ಅಕ್ರಮ ವಿಂಡ್ ಫ್ಯಾನ್ ಕಾಮಗಾರಿ ಸ್ಥಗಿತಗೊಳ್ಳಿಸುಂತೆ ತಹಶೀಲ್ದಾರ್ ಗೆ ನೋಟೀಸ್..!
ಜಗಳೂರು.ಜು.೯; ತಾಲೂಕಿನಲ್ಲಿ ಅಕ್ರಮ ವಿಂಡ್ ಫ್ಯಾನ್ ಅಳವಡಿಕೆ ಕುರಿತು ದೂರು ನೀಡಿದ ಹಿನ್ನಲೆ ವಿಂಡ್ ಫ್ಯಾನ್ ಅಳವಡಿಕೆ ಸ್ಥಗಿತಗೊಳಳಿಸುವಂತೆ ಉಪ ವಿಭಾಗಾಧಿಕಾರಿಗಳು ತಹಸೀಲ್ದಾ ರ್ ಗೆ ನೋಟಿಸ್ ನೀಡಿದರು, ತಹಸೀಲ್ದಾರ್ ಈ ನೋಟಿಸ್ ನ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಮೀನಾ ಮೇಷ ಹೌದು ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮ ವ್ಯಾಪ್ತಿಯ ಸರ್ವೇ ನಂಬರ್ 34 ರಲ್ಲಿ ಅನಾಧಿಕೃತ ವಿಂಡ್ ಫ್ಯಾನ್ ಅಳವಡಿಕೆ ವಿರುದ್ಧವಾಗಿ ಅದೇ ಗ್ರಾಮದ ಮುಖಂಡ ರೊಬ್ಬರು ತಹಸೀಲ್ದಾರ್ ಗೆ ಕಾಮಗಾರಿ ತಡೆ ಹಿಡಿದು ಫ್ಯಾನ್ ಸೀಜ್ ಮಾಡಲು 14-05-2024 ರಂದು ದೂರು ನೀಡಿದ್ದರು ಆದರೆ ತಹಸೀಲ್ದಾರ್ ಯಾವುದೇ ಕ್ರಮ ಕೈಗೊಳ್ಳದೆ ಇರುವುದ್ದ ರಿಂದ ಉಪ ವಿಭಾಗಾಧಿಕಾರಿಗಳಿಗೆ ದೂರು ನೀಡಿದರು.ಈ ಹಿನ್ನಲೆ ಉಪವಿಭಾಗಾಧಿಕಾರಿ ದುರ್ಗಾಶ್ರೀ ಅವರು ಜೂನ್ 19 ರಂದೇ ತಕ್ಷಣ ಅನಾಧಿಕೃತ ವಿಂಡ್ ಫ್ಯಾನ್ ತಡೆಯಿಡಿಯು ವಂತೆ ತಹಸೀಲ್ದಾರ್ ಗೆ ನೋಟಿಸ್ ನೀಡಿದ್ದರು ಆದರೆ ತಹಸೀಲ್ದಾರ್ ನೋಟೀಸ್ ನೀಡಿ 15 ದಿನಗಳು ಕಳೆಯುತ್ತ ಬಂದರು ಕ್ರಮಕೈಗೊಳ್ಳದೆ ಇರುವುದು ಅನುಮಾನಕ್ಕೆ ಎಡೆ ಮಾಡಿದೆ ಅಲ್ಲದೇ ಹಿರಿಯ ಶ್ರೇಣಿಯ ಅಧಿಕಾರಿಗಳ ನೋಟಿಸ್ ಗೆ ಕ್ಯಾರೆ ಎನ್ನದೆ ತಾಲೂಕು ಆಡಳಿತದ ತಹಸಿಲ್ದಾರ್ ಸಬುಬು ಹೇಳುತ್ತಾರೆ ಕರ್ನಾಟಕ ಭೂ ಕಂದಾಯ ಅಧಿನಿಯಗಳನ್ನು ಗಾಳಿಗೆ ತೋರಿ ಕ್ಲೀನ್ ಮ್ಯಾಕ್ಸ್ ಕಂಪನಿಯು ವಿಂಡ್ ಫ್ಯಾನ್ ಅಳವಡಿಕೆ ಮಾಡಿದ್ದಾರೆ.ಅಲ್ಲದೆ ಭೂ ಪರಿವರ್ತನೆಯಾಗದೆ ಭೂಮಿ ಒಡಲನ್ನು ಅಳವಾಗಿ ಅಗೆದು ಮಣ್ಣನ್ನು ತೆಗೆದು ಅಳವಡಿಕೆ ಮಾಡಿದ್ದಾರೆ.ಅಲ್ಲದೇ ಈ ಹಿಂದೆ ಇದ್ದ ತಹಸೀಲ್ದಾರ್ ನೋಟೀಸ್ ಮೂಲಕ 7 ದಿನಗಳ ಒಳಗೆ ಭೂ ಪರಿವರ್ತನೆ ಯಾದ ದಾಖಲೆಯನ್ನು ನೀಡಿ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ನೋಟಿಸ್ ನೀಡಿ 30 ದಿನ ಕಳೆದರು ಯಾವ ದಾಖಲೆಗಳನ್ನು ಒದಗಿಸಿರಲಿಲ್ಲ. ಕರ್ನಾಟಕ ಭೂ ಕಂದಾಯ ಅಧಿನಿಯಮ ಅನ್ವಯ 1964 ಕಲಂ 192 (ಎ) ಪ್ರಕಾರ ಯಾವುದೇ ದಾಖಲೆ ಒದಗಿಸದೆ ಇದ್ದರೆ ಕ್ರಮ ಕೈಗೊಳ್ಳಲು ಅವಕಾಶವಿದ್ದರು ಕ್ರಮಕ್ಕೆ ಮುಂದಾಗಿಲ್ಲ. ಅಕ್ಕ- ಪಕ್ಕದ ಜಮೀನಿನ ರೈತರಾದ ನಾವುಗಳು ಕುರಿ- ಮೇಕೆ ಸಾಕಾಣಿಕೆ ಹಾಗೂ ಕೋಳಿ ಸಾಕಣಿಕೆ ಮಾಡುವ ಉದ್ದೇಶಹೊಂದಿದ್ದು, ಪ್ರಾಣಿ ಸಾಕಾಣಿಕೆಗೆ ಫ್ಯಾನ್ ಶಬ್ದ ವ್ಯತಿ ರಿಕ್ತ ಪರಿಣಾಮ ಬೀರುತ್ತಿದ್ದು,ವಿಂಡ್ ಫ್ಯಾನ್ ಸ್ಥಾವರ ಕಾರ್ಯ ಸ್ಥಗಿತಗೊಳಿಸಲು ಉಪವಿಭಾಗಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.ರೈತ ಸಂಘಟನೆಗಳು ಖಾಸಗಿ ವಿಂಡ್ ಫ್ಯಾನ್ ಮತ್ತು ಸೋಲಾರ್ ಕಂಪನಿಗಳ ವಿರುದ್ಧ ಹೋರಾಟ ಮಾಡಿದ ಸುದ್ದಿ ಗಳನ್ನು ದಿನ ಪತ್ರಿಕೆಯಲ್ಲಿ ವರದಿಗಾರರು ಸರಣಿ ಸುದ್ದಿಗಳನ್ನು ಬರೆದರೂ ಕೂಡ ಈ ಹಿಂದೆ ಇದ್ದ ಜಿಲ್ಲಾ ದಂಡಾಧಿಕಾರಿಗಳು. ಸೌಜನ್ಯಕ್ಕಾದರೂ ಜಗಳೂರು ತಾಲೂಕಿಗೆ ಭೇಟಿ ನೀಡಿ ರೈತರ ಮತ್ತು ಹೋರಾಟಗಾರರ ಸಭೆ ಕರೆದು ಗೋಳು ಕೇಳಲೇ ಇಲ್ಲ ಜಿಲ್ಲಾ ಉಪವಿಭಾಗದ ಅಧಿಕಾರಿಗಳು ತಾಲೂಕಿಗೆ ಭೇಟಿ ನೀಡಿ ದರು ಕೂಡ ರೈತರು ನೀಡಿದ ದೂರುಗಳಿಗೆ ಸ್ಥಳ ಪರಿಶೀಲನೆ ಮಾಡದೆ ಕಚೇರಿ ಕೆಲಸ ಮುಗಿಸಿ ಇದು ನಮಗೆ ಸಂಬಂಧವಿಲ್ಲ ಎಂಬಂತೆ ಇದ್ದಾರೆ ಹಾಗಾದರೆ ಸರ್ಕಾರಿ ಆಸ್ತಿಗಳಾದ ಕೆರೆ. ಗೋಮಾಳ.ಸರ್ಕಾರಿ ಖರಾಬ್ ಸೇರಿದಂತೆ ಸರಕಾರಿ ಆಸ್ತಿಯ ನ್ನು ರಕ್ಷಣೆ ಮಾಡುವುದು ಯಾರ ಜವಾಬ್ದಾರಿ ಈ ಸ್ಥಳಗಳಲ್ಲಿ ಯಾವ ಖಾಸಗಿ ಕಂಪನಿಯೂ ಬೇಕಾದರೂ ಸರ್ಕಾರಿ ನಿಯಮ ಗಳನ್ನು ಗಾಳಿಗೆ ತೂರಿ ಏನು ಬೇಕಾದರೂ ಮಾಡಬಹುದ ಹಾಗಾದರೆ ಇದಕ್ಕೆ ಕ್ರಮ ಕೈಗೊಳ್ಳುವವರು ಯಾರು …?ಹಿರೇಮಲ್ಲನಹೊಳೆ ಗ್ರಾಮದ ಕೆರೆಯಲ್ಲಿ ಐದು ವಿಂಡ್ ಫ್ಯಾನ್‌ ಗಳ ವಿದ್ಯುತ್ ಉತ್ಪಾದನೆ ಹಾದು ಹೋಗುವುದಕ್ಕೆ ಕೆರೆ ಅಂಗಳ ದಲ್ಲಿ 27 ಕ್ಕೂ ಹೆಚ್ಚು ವಿದ್ಯುತ್ ಕಂಬಳನ್ನು ಅಳವಡಿಯ ಕಾರ್ಯವನ್ನು ಮುಂದುವರಿಸಿದೆ. ಸರ್ಕಾರದ ಅನುಮತಿ ಇಲ್ಲದೆ ವಿದ್ಯುತ್ ಕಂಬಗಳನ್ನು ಹಾಕಿರು ವುದು ಕಾನೂನು ಉಲ್ಲಘಂನೆ ಯಾಗಿದ್ದು,ಕೆರೆ ಅಂಗಳದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿ ಕೆ ಮಾಡಲು ಅನುಮತಿ ಯಾರು ನೀಡಿದ್ದಾರೆ ಎಂದು ಸೂಕ್ತ ದಾಖಲೆಗಳನ್ನು ಕ್ಲೀನ್ ಮ್ಯಾಕ್ಸ್ ಕಂಪನಿ ನಮ್ಮ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ ಅಲ್ಲದೆ ಅನುಮತಿ ಇಲ್ಲದೆ ವಿದ್ಯುತ್ ಕಂಬ ಹಾಕಿದ್ದಲ್ಲಿ ಒಂದು ವಾರದ ಒಳಗಡೆ ಕೆರೆಯಿಂದ ವಿದ್ಯುತ್ ಕಂಬಗಳನ್ನು ತೆಗೆದು ಹಾಕಲು ಸೂಚಿಸಲಾಗಿದೆ.