ಹಲ್ಲಿನ ಜಾಗೃತಿ ಮತ್ತು ಉಚಿತ ಹಲ್ಲುಗಳ ತಪಾಸಣೆ ಶಿಬಿರ
ಇಂಡಿ:ಜು.9: ಹಲ್ಲಿನ ರಕ್ಷಣೆ ನಮ್ಮ ದೇಹದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬಿರುತ್ತವೆ. ಒಬ್ಬ ವ್ಯಕ್ತಿಯ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಪೂರಕ ವಾಗಿರಲು ಸುದೃಡ ಮತ್ತು ಸ್ವಚ್ಛವಾದ ಹಲ್ಲುಗಳು ಅತಿ ಅವಶ್ಯಕ ಎಂದು ದಂತ ವೈದ್ಯ ಅಕ್ಷಯ ಬಿರಾದಾರ ಹೇಳಿದರು.
ಪಟ್ಟಣದ ಸಿ.ವಿ.ರಾಮನ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಹಲ್ಲು ಮತ್ತು ಹಲ್ಲಿನ ಸುರಕ್ಷತೆ ಕುರಿತು ನಡೆದ ಹಲ್ಲಿನ ಜಾಗೃತಿ ಮತ್ತು ಉಚಿತ ಹಲ್ಲುಗಳ ತಪಾಸಣೆ ಶಿಬಿರದಲ್ಲಿ ಮಾತನಾಡುತ್ತಿದ್ದರು.
ಹಲ್ಲಿನ ಸ್ಥಿತಿಗತಿ ವಿವರಿಸಿದ ಅವರು ಹಲ್ಲಿನ ಆರೋಗ್ಯ ಮತ್ತು ಕೈಕೊಳ್ಳಬೇಕಾದ ಮುಂಜಾಗ್ರತೆ ಕುರಿತು ವಿವರಿಸಿದರು.
ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಕಾಮಗೊಂಡ ದೀರ್ಘಾಯುಷ ಹೊಂದಲು ಹಲ್ಲಿನ ಮಹತ್ವವನ್ನು ತಿಳಿಸಿದರು.
ಶಿಬಿರದಲ್ಲಿ 150 ಮಕ್ಕಳ ಹಲ್ಲುಗಳನ್ನು ತಪಾಸಣೆ ಮಾಡಲಾಯಿತು.
ವಿದ್ಯಾರ್ಥಿನಿ ಅಕ್ಕಮ್ಮ ಗೋಳಗಿ, ಸ್ಹೇಹ ರಾಠೋಡ, ಮತ್ತು ಸಾಕ್ಷಿ ಜಿಡ್ಡಗಿ ಕಾರ್ಯಕ್ರಮ ಕುರಿತು ಮಾತನಾಡಿದರು.
ಸಂಸ್ಥೆಯ ವಧಮಾನ ಮಹಾವೀರ,ಶೈಲೇಶ ಬೀಳಗಿ, ಸನ್ಮತಿ ಹಳ್ಳಿ, ಪ್ರಸನ್ನಕುಮಾರ ನಾಡಗೌಡ, ಶೋಭಾ ನಾರಾಯಣಕರ, ಶಿಕ್ಷಕರಾದ ರಾಮನಗೌಡ ನಾದ,ಸದ್ದಾಂ ಗಂಗೂರ, ಚಂದ್ರಕಾಂತ ಬಿರಾದಾರ ಮತ್ತಿತರಿದ್ದರು.