ಸರ್ಕಾರ ಜಾರಿಗೆ ತಂದ ಪಂಚ ಗಾರಂಟಿಗಳಿಂದಾಗಿ ರಾಜ್ಯದ ಜನತೆ ಸಂತಸದಲ್ಲಿದ್ದಾರೆ. ಶಕ್ತಿ ಯೋಜನೆ ಮಹಿಳೆಯರು ರಾಜ್ಯದ ಮೂಲೆಮೂಲೆಗಳಿಗೆ ಉಚಿತ ಪ್ರವಾಸ ಮಾಡುತಿದ್ದಾರೆ.
ಉಚಿತ ವಿದ್ಯುತ್ ಪೂರೈಕೆಯಿಂದ ಜನರು ಸಾಕಷ್ಟು
ಪ್ರಯೋಜನ ಪಡೆಯುತ್ತಿದ್ದಾರೆ. ಅನ್ನಭಾಗ್ಯ ಯೋಜನೆ
ಅಕ್ಕಿ ಜತೆಗೆ ಮಾಸಿಕ ಅಕ್ಕಿ ಹಣ ಫಲಾನುಭವಿಗಳ ಖಾತೆಗೆ
ಜಮಾ ಆಗುತ್ತಿದೆ. ಇನ್ನೂ ಯುವ ನಿಧಿ ಸಹ ಚಾಲ್ತಿಯಲ್ಲಿದೆ ಆದರೇ ಸಣ್ಣಪುಟ್ಟ ಸಮಸ್ಯೆಗಳಿಂದಾಗಿ ಇನ್ನೂ ಸಾಕಷ್ಟು ಜನರಿಗೆ ಕೆಲ ಗ್ಯಾರಂಟಿಗಳ ಸೌಲಭ್ಯ ದಕ್ಕುತ್ತಿಲ್ಲ.
ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವಿಷಯ ಗಂಭೀರ ಪರಿಗಣಿಸಿ, ಯಾವ ಕಾರಣಕ್ಕಾಗಿ ಸೌಲಭ್ಯ ದಕ್ಕುತ್ತಿಲ್ಲ.ಅದಕ್ಕಾಗಿ ಏನು ಮಾಡಬೇಕೆಂಬ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವಂತಹ ಕೆಲಸ ಆಯಾ ಇಲಾಖೆಗಳು ಮಾಡಬೇಕು ಎಂದು ಸೂಚಿಸಿದರು. ಈ ಬಾರಿ ಪ್ರಾಸ್ತಾಪ ಆಗಿರುವ ಎಲ್ಲ ಸಮಸ್ಯೆಗಳಿಗೆ ಮುಂದಿನ ಸಭೆ ಹೊತ್ತಿಗೆ ಪರಿಹಾರ ಹುಡುಕಿಕೊಂಡು ಬರುವಂತೆ ಸೂಚಿಸಿದರು.
ಪಡಿತರ ನೋಂದಣಿಯಲ್ಲಿ ಫಿಪ್ಪಿ-ಫಿಪ್ಪಿ: ಪಡಿತರ ಚೀಟಿ ನೋಡಣಿ ನಿಯಮಾನುಸಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿಯಲ್ಲಿ ನೋಂದಣಿಯಾಗಬೇಕು.
ಆದರೇ ಅಲ್ಲಿನ ಅಧಿಕಾರಿಗಳು ಸ್ಪಂದಿಸದ ಕಾರಣ ಅವರು ಸೂಚಿಸಿದ ಸ್ಥಳಕ್ಕೆ ಹೋಗಿ ನೋಂದಣಿ ಮಾಡುವುದು ಅನಿವಾರ್ಯವಾಗಿದೆ. ಹಾಗೆ ಬರುವ ಹಣದಲ್ಲಿ ಅಧಿಕಾರಿ ಮತ್ತು ದಲ್ಲಾಳಿಗೆ ಫಿಪ್ಪಿ-ಫಿಪ್ಪಿ ಪಾಲಿದೆಆ ಕುರಿತು ತನಿಖೆಯಾಗಬೇಕೆಂದು ಪತ್ರಕರ್ತರು ವಿಷಯ ಪ್ರಸ್ತಾಪಿಸಿ ಅಧ್ಯಕರ ಗಮನಸೆಳೆದರು. ಕೆಲವರು ಅದನ್ನೇ ಉದ್ಯೋಗವಾಗಿ ಮಾಡಿಕೊಂಡಿದ್ದಾರೆಂಬ ಆರೋಪವೂ ಕೇಳಿಬಂತು.
ಈ ಸಂದರ್ಭದಲ್ಲಿ ತಾಪಂ. ಇಒ ದೀಪಿಕಾ ನಾಯಕ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಸುರೇಖಾ ರೆಡ್ಡಿ, ಗುಂಡಾರೆಡ್ಡಿ ರಂಗಾರೆಡ್ಡಿ, ಸೇರಿ ತಾಲೂಕ ಮಟ್ಟದ ಅಧಿಕಾರಿಗಳು ಇದ್ದರು.