ದೇ. ಕಲ್ಲೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅರುಣಕುಮಾರ ಪಾಟೀಲ ದಿಢೀರ ಭೇಟಿ
ಅಫಜಲಪುರ ;ಜು.8: ತಾಲ್ಲೂಕಿನ ದೇಸಾಯಿ ಕಲ್ಲೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆಪಿಸಿಸಿ ಸದಸ್ಯರು ಹಾಗೂ ಹೆಚ್ಕೆಇ ಸಂಸ್ಥೆಯ ನಿರ್ದೇಶಕರಾದ ಅರುಣಕುಮಾರ ಎಂ. ವೈ. ಪಾಟೀಲ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಕುಂದು ಕೊರತೆಗಳನ್ನು ವೀಕ್ಷಿಸಿದರು.
ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಅನಧಿಕೃತ ಗೈರು ಹಾಜರಾಗಿದ್ದವರ ಬಗ್ಗೆ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿ ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತಂದು ಅನಧಿಕೃತ ಗೈರಾಗಿದ್ದವರ ಮೇಲೆ ಕ್ರಮಕೈಗೊಳ್ಳಿ ಎಂದು ಸೂಚನೆ ನೀಡಲಾಯಿತು.
ದಿನನಿತ್ಯ ಸಮಯಕ್ಕೆ ಸರಿಯಾಗಿ ಹಾಜರಾಗಿ ಜನಸಾಮಾನ್ಯರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಗಮನ ಹರಿಸಬೇಕು ಎಂದು ಪತ್ರಿಕಾ ಮಾದ್ಯಮ ಮಿತ್ರರಿಗೆ ತಿಳಿಸಿದರು.