ದೂರು ನೀಡಿದರು ಕ್ರಮ ಕೈಗೊಳ್ಳದ ತಾಲೂಕು ಆಡಳಿತ; ಇನ್ನಾದರೂ  ಜಗಳೂರು ರೈತರ ನೋವು ಆಲಿಸಿ..!
ಜಗಳೂರು.ಜು.೮: ಖಾಸಗಿ ವಿಂಡ್ ಫ್ಯಾನ್ ಕಂಪನಿಗಳು ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಅನಧಿಕೃತ ಅಳವಡಿಕೆ ಹಾವಳಿ ಹೆಚ್ಚುತ್ತಿದ್ದರು,ಜಿಲ್ಲಾಧಿಕಾರಿಗಳು,ಹಾಗೂ ಉಪ ವಿಭಾಗದ. ತಹಶೀಲ್ದಾರ್. ಅಧಿಕಾರಿಗಳು ಮಾತ್ರ  ನಮಗೆ ಸಂಬಂಧ ಇಲ್ಲವೆಂಬಂತೆ ಕೂತಿರುವುದು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಹಿಡಿದ ಕೈಗನ್ನಡಿ ಯಾಗಿದೆ.ಹೌದು ಜಗಳೂರು ತಾಲೂಕಿನಲ್ಲಿ ಹಲವು ವಿಂಡ್ ಫ್ಯಾನ್ ಕಂಪನಿಗಳ ಅಳವಡಿಕೆಯಿಂದ ರೈತರನ್ನು ಒಕ್ಕಲೆಬ್ಬಿಸುವ ತಂತ್ರ ಗಳನ್ನು ಮಲ್ಟಿ ನ್ಯಾಷನ್‌ನಲ್ಲಿ ಕಂಪನಿಗಳಿಂದ ನಡೆಯುತ್ತಿದ್ದರು ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.ಈ ಹಿಂದೆ ಕ್ಲೀನ್ ಮ್ಯಾಕ್ಸ್ ವಿರುದ್ಧವಾಗಿ ಅನಧಿಕೃತ ವಿಂಡ್ ಫ್ಯಾನ್ ಅಳವಡಿಕೆ ಕುರಿತು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಜಿಲ್ಲಾ ಉಪವಿಭಾಗಧಿಕಾರಿಗಳಿಗೆ ದೂರು ನೀಡಿದ್ದರು.ಆದರೆ ಈಗಾ ತಾಲೂಕಿನ ದಿಬ್ಬದ ಹಳ್ಳಿ ಸರ್ವೆ ನಂಬರ್ 18 ರಲ್ಲಿ ಕ್ಲೀನ್ ಮ್ಯಾಕ್ಸ್ ಕಂಪನಿಯು ವಿಂಡ್ ಫ್ಯಾನ ಅಳವಡಿಕೆ ಮಾಡುತ್ತಿದ್ದು,ಈ ಕಾಮಗಾರಿಯು ಅನಾಧಿಕೃತ ಹಾಗೂ ಪಕ್ಕದ ರೈತರ ಜಮೀನಿಗೆ ತೊಂದರೆ ಯಾಗುತ್ತದೆ ಎಂದು ಪಕ್ಕದ ಜಮೀನಿನ ರೈತ ಸಂದೀಪ್ ಬಿನ್ ಲೇಟ್ ರುದ್ರಪ್ಪ ಜೂನ್ 11 ಕ್ಕೆ ದೂರು ದಾಖಲಾದ ರು ಇದುವರೆಗೂ ತಾಲೂಕು ದಂಡಾಧಿಕಾರಿಗಳು ಯಾವು ದೇ ಕ್ರಮ ಕೈಗೊಂಡಿಲ್ಲ ಅಲ್ಲದೆ ದೂರಿನಲ್ಲಿ ರೈತರ ಸಮಸ್ಯೆ ಗಳನ್ನು ಪರಿಗಣಿಸದೆ ಮತ್ತು ಅಕ್ಕಪಕ್ಕದ ರೈತರಿಗೆ ಫ್ಯಾನ್ ಅಳವಡಿಕೆ ಮಾಡುವ ಕುರಿತು ನೋಟಿಸ್ ನೀಡದೆ ಹಾಗೂ ರೈತರ ಫಲವತ್ತಾದ ಕೃಷಿ ಭೂಮಿ ಇದ್ದು, ಕೃಷಿ ಯನ್ನೆ ಆಧಾರವಾಗಿ ನಂಬಿ ಜೀವನ ನಡೆಸುತ್ತಿರುವ ನಮ್ಮಗೆ ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ಪವನ ವಿದ್ಯುತ್ ಯಂತ್ರ ಅಳವಡಿಕೆ ನಿಲ್ಲಿಸಲು ದೂರು ದಾಖಲಿಸಿದ್ದಾರೆ.