ಮರಗಿಡ ಬೆಳೆಸಿ ಆರೋಗ್ಯ ವೃದ್ಧಿಸಿ:ತುಪ್ಪದ
ಚಿತ್ತಾಪುರ:ಸೆ.27:ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತಲು ಮರಗಿಡಗಳನ್ನು ಬೆಳೆಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರತಿ ತುಪ್ಪದ ಅವರು ಹೇಳಿದರು.
ತಾಲೂಕಿನ ದಂಡೋತಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಚಿತ್ತಾಪುರ,ಗ್ರಾಮ ಪಂಚಾಯತ್ ಕಾರ್ಯಾಲಯ ದಂಡೋತಿ,ಅಂಗನವಾಡಿ ಕಾರ್ಯಕರ್ತೆಯರ ಮತ್ತು ಆಶಾ ಕಾರ್ಯಕರ್ತೆಯರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಪೆÇೀಷಣ ಮಾಸ ಹಾಗೂ ಪ್ರಧಾನಮಂತ್ರಿ ಮಾತೃ ವಂದನಾ ಸಪ್ತಾಹ ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪೆÇೀಷಣಾ ಮಾಸ ಕಾರ್ಯಕ್ರಮದ ಅಂಗವಾಗಿ ಪ್ರತಿ ಫಲಾನುಭವಿಗಳಿಂದ ಒಂದೊಂದು ಗಿಡ ನೇಡಲಾಗುತ್ತಿದ್ದು ತಮ್ಮ ಮಕ್ಕಳಿಗೆ ಹೇಗೆ ಲಾಲನೆ ಪಾಲನೆ ಮಾಡುತ್ತಿರೋ ಹಾಗೆಯೇ ತಾವು ನೆಟ್ಟ ಗಿಡಗಳನ್ನು ಹಾಗೆ ಪೆÇೀಷಣೆ ಮಾಡಬೇಕು ಇದರಿಂದ ನಮ್ಮ ಮುಂದಿನ ಪಿಳಿಗೆಗಳಿಗೆ ಅನುಕೂಲವಾಗುತ್ತದೆ,ಗಿಡಮರಗಳನ್ನು ಬೆಳೆಸುವುದರಿಂದ ಶುದ್ದಗಾಳಿ ದೊರೆತು ನಮ್ಮ ಆರೋಗ್ಯ ವೃದ್ಧಿ ಆಗುತ್ತದೆ.
ನಮ್ಮ ಮನೆಯ ಅಂಗಳದಲ್ಲಿ ಮತ್ತು ಮನೆಯ ಸುತ್ತಮುತ್ತಲು ಕಸಕಡ್ಡಿ ಬಿಳದಂತೆ ನೋಡಿಕೊಳ್ಳಬೇಕು ಇದರಿಂದ ಯಾವುದೇ ರೋಗ ರುಜಿನಗಳು ಬಾರದಂತೆ ತಡೆಗಟ್ಟಲು ಸಾದ್ಯವಾಗುತ್ತದೆ ಎಂದು ಫಲಾನುಭವಿಗೆ ಕಿವಿಮಾತು ಹೇಳಿದರು.
ದಂಡೋತಿ ವಲಯ ಮೇಲ್ವಿಚಾರಕಿ ಶೋಭಾ ಕಾಶೆಟ್ಟಿ ಮಾತನಾಡಿ ಕೇಂದ್ರ ಸರ್ಕಾರದಿಂದ ಅಂಗನವಾಡಿ ಕೇಂದ್ರಗಳಲ್ಲಿರುವ ಫಲಾನುಭವಿಗಳಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತಿದ್ದು ಎಲ್ಲಾ ಫಲಾನುಭವಿಗಳು ಕಡ್ಡಾಯವಾಗಿ ಪಡೆದುಕೊಂಡು ತಮ್ಮ ದೇಹದ ಪೌಷ್ಟಿಕಾಂಶವನ್ನು ವೃದ್ದಿಸಿಕೊಳ್ಳಬೇಕು ಎಂದು ತಿಳಿಸಿದರು.
ಆರೋಗ್ಯ ಇಲಾಖೆಯ ರೇಣುಕಾ ಅವರು ಕಾರ್ಯಕ್ರಮವನ್ನು ದ್ದೇಶಿಸಿ ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯರಾದ ವಿದ್ಯಾನಿಧಿ ಕವಡೆ,ದೇವಿಂದ್ರಮ್ಮ,ರಾಧಾ ಅವರು ಸರ್ಕಾರದ ಯೋಜನೆಗಳನ್ನು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ಕಿರು ನಾಟಕ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಡಾ ದಾವೂದ್ ಪಟೇಲ್,ರವೀಂದ್ರ ವಲಯ ಅಂಗನವಾಗಿ ಕಾರ್ಯಕರ್ತೆಯರಾದ ಅಕ್ಕಮಹಾದೇವಿ ಬೃಂಗಿಮಠ್, ಭಾಗ್ಯಶ್ರೀ,ಸುಮಲತಾ,ಮಹೇಬೂಬಿ, ಶ್ರೀಶಕ್ತಿ ಕೇಂದ್ರದ ವಿದ್ಯಾವತಿ,ಫಲಾನುಭವಿ ಲಕ್ಷ್ಮಿ ಸೇರಿದಂತೆ ದಂಡೋತಿ,ಕದ್ದರಗಿ,ಜೀವಣಗಿ,ಮಲಕೂಡ್ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು,ಸಹಾಯಕಿಯರು, ಫಲಾನುಭವಿಗಳು, ಮಕ್ಕಳು ಇದ್ದರು.