ಹೊರ ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಮುಖ್ಯಮಂತ್ರಿಗೆ ಒತ್ತಾಯ
ವಿಜಯಪುರ,ಸೆ.27: ಮುನ್ಸಿಪಲ್ ಗುತ್ತಿಗೆ ಕಾರ್ಮಿಕರ ಖಾಯಂಮಾತಿಗಾಗಿ ನೇರ ಪಾವತಿ ಅಡಿಯಲ್ಲಿ ಸಮಾನ ವೇತನ ಜಾರಿಗೆ ತರುವ ಬಗ್ಗಹೆ ಒತ್ತಾಯಿಸಿ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ ಮುನ್ಸಿಪಲ್ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ ಹಂದ್ರಾಳ ಮಾತನಾಡಿ, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆಗಳಲ್ಲಿ. ಗುತ್ತಿಗೆ, ಹೊರ ಗುತ್ತಿಗೆ, ಆಧಾರಿತ ನೇರ ಪಾವತಿ ಪೌರಕಾರ್ಮಿಕರು, ಲೋಡರ್, ಕಸದ ಮತ್ತು ಇತರ ವಾಹನ ಚಾಲಕರು, ಸಹಾಯಕರು, ಕ್ಲಿನರ್‍ಗಳು, ಸ್ಯಾನಿಟರಿ ಸುಪರವೈಜರ್‍ಗಳು, ಪಾರ್ಕ, ಸ್ಮಶಾನ, ಯು.ಜಿ.ಡಿ, ಘನತಾಜ್ಯ ವಿಲೇವಾರಿ, ಯು.ಜಿ.ಡಿ. ನೀರು ಸಂಸ್ಕರಣಾ ಕಾರ್ಮಿಕರು, ಕಳೆದ 15-20 ವರ್ಷಗಳಿಂದ ನಿರಂತರವಾಗಿ ನಾಗರಿಕರಿಗೆ ಅಗತ್ಯವಾದ ಸ್ವಚ್ಚತೆ ಯು.ಜಿ.ಡಿ. ನಿರ್ವಾಹಣೆ ವಿಭಾಗದಲ್ಲಿ ನಿರಂತರ ಕಾರ್ಮಿಕರು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಗುತ್ತಿಗೆ, ಹೊರಗುತ್ತಿಗೆ, ಮುನ್ಸಿಪಲ್ ಕಾರ್ಮಿಕರು ಕಾಯಂಗೊಳಿಸುವ ನೇರ ಪಾವತಿ ಅಡಿಯಲ್ಲಿ ದುಡಿಯುತ್ತಿರುವ 24 ಸಾವಿರ ಪೌಕಾರ್ಮಿಕರ ಸೇವಗಳನ್ನ ಮಾತ್ರ ಕಾಯಂಗೊಳಿಸುವ ಪ್ರಕ್ರಿಯನ್ನು ನಡೆಸುತ್ತದೆ. ಇದನ್ನು ಮುನ್ಸಿಪಲ್ ಕಾರ್ಮಿಕರ ಸಂಘ ಸ್ವಾಗತಿಸುತ್ತದೆ. ಆದರೆ ಇತರ ಗುತ್ತಿಗೆ ಮುನ್ಸಿಪಲ್ ಕಾರ್ಮಿಕರ ಬಗ್ಗೆ ಯಾವುದೇ ಕ್ರಮ ವಹಿಸಿದೆ ಇರುವದು ನ್ಯಾಯ ಸಮ್ಮತವಲ್ಲ ಎಂದು ಅಭಿಪ್ರಾಯ ಪಟ್ಟರು.
