ಗೌರವಯುತ ವೈದ್ಯ ಸೇವೆಗೆ ಡಾ.ಸಂಧ್ಯಾ ಅರ್ಹರು: ಡಾ.ರುದ್ರವಾಡಿ
ಕಲಬುರಗಿ:ಜು.8 : ವೈದ್ಯಕೀಯ ಕ್ಷೇತ್ರದಲ್ಲಿ ಜೀವನ ಮುಡುಪಾಗಿಟ್ಟು ಕೆಲಸ ಮಾಡಬೇಕಾಗುತ್ತದೆ.ವೈದ್ಯರ ಗೌರವಯುತ ಭಾವನೆಗೆ ತಕ್ಕಂತೆ ನಡೆದವರು ಡಾ.ಸಂ ಧ್ಯಾ ಕಾನೇಕರ ಸಾಧನೆ ಅನುಪಮ ಎಂದು ಕಲಬುರಗಿ ವಿಭಾಗೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹ ನಿರ್ದೇಶಕರಾದ ಡಾ.ಅಂಬಾರಾಯ ರುದ್ರವಾಡಿ ಅಭಿಮತ ಪಟ್ಟರು
ಸಿರಿಗನ್ನಡ ವೇದಿಕೆ,ರಾಷ್ಟ್ರೀಯ ಹಳಕಟ್ಟಿ ಬಳಗ,ಜನಕಲ್ಯಾಣ ಎಜ್ಯುಕೇಶನ ಆ್ಯಂಡ್ ರೂರಲ್ ಡೆವಲಪ್ ಮೆಂಟ್ ಟ್ರಸ್ಟ್‌, ಯುಥ್ ಅಡ್ವೆಂಚರ್ ಸ್ಪೋರ್ಟ್ಸ್ ಅಸೋಸಿಯೇಷನ್ ಮತ್ತು ಕರ್ನಾಟಕ ಬೌದ್ಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ಸಹಯೋಗದಲ್ಲಿ ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ ಕರ್ನಾಟಕ ರಾಜ್ಯ ಶ್ರೇಷ್ಠ ವೈದ್ಯ ಪುರಸ್ಕೃತ ಡಾ.ಸಂಧ್ಯಾ ಎಸ್.ಕಾನೇಕರ ಅವರ ಅಭಿನಂದನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು ಅವರು ಇಂತಹ ಕಾರ್ಯ ಜನೋಪಯವಾಗಲಿ ಎಂದರು
ಅಧ್ಯಕ್ಷತೆ ವಹಿಸಿದ್ದ ಸಾಹಿತಿ- ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಜಾ ಸಮಿತಿ ಸದಸ್ಯೆ ಡಾ.ಜಯ ದೇವಿ ಗಾಯಕವಾಡ ಮಾತನಾಡಿ ಬುದ್ಧ,ಬಸವ,ಅಂ ಬೇಡ್ಕರ ಅವರ ಮಾರ್ಗದಲ್ಲಿ ನಡೆದು ರೋಗಿಗಳೇ ನನ್ನ ದೇವರೆಂದು ಕಾಯಕ ಮಾಡಿ ಆಡಳಿತ ಅನುಭವ ಪ್ರೊಗ್ರಾಮ್ ಮಾಡುವ ಮೂಲಕ ಕತವ್ಯಕ್ಕೆ, ಹಡೆದ ಮನೆ ಗಂಡನ ಮನೆಗೆ ಹೂತಂದ ಡಾ.ಸಂಧ್ಯಾ ಅವರ ಕಾರ್ಯ ಅನುಕರಣೀಯವೆಂದರು ಕಲಬುರಗಿ ವಿಭಾಗ ದ ಆರೋಗ್ಯ ಇಲಾಖೆಯ ಸಹ ನಿರ್ದೇಶಕ ಡಾ.ಶರಣ ಬಸಪ್ಪ ಗಣಜಲಖೇಡರು ಶಾಂತಿ,ಸಹನೆ,ತಾಳ್ಮೆಯಿಂದ ಇಲಾಖೆಯಲ್ಕಿ ಕ್ರಿಯಾಶೀಲ ಕೆಲಸಕ್ಕೆ ಸಂದ ಗೌರವ ಎಂದರು.ನಿಜಲಿಂಗಪ್ಪ ದಂತ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಅರವಿಂದ ಮೊಲ್ಡಿ,ಎಸ್ಸಿ.,ಎಸ್ಟಿ ಸರ ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮಹೇಶ ಹುಬ್ಬಳ್ಳಿ
ವಲಯ ಮಹಾನಗರ ಸಭೆಯ ಆಯುಕ್ತ ರಮೇಶ ಪಟ್ಟೇದಾರ,ಚಿಂಚೋಳಿ ಪುರ ಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ,ಯಾದಗಿರಿ ಬಿಸಿಯೂಟದ ಅಧಿಕಾರಿ ಬಿನಾಜಿ ಸೂರ್ಯವಂಶಿ,ಡಾ.ಮಾಲಿ ಪಾಟೀಲ ಮಾತ ನಾಡಿದರು.
ವೀರಭದ್ರಯ್ಯ ಸ್ವಾಮಿ,ಸಂಪಾದಕಿ ಶೀಲಾ ತಿವಾರಿ, ಅನ್ನಪೂರ್ಣ ಡಾ.ಶ್ವೇತಾ ರಾಜಗಿರಿ,ಡಾ.ಫಮೀದಾ ಸುಲ್ತಾನ್,ಮಮತಾ ಪ್ರವೀಣ,ಅಂಬರೀಶ್, ಅಲ್ಲಮಪ್ರಭು ನಿಂಬರ್ಗಿ ಹಲವರು ಡಾ.ಸಂಧ್ಯಾ ಅವರ ಕಾರ್ಯಗಳ ಕುರಿತು ಅಭಿಪ್ರಾಯ ಹಂಚಿಕೊಂ ಡರು.
‌‌ಅಭಿನಂದಿತರಾದ ಡಾ.ಸಂಧ್ಯಾ ಕಾನೇಕರ ಮಾತ ನಾಡಿ ಈ ಎಲ್ಲಾ ಕಾರ್ಯಗಳ ಹಿಂದೆ ನನ್ನ ಇಲಾಖೆಯಿ ದೆ ನಿಮ್ಮ ಪ್ರೀತಿ-ವಿಶ್ವಾಸ,ಹಾರೈಕೆ ಸದಾ ಹೀಗೆ ಇರಲಿ ಎಂದು ಧನ್ಯವಾದ ಅರ್ಪಿಸಿದರು. ಡಾ.ಸಂಧ್ಯಾ ಸುರೇಶ ಎಸ್.ಕಾನೇಕರ ದಂಪತಿಗಳಿಗೆ ಗೌರವಿಸಲಾಯಿತು.
ಉರಿಲಿಂಗಪೆದ್ದಿಮಠದ ಪೀಠಾಧಿಪತಿ ಪೂಜ್ಯ ಪಂಚಾಕ್ಷರಿ ಸ್ವಾಮಿಜಿ,ಅಣದೂರ ಬುದ್ದ ವಿಹಾರದ ಪೂಜ್ಯ ವರ ಜ್ಯೋತಿ ಬಂತೇ ಸಾನಿಧ್ಯ ವಹಿಸಿ ಆಶೀರ್ವ ಚನ ನೀಡಿದರು.
ಡಾ.ಶೀಲಾದೇವಿ ಬಿರಾದಾರ ವಚನ ಹೇಳಿದರು
ಸಾಹಿತಿ- ಜಿಲ್ಲಾ ಸಿರಿಗನ್ನಡ ವೇದಿಕೆ ಅಧ್ಯಕ್ಷ ಡಾ.ಗವಿಸಿದ್ಧಪ್ಪ ಎಚ್.ಪಾಟೀಲ ಸ್ವಾಗತಿಸಿ-ಪ್ರಾಸ್ತಾವಿಕ ನುಡಿ ಆಡಿದರು.ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು. ನೀಲಮ್ಮ ಎಮ್ಮೆ ವಂದಿಸಿದರು ದೇವರಾಜ ಎಸ್. ಕನ್ನಡಿಗ,ಡಾ.ರಾಜಶೇಖರ ಮಾಂಗ್,ಡಾ.ಚಿದಾನಂದ ಕುಡ್ಡನ್, ಭಾಗ್ಯಶ್ರೀ, ಡಾ.ಮಂಜುನಾಥ,ಡಾ.ಶರಣಬಸಪ್ಪ ವಡ್ಡನಕೇರಿ ,ಡಾ. ಕೆ.ಎಸ್ .ಬಂಧು,ಡಾ.ಸಿದ್ಧಪ್ಪ ಹೊಸಮನಿ ಹಲವರು ಉಪಸ್ಥಿತಿ ಇದ್ದರು.