ರಟಕಲ್ ವಿರಕ್ತ ಮಠದ ಸಿದ್ದರಾಮ ಮಹಾಸ್ವಾಮೀಜಿ ಲಿಂಗೈಕ್ಯ
ಕಾಳಗಿ,ಜು.8-ತಾಲೂಕಿನ ರಟಕಲ್ ವಿರಕ್ತ ಮಠದ ಸಿದ್ದರಾಮ ಮಹಾಸ್ವಾಮಿಗಳು (35) ಇಂದು ನಸುಕಿನ ಜಾವ ತೀವ್ರ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ.
ಇಂದು ಸಂಜೆ 5 ಗಂಟೆಗೆ ರಟಕಲ್ ಗ್ರಾಮದಲ್ಲಿ ಧಾರ್ಮಿಕ ವಿಧಿ-ವಿಧಾನಗಳ ಅನುಸಾರ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಠದ ಮೂಲಗಳು ತಿಳಿಸಿವೆ.
ರವಿವಾರ ರಟಕಲ್ ಗ್ರಾಮದಲ್ಲಿ ಅದ್ಧೂರಿಯಾಗಿ ನಡೆದ ವಚನ ಸಂಗಮ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿದ್ದರು. ಆರೋಗ್ಯವಾಗಿಯೇ ಇದ್ದರು. ಇಂದು ಬೆಳಿಗ್ಗೆ ಅವರು ಏಕಾಏಕಿಯಾಗಿ ಹೃದಯಾಘಾತದಿಂದ ಲಿಂಗೈಕ್ಯರಾದ ಸುದ್ದಿ ತಿಳಿದು ಆಘಾತವಾಗಿದೆ ಎಂದು ಭಕ್ತಧಿಗಳು ದು:ಖ ವ್ಯಕ್ತಪಡಿಸಿದರು.