ರಾಜ್ಯ ಸರಕಾರವು ಮುನ್ಸಿಪಾಲಟಿಗಳಲ್ಲಿ ದುಡಿಯುವ ಎಲ್ಲಾ ಗುತ್ತಿಗೆ, ಹೊರಗುತ್ತಿಗೆ, ಆಧಾರಿತ ಪೌರಕಾರ್ಮಿಕರು, ಒಳ ಚಂರಡಿ ಸ್ವಚ್ಚತಾ ಕಾರ್ಮಿಕರು, ಲೋಡರ್ಸ, ಕಸದ ವಾಹನ ಚಾಲಕರು, ಸಹಾಯಕರು, ಸ್ಯಾನಿಟರಿ ಸುಪರವೈಜ್‍ರಗಳು, ಪಾರ್ಕ, ಸ್ಮಶಾನ ಶೌಚಾಲಯಗಳಲ್ಲಿ, ಘನತಾಜ್ಯ ಘಟಕ, ಯು.ಜಿ.ಡಿ. ನೀರು ಸಂಸ್ಕರಣ ಘಟಕ, ಕಾರ್ಮಿಕರನ್ನ, ಮೇಲ್ವಚಾರಕರು ಎಂಬ ಅಸಬಂಧ ವಿಂಗಡಣೆಯನ್ನು ಕೈ ಬಿಟ್ಟು ಎಲ್ಲಾ ಸ್ವಚ್ಚತಾ ಕಾರ್ಮಿಕರನ್ನು, ವಾಹನ ಚಾಲಕರ ಸೇವೆಗಳನ್ನು, ಈ ತಕ್ಷಣದಿಂದ ನೇರ ಪಾವತಿ ಅಡಿಯಲ್ಲಿ ತಂದು ಸಮಾನ ವೇತನ ನೀಡಬೇಕು. ನಂತರದಲ್ಲಿ ಹಂತ ಹಂತವಾಗಿ ಕಾಯಂಗೊಳಿಸಲು ಒತ್ತಾಯಿಸಿದರು. ಒಂದೊಮ್ಮೆ ಸರ್ಕಾರ ಪೌರ ಕಾರ್ಮಿಕರ ಹೋರಾಟಕ್ಕೆ ಸ್ಪಂದಿಸದಿದ್ದರೆ ಸೆ.30ರಂದು ಮುನ್ಸಿಪಲ್ ಕಾರ್ಮಿಕರು “ವಿಧಾನ ಸೌಧ ಚಲೋ” ನಡೆಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕ ಮುಖಂಡರಾದ ದಯಾನಂದ ಅಲಿಯಾಬಾದ ಮಾತನಾಡಿ, ಎಲ್ಲಾ ಗುತ್ತಿಗೆ, ಹೊರಗುತ್ತಿಗೆ, ನೇರ ಪಾವತಿ, ಸಮಾನ ಕೆಲಸಕ್ಕೆ ಸಮಾನ ವೇತನದ ಅಡಿಯಲ್ಲಿ ದುಡಿಯುತ್ತಿರುವ ಎಲ್ಲಾ ಗುತ್ತಿಗೆ ಪೌರಕಾರ್ಮಿಕರು, ಒಳ ಚರಂಡಿ ಸ್ವಚ್ಚತಾ ಕಾರ್ಮಿಕರು, ಲೋಡರ್ಸ, ಕಸದ ವಾಹನ ಚಾಲಕರು, ಸಹಾಯಕರು,ಸ್ಯಾನಿಟರಿ ಸುಪರವೈಜರಗಳು, ಸ್ಮಶನಾ, ಘನತಾಜ್ಯ ಘಟಕ, ಶೌಚಾಲಯ, ಯು.ಜಿ.ಡಿ. ನೀರು ಸಂಸ್ಕರಣ ಘಟಕ ಕಾರ್ಮಿಕರ ಸೇವೆಗಳನ್ನು ಕಾಯಂ ಮಾಡಬೇಕು. ಖಾಯಂಗೊಳಿಸುವ ತನಕ ಎಲ್ಲಾ ಮುನ್ಸಿಪಲ್ ಕಾರ್ಮಿಕರಿಗೆ ನೇರ ಪಾವತಿ ಅಡಿಯಲ್ಲಿ ಸಂಬಳÀ ನೀಡಬೇಕು.ಸುಪ್ರೀಂಕೊರ್ಟಿನ ತಿರ್ಮಾನದಂತೆ ಎಲ್ಲಾ ಕಾರ್ಮಿಕರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮನೋಹರ ಚವ್ಹಾಣ, ರಘುನಾಥ ಪುಕಾಳೆ, ರವಿ ಲೋನಾರೆ, ಪೀರಪ್ಪ ಚಲವಾದಿ, ಅನೀಲ ಮೇಲಿನಮನಿ, ಧನಂಜಯ ನಿಂಬರಗಿ, ದಿಲೀಪ ರಣದೇವಿ, ಯಲ್ಲವ್ವ ಗೊಲ್ಲರ, ಅನೀಲ ತುಪಸುಂದರ, ಅಭೀಷೇಕ ಲಿಮಕರ, ಶಾಂತಾ ಗೊಲ್ಲರ, ಜಯಶ್ರೀ ಲಂಬು, ದಾನಪ್ಪ ಯಡಳ್ಳಿ ಮುಂತಾದವರು ಇದ್ದರು